", "articleSection": "Infrastructure,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1751264322-Youtube-HD.00_12_08_17.Still2523~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಕೆಎಸ್ಆರ್‌ಟಿಸಿ ಬಸ್ ಗಳನ್ನು ನಿಲುಗಡೆ ಮಾಡುತ್ತಿಲ್ಲವೆಂದು ಗ್ರಾಮಸ್ಥರು ರಸ್ತೆ ತಡೆ ನಡೆಸಿ...Read more" } ", "keywords": "Chikkamagaluru free bus travel, bus stop issue Chikkamagaluru, villagers block road Chikkamagaluru, no bus stop protest, free bus scheme problems Chikkamagaluru, Chikkamagaluru public transport protest, villagers demand bus stop, road blockade Chikkamagaluru, free bus travel useless, Chikkamagaluru bus service issues", "url": "https://dashboard.publicnext.com/node" } ಚಿಕ್ಕಮಗಳೂರು: ಉಚಿತ ಬಸ್ ಪ್ರಯಾಣ ನೀಡಿ ಪ್ರಯೋಜನವೇನು? ಬಸ್ ನಿಲುಗಡೆಯೇ ಇಲ್ಲವೆಂದು ಗ್ರಾಮಸ್ಥರ ರಸ್ತೆ ತಡೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಉಚಿತ ಬಸ್ ಪ್ರಯಾಣ ನೀಡಿ ಪ್ರಯೋಜನವೇನು? ಬಸ್ ನಿಲುಗಡೆಯೇ ಇಲ್ಲವೆಂದು ಗ್ರಾಮಸ್ಥರ ರಸ್ತೆ ತಡೆ

ಚಿಕ್ಕಮಗಳೂರು: ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ಕೆಎಸ್ಆರ್‌ಟಿಸಿ ಬಸ್ ಗಳನ್ನು ನಿಲುಗಡೆ ಮಾಡುತ್ತಿಲ್ಲವೆಂದು ಗ್ರಾಮಸ್ಥರು ರಸ್ತೆ ತಡೆ ನಡೆಸಿದ್ದಾರೆ.

ಗ್ರಾಮದ ಮೂಲಕ ಚಿಕ್ಕಮಗಳೂರಿಗೆ ಹಾಸನ, ಬೆಂಗಳೂರು, ಮೈಸೂರಿಗೆ ನಿಂದ ಪ್ರತಿನಿತ್ಯ ನೂರಾರು ಬಸ್ ಗಳು ಸಂಚಾರ ನಡೆಸುತ್ತವೆ. ಆದರೆ ಗ್ರಾಮದಲ್ಲಿ ಬಸ್ ನಿಲುಗಡೆ ಇಲ್ಲದಿರುವುದರಿಂದ ಪ್ರತಿನಿತ್ಯ ಕೆಲಸಕ್ಕೆ ತೆರಳುವವರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಅಲ್ಲದೇ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದೆ ಇದರಿಂದ ಗ್ರಾಮದ ಮಹಿಳೆಯರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲವೆಂದು ರಸ್ತೆ ತಡೆ ನಡೆಸಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಗ್ರಾಮಸ್ಥರು ಪಟ್ಟು ಹಿಡಿದು ಕೂತರು, ಹೀಗಾಗಿ ಚಿಕ್ಕಮಗಳೂರು-ಬೇಲೂರು ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು.

ಅಲ್ಲದೇ ವೇಗದೂತ ಬಸ್ ಗಳನ್ನು ಗ್ರಾಮದಲ್ಲಿ ನಿಲುಗಡೆ ನೀಡುವಂತೆ ಕೆಎಸ್ಆರ್‌ಟಿಸಿ ಅಧಿಕಾರಿಗಳು ಆದೇಶಿಸಿದರು ಚಾಲಕ ಹಾಗೂ ನಿರ್ವಾಹಕರು ಇದನ್ನು ಪಾಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ತಹಶೀಲ್ದಾರ್ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಬಸ್ ನಿಲುಗಡೆಯ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ರಸ್ತೆ ತಡೆ ಕೈ ಬಿಟ್ಟಿದ್ದಾರೆ.

Edited By : Suman K
Kshetra Samachara

Kshetra Samachara

30/06/2025 11:48 am

Cinque Terre

1.42 K

Cinque Terre

0

ಸಂಬಂಧಿತ ಸುದ್ದಿ