", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/52563-1752843767-WhatsApp-Image-2025-07-18-at-6.08.40-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಇತ್ತಿಚ್ಚಿನ ದಿನಗಳಲ್ಲಿ ವಿಚ್ಛೇದನಕ್ಕೆ ಕೊಡುವ ಕಾರಣಗಳನ್ನು ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತದೆ. ಸದ್ಯ ಅಮೆರಿಕಾದ ಅಸ್ಟ್ರೋನೋಮರ್ ಕಂಪನಿಯ ಸ...Read more" } ", "keywords": "Divorce due to one hug, Great company CEO divorce, hug controversy, corporate CEO scandal, relationship issues", "url": "https://dashboard.publicnext.com/node" }
ಇತ್ತಿಚ್ಚಿನ ದಿನಗಳಲ್ಲಿ ವಿಚ್ಛೇದನಕ್ಕೆ ಕೊಡುವ ಕಾರಣಗಳನ್ನು ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತದೆ. ಸದ್ಯ ಅಮೆರಿಕಾದ ಅಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ ತಮ್ಮ ಕಂಪನಿಯ ಮಹಿಳಾ ಹೆಚ್‌ಆರ್ (HR) ಹಾಗೂ ಚೀಫ್ ಪಬ್ಲಿಕ್ ಆಫೀಸರ್ ಕ್ರಿಸ್ಟೆನ್ ಕಬೋಟ್ರನ್ನು ತಬ್ಬಿಕೊಂಡಿದ್ದ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆ್ಯಂಡಿ ಬೈರೋನ್ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಆಗಿದೆ. ಆಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ ಪತ್ನಿ ಮೇಘನ್ ಕೆರಿಗನ್ ತನ್ನ ಸರ್ ನೇಮ್ ಫೇಸ್ಬುಕ್ನಿಂದ ತೆಗೆದು ಹಾಕಿದ್ದಾರೆ. ಇದರಿಂದ ಆ್ಯಂಡಿ ಬೈರೋನ್ ಹಾಗೂ ಪತ್ನಿ ಮೇಘನ್ ಕೆರಿಗನ್ ಪರಸ್ಪರ ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಶುರುವಾಗಿದೆ. ಒಂದು ಅಪ್ಪುಗೆ ಈಗ ಡಿವೋರ್ಸ್ಗೆ ಕಾರಣವಾಗುತ್ತಿದೆ.
ಇನ್ನೂ ಅಮೆರಿಕಾದ ಬೋಸ್ಟನ್ನಲ್ಲಿ ನಡೆಯುತ್ತಿದ್ದ ಕೋಲ್ಡ್ ಪ್ಲೇ ಮ್ಯೂಸಿಕ್ ಕನ್ಸರ್ಟ್ ವೇಳೆ ಸಿಇಓ ಆ್ಯಂಡಿ ಬೈರೋನ್ ತಮ್ಮ ಕಂಪನಿಯ ಮಹಿಳಾ ಹೆಚ್‌ಆರ್ ಕ್ರಿಸ್ಟೆನ್ ಕಬೋಟ್ರನ್ನು ಹಿಂದಿನಿಂದ ತಬ್ಬಿಕೊಂಡು ನಿಂತಿದ್ದರು.
ಇದನ್ನು ಕನ್ಸರ್ಟ್ನ ಕಿಸ್ ಕ್ಯಾಮ್ ಇವರತ್ತ ಪೋಕಸ್ ಮಾಡಿ ಇವರಿಬ್ಬರು ತಬ್ಬಿಕೊಂಡಿದ್ದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಕನ್ಸರ್ಟ್ನ ದೊಡ್ಡ ಪರದೆಯಲ್ಲಿ ಪ್ರದರ್ಶನ ಮಾಡಲಾಗಿದೆ. ಹೀಗೆ ತಾವು ತಬ್ಬಿಕೊಂಡಿರೋದು ದೊಡ್ಡ ಪರದೆಯಲ್ಲಿ ಪ್ರದರ್ಶನವಾಗುತ್ತಿರೋದು ಅರಿವಿಗೆ ಬರುತ್ತಿದ್ದಂತೆಯೇ ಇಬ್ಬರಿಗೂ ಶಾಕ್ ಆಗಿದೆ. ತಕ್ಷಣವೆ ಕೆಳಗೆ ಬಗ್ಗಿಕೊಂಡು ಕ್ಯಾಮರಾ ಕಣ್ಣಿನಿಂದ ಸಿಇಓ ಆ್ಯಂಡಿ ಬೈರೋನ್ ಎಸ್ಕೇಪ್ ಆಗುವ ಯತ್ನ ಮಾಡಿದ್ದಾರೆ. ಕ್ರಿಸ್ಟೆನ್ ಕಬೋಟ್ ಕೂಡ ಮುಖ ತಿರುಗಿಸಿಕೊಂಡು ಕ್ಯಾಮರಾಗೆ ಬೆನ್ನು ತೋರಿಸಿದ್ದಾರೆ.
ಇದನ್ನು ಕ್ಯಾಮರಾ ಪೋಕಸ್ ಮಾಡಿ ದೊಡ್ಡ ಪರದೆ ಮೇಲೆ ಡದೇ ಇದ್ದಿದ್ದತೆ ಇವರ ಅಫೇರ್, ಹೊರ ಜಗತ್ತಿಗೂ ಗೊತ್ತಾಗುತ್ತಿರಲಿಲ್ಲ. ಆ್ಯಂಡಿ ಬೈರೋನ್ ದಾಂಪತ್ಯದಲ್ಲಿ ಡಿವೋರ್ಸ್ ಚರ್ಚೆಯೂ ಆಗುತ್ತಿರಲಿಲ್ಲ.
PublicNext
18/07/2025 07:06 pm