", "articleSection": "Business,International", "image": { "@type": "ImageObject", "url": "https://prod.cdn.publicnext.com/s3fs-public/286525-1752819492-WhatsApp-Image-2025-07-18-at-11.48.04-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShruthiJain" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭಾರತ ಹಾಗೂ ಅಮೇರಿಕ ಜೊತೆ ಹಲವಾರು ವ್ಯವಹಾರಿಕ ಒಪ್ಪಂದಗಳು ನಡೆಯುತ್ತಿದ್ದು ಅದರ ಮಧ್ಯೆ ಹಾಲಿನ ಉತ್ಪನ್ನಗಳ ವ್ಯವಹಾರದ ಮಾತುಕತೆ ಭಾರತೀಯರನ್ನು ಕೆ...Read more" } ", "keywords": "India rejects US milk, non-vegetarian milk India rejection, India dairy market stance", "url": "https://dashboard.publicnext.com/node" } ಅಮೇರಿಕಾ ಹಾಲಿಗೆ ಭಾರತದಲ್ಲಿ ಮಾರುಕಟ್ಟೆ ಒದಗಿಸಬೇಕೆಂಬ ಬೇಡಿಕೆ, ಮಾಂಸಹಾರಿ ಹಾಲು ನಮಗೆ ಬೇಡವೆಂದ ಭಾರತ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೇರಿಕಾ ಹಾಲಿಗೆ ಭಾರತದಲ್ಲಿ ಮಾರುಕಟ್ಟೆ ಒದಗಿಸಬೇಕೆಂಬ ಬೇಡಿಕೆ, ಮಾಂಸಹಾರಿ ಹಾಲು ನಮಗೆ ಬೇಡವೆಂದ ಭಾರತ..!

ಭಾರತ ಹಾಗೂ ಅಮೇರಿಕ ಜೊತೆ ಹಲವಾರು ವ್ಯವಹಾರಿಕ ಒಪ್ಪಂದಗಳು ನಡೆಯುತ್ತಿದ್ದು ಅದರ ಮಧ್ಯೆ ಹಾಲಿನ ಉತ್ಪನ್ನಗಳ ವ್ಯವಹಾರದ ಮಾತುಕತೆ ಭಾರತೀಯರನ್ನು ಕೆರಳಿಸಿದೆ. ಅಮೇರಿಕ ತನ್ನ ಹಾಲಿನ ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ಒದಗಿಸಬೇಕು ಎಂದು ಕೇಳಿಕೊಂಡಿದ್ದು ಇದರ ಸಾಧಕ ಭಾಧಕ ಚರ್ಚೆಯಲ್ಲಿದೆ. ಭಾರತ ಮಾತ್ರ ಅಮೇರಿಕದ ಮಾಂಸಹಾರಿ ಹಾಲು ನಮಗೆ ಬೇಡ ಬೇಕಾದರೆ ಸಸ್ಯಹಾರಿ ಹಾಲಿನ ಉತ್ಪನ್ನ ಆಮದು ಮಾಡಿಕೊಳ್ಳಬಹುದು ಎಂದಿದೆ.

ಅಮೇರಿಕದಲ್ಲಿ ದನಗಳನ್ನು ಸಾಕುವ ವಿಧಾನ ವಿಭಿನ್ನವಾಗಿದೆ, ಅಲ್ಲಿ ದನಗಳಿಗೆ ನಮ್ಮಂತೆ ಹುಲ್ಲು ಕೊಡುವ ಬದಲು ಹಂದಿ,ಕೋಳಿ,ಮೀನು,ಕುದುರೆ,ಬೆಕ್ಕು,ನಾಯಿಗಳ ಭಾಗಗಳನ್ನು ಆಹಾರವಾಗಿ ನೀಡಲಾಗುತ್ತೆ. ಕುದುರೆ, ಹಂದಿಯ ಕೊಬ್ಬು,ರಕ್ತವನ್ನು ಅವುಗಳ ಆಹಾರದಲ್ಲಿ ಬೆರೆಸಲಾಗುತ್ತದೆ.ಇದು ಸ್ವಲ್ಪ ವೆಚ್ಚದಾಯಕವಾಗಿದ್ದರೂ,ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದೇ ಎಂಬುವುದು ಅಮೇರಿಕಾ ವಾದ.

ದನವನ್ನು ದೇವರ ಸಮನಾಗಿ ಪೂಜಿಸಿ ಆರಾಧಿಸುವ ಭಾರತೀಯರಿಗೆ ಅಮೇರಿಕಾದ ಉತ್ಪನ್ನ ಖರೀದಿಸುವುದು ಬಿಡಿ ಈ ವಿಚಾರ ಕೇಳುವುದೇ ಅಸಹ್ಯವೆನಿಸುತ್ತದೆ. ಹಾಲು ಹಾಗೂ ಇತರ ವಸ್ತುಗಳನ್ನು ಭಾರತದಲ್ಲಿ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳಿಗೆ ಬಳಸಲಾಗುತ್ತದೆ. ಹೀಗಿರುವಾಗ ಮಾಂಸಹಾರಿ ದನದ ಹಾಲು, ಉತ್ಪನ್ನ ಬಳಸುವುದು ಭಾರತೀಯರ ಧಾರ್ಮಿಕ ಭಾವನೆಗೆ ಇದು ಧಕ್ಕೆಯುಂಟು ಮಾಡುವುದರಿಂದ, ಭಾರತೀಯರು ಸೇರಿದಂತೆ ಸರಕಾರ ಕೂಡ ಕಡ್ಡಿ ಮುರಿದಂತೆ ಅಮೀರಿಕಾ ಉತ್ಪನ್ನ ನಮಗೆ ಬೇಡ ಎನ್ನುತ್ತಿದ್ದಾರೆ.

ಅದರ ಜೊತೆಗೆ ಅಮೇರಿಕಾ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ತೆರೆದರೆ ದೇಶೀಯಾ ಎಂಟು ಕೋಟಿಗೂ ಅಧಿಕ ಹೈನುಗಾರರ ಮೇಲೆ ಪರಿಣಾಮ ಬೀರಿ ವಾರ್ಷಿಕ 1.03 ಲಕ್ಷ ಕೋಟಿ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

Edited By : Shivu K
PublicNext

PublicNext

18/07/2025 11:48 am

Cinque Terre

7.77 K

Cinque Terre

0

ಸಂಬಂಧಿತ ಸುದ್ದಿ