ಲಕ್ನೋ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಬಿಜೆಪಿ ನಾಯಕನೊಬ್ಬರು ವಿವಾಹಿತ ಮಹಿಳೆಯೊಂದಿಗೆ ಅಸಭ್ಯ ಸ್ಥಿತಿಯಲ್ಲಿ ಇರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಬುಲಂದ್‌ಶಹರ್ ಜಿಲ್ಲೆಯ ಶಿಕಾರ್‌ಪುರ ಕೊತ್ವಾಲಿ ಪ್ರದೇಶದ ಕೈಲವನ್ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ರಾಜಕೀಯ ವಲಯದಲ್ಲಿ ಬೃಹತ್ ಚರ್ಚೆ ನಡೆಯುತ್ತಿದೆ. ಆರೋಪಿಯು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಸಚಿವ ರಾಹುಲ್ ವಾಲ್ಮೀಕಿ ಎಂದು ಗುರುತಿಸಲಾಗಿದ್ದು, ಇದೀಗ ಅವರು ಕ್ಷಮೆ ಕೇಳುತ್ತಿರುವ ವಿಡಿಯೋವೂ ವೈರಲ್ ಆಗಿದೆ.
ವಿಡಿಯೋದಲ್ಲಿ, ಒಳ ಉಡುಪು ಸರಿ ಮಾಡಿಕೊಂಡು ಕಾರಿನಿಂದ ಹೊರಬರುವ ರಾಹುಲ್, ಗ್ರಾಮಸ್ಥರ ಕಾಲಿಗೆ ನಮಸ್ಕರಿಸಿ ಕ್ಷಮೆ ಕೇಳುತ್ತಿರುವುದು ಕಾಣಿಸುತ್ತಿದೆ. ಗ್ರಾಮಸ್ಥರು ಈ ದೃಶ್ಯವನ್ನೆಲ್ಲಾ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಶೂಟ್ ಮಾಡಿದ್ದು, ಅದು ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಕಟವಾದ ಮಾಹಿತಿಯ ಪ್ರಕಾರ, ಕೈಲವನ್ ಗ್ರಾಮದ ಹೊರವಲಯದಲ್ಲಿರುವ ಸ್ಮಶಾನದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ಗಮನಿಸಿದ ಗ್ರಾಮಸ್ಥರು, ಶಂಕೆಗೊಂಡು ಹತ್ತಿರ ಹೋಗಿ ನೋಡಿದ್ದಾರೆ. ಆ ಕಾರಿನಲ್ಲಿ ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದ ರಾಹುಲ್ ವಾಲ್ಮೀಕಿ ಅವರನ್ನು ಪತ್ತೆಹಚ್ಚಿದ್ದಾರೆ. ಈ ದೃಶ್ಯವನ್ನು ಗ್ರಾಮಸ್ಥರು ವಿಡಿಯೋ ಮಾಡಿದಾಗ, ಗಾಬರಿಗೊಂಡ ರಾಹುಲ್ ತಕ್ಷಣವೇ ಬಟ್ಟೆ ತೊಟ್ಟು ಕಾರಿನಿಂದ ಹೊರಬಂದು ಅವರನ್ನು ವಿಡಿಯೋ ಮಾಡದಂತೆ ಮನವಿ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
PublicNext
12/07/2025 09:02 pm