", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/463655-1752845092-WhatsApp-Image-2025-07-18-at-6.49.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಫರಿದಾಬಾದ್ : ಜಿಮ್ ತರಬೇತಿದಾರನೊಬ್ಬ ತನ್ನ ಸಹಚರರೊಂದಿಗೆ ಸೇರಿ 20 ವರ್ಷದ ಯುವಕನನ್ನು ಅಪಹರಿಸಿ, ಐದು ತಿಂಗಳ ಹಿಂದಿನ ವೈಷಮ್ಯಕ್ಕೆ ಪ್ರತೀಕಾರವಾ...Read more" } ", "keywords": ""Friend murder, old grudge, viral video, murder case, accused arrested, crime news" ", "url": "https://dashboard.publicnext.com/node" } ಹಳೆಯ ದ್ವೇಷಕ್ಕೆ ಸ್ನೇಹಿತನ ಕೊಲೆ: ವಿಡಿಯೋ ವೈರಲ್, ಆರೋಪಿಗಳು ಅಂದರ್‌'
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯ ದ್ವೇಷಕ್ಕೆ ಸ್ನೇಹಿತನ ಕೊಲೆ: ವಿಡಿಯೋ ವೈರಲ್, ಆರೋಪಿಗಳು ಅಂದರ್‌'

ಫರಿದಾಬಾದ್ : ಜಿಮ್ ತರಬೇತಿದಾರನೊಬ್ಬ ತನ್ನ ಸಹಚರರೊಂದಿಗೆ ಸೇರಿ 20 ವರ್ಷದ ಯುವಕನನ್ನು ಅಪಹರಿಸಿ, ಐದು ತಿಂಗಳ ಹಿಂದಿನ ವೈಷಮ್ಯಕ್ಕೆ ಪ್ರತೀಕಾರವಾಗಿ ಹತ್ಯೆ ಮಾಡಿದ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.

ಘಟನೆಯಲ್ಲಿ ಮೃತಪಟ್ಟ ಯುವಕನನ್ನು ಉತ್ತರ ಪ್ರದೇಶದ ಬಲಿಯಾ ಮೂಲದವನಾಗಿದ್ದು, ಫರಿದಾಬಾದ್‌ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಆಕಾಶ್ ಎಂದು ಗುರುತಿಸಲಾಗಿದೆ. ಘಟನೆಯು ಜುಲೈ 12ರಂದು ಬಲ್ಲಭಗಢದ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ಆರೋಪಿಗಳು ಆಕಾಶ್ ಅನ್ನು ಕಿಡ್ನಾಪ್ ಮಾಡಿ, ದೊಣ್ಣೆಗಳಿಂದ ಕ್ರೂರವಾಗಿ ಹಲ್ಲೆ ಮಾಡಿ ಹಲ್ಲೆಯ ವಿಡಿಯೋವನ್ನು ಶೂಟ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಲ್ಲೆಯ ಬಳಿಕ ಆಕಾಶ್ ಅನ್ನು ರಸ್ತೆ ಬದಿಗೆ ಎಸೆದು ಪರಾರಿಯಾದ ಆರೋಪಿಗಳ ಹಿನ್ನೆಲೆಯಲ್ಲಿ, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಮೃತಪಟ್ಟಿದ್ದಾನೆ.

ಘಟನೆಯ ಇಬ್ಬರು ಪ್ರಮುಖ ಆರೋಪಿಗಳಾದ ಮೋಹಮ್ಮದ್ ಸೊಹೈಲ್ ಮತ್ತು ಸಾಹಿಲ್ ಕುಮಾರ್ ಇಬ್ಬರೂ ಬಂಧಿತರಾಗಿದ್ದಾರೆ. ಜೊತೆಗೆ ಇತರ ಐದು ಜನ ಆರೋಪಿಗಳಾದ ತಾರಿಫ್ ಖಾನ್, ವಿಕಾಸ್ ಕುಮಾರ್, ಸೂರಜ್ ಕುಮಾರ್, ಮೊಹಮ್ಮದ್ ಅಲ್ತಾಫ್ ಮತ್ತು ಒಬ್ಬ ಅಪ್ರಾಪ್ತ ವಯಸ್ಕನನ್ನು ಅಪರಾಧ ನಡೆದ ತಕ್ಷಣವೇ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು

ವರದಿಗಳ ಪ್ರಕಾರ, ಮೃತಪಟ್ಟ ಆಕಾಶ್ ಮತ್ತು ಆರೋಪಿಗಳು ಶಾಲಾ ಸ್ನೇಹಿತರಾಗಿದ್ದರು ಐದು ತಿಂಗಳ ಹಿಂದಿನ ವಿವಾದವೇ ಈ ಕ್ರೂರ ಕೃತ್ಯದ ಹಿನ್ನೆಲೆ ಎಂದು ತಿಳಿದುಬಂದಿದೆ. ಮದುವೆ ಸಮಾರಂಭವೊಂದರಲ್ಲಿ ನಡೆದ ಜಗಳವೇ ಈಗ ಹತ್ಯೆಯಾಗಿ ಮಾರ್ಪಟ್ಟಿದೆ. ವಿಡಿಯೋ ಜುಲೈ 15 ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಜನಸಾಮಾನ್ಯರಲ್ಲಿ ಆಕ್ರೋಶ ಉಂಟುಮಾಡಿದೆ. ಮೃತ ಆಕಾಶ್‌ನ ತಾಯಿ ದೂರಿನ ಮೇರೆಗೆ ಸೆಕ್ಟರ್ 7 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Edited By :
PublicNext

PublicNext

18/07/2025 06:55 pm

Cinque Terre

9.44 K

Cinque Terre

1

ಸಂಬಂಧಿತ ಸುದ್ದಿ