", "articleSection": "Crime,Law and Order,Government,International", "image": { "@type": "ImageObject", "url": "https://prod.cdn.publicnext.com/s3fs-public/235762-1752834519-Untitled-design---2025-07-18T155835.824.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಗುಪ್ತಚರ ವರ...Read more" } ", "keywords": "PoK, Masood, Most Wanted militant, intelligence report, POK Kashmir, Kashmiri militant, Pakistan occupied Kashmir ", "url": "https://dashboard.publicnext.com/node" }
ನವದೆಹಲಿ: ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಗುಪ್ತಚರ ವರದಿಗಳು ತಿಳಿಸಿವೆ. ಜೈಶ್-ಎ-ಮೊಹಮ್ಮದ್ ನಾಯಕನಾಗಿರುವ ಮಸೂದ್ ಅಜರ್ ಪಿಒಕೆ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾನೆ ಎನ್ನಲಾಗಿದೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, ಅಜರ್ ಅಫ್ಘಾನಿಸ್ತಾನದಲ್ಲಿರಬಹುದು ಎಂದು ಸೂಚನೆ ನೀಡಿದ್ದರು. “ಭಾರತ ಸರ್ಕಾರವು ಆತ ಪಾಕಿಸ್ತಾನದ ನೆಲದಲ್ಲಿ ಇದ್ದಾನೆ ಎಂಬ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ, ನಾವು ಆತನನ್ನ ಬಂಧಿಸಲು ಸಂತೋಷಪಡುತ್ತೇವೆ'. ಅಜರ್ ಪಾಕಿಸ್ತಾನದಲ್ಲಿ ಇರುವುದು ದೃಢಪಟ್ಟರೆ, ಆತನ ಬಂಧನಕ್ಕೆ ಭಾರತದೊಂದಿಗೆ ಸಹಕರಿಸಲು ಪಾಕಿಸ್ತಾನವು ಸಿದ್ಧವಾಗಿದೆ ಎಂದು ಅವರು ಹೇಳಿದ್ದರು.
2016ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಮತ್ತು 40ಕ್ಕೂ ಹೆಚ್ಚು ಸೈನಿಕರನ್ನ ಬಲಿತೆಗೆದುಕೊಂಡ 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ಭಯೋತ್ಪಾದಕ ಘಟನೆಗಳ ಹಿಂದಿನ ರೂವಾರಿ ಎಂದು ಅಜರ್ ಗುರುತಿಸಲ್ಪಟ್ಟಿದ್ದಾನೆ. ಈ ದಾಳಿಗಳಲ್ಲಿ ಅವನ ಪಾಲ್ಗೊಳ್ಳುವಿಕೆ ಈ ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅವನು ನಿರ್ಣಾಯಕ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.
PublicNext
18/07/2025 03:58 pm