", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1752833460-WhatsApp-Image-2025-07-17-at-7.09.06-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಪಂಜಾಬ್ : ಆಸ್ತಿ ಮುಂದೆ ಯಾವ ಸಂಬಂಧಕ್ಕೂ ಬೆಲೆ ಇಲ್ಲ ಎನ್ನುದಕ್ಕೆ ಪಂಜಾಬ್‌ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹೌದು ಆಸ್ತಿ ವಿವಾದ ತಾರಕ್ಕಕ್ಕ...Read more" } ", "keywords": "Property dispute, brother's family, car attack, attempted murder, family feud", "url": "https://dashboard.publicnext.com/node" } ಆಸ್ತಿ ಹಂಚಿಕೆ ವಿವಾದ..ಸಹೋದರನ ಕುಟುಂಬದ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ತಿ ಹಂಚಿಕೆ ವಿವಾದ..ಸಹೋದರನ ಕುಟುಂಬದ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ

ಪಂಜಾಬ್ : ಆಸ್ತಿ ಮುಂದೆ ಯಾವ ಸಂಬಂಧಕ್ಕೂ ಬೆಲೆ ಇಲ್ಲ ಎನ್ನುದಕ್ಕೆ ಪಂಜಾಬ್‌ನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹೌದು ಆಸ್ತಿ ವಿವಾದ ತಾರಕ್ಕಕ್ಕೇರಿ ವ್ಯಕ್ತಿಯೊಬ್ಬ ಕಾರು ಗುದ್ದಿಸಿ ಸಹೋದರನ ಕುಟುಂಬದವರೆಲ್ಲರನ್ನೂ ಹತ್ಯೆ ಮಾಡಲು ಪ್ರಯತ್ನಿಸಿರುವ ಘಟನೆ ಪಂಜಾಬ್​ನ ಮೊಗಾದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಒಂದು ತಿಂಗಳ ಹಿಂದಿನವರೆಗೂ ತಮ್ಮ ಕಿರಿಯ ಮಗ ದಿಲ್‌ಬಾಗ್ ಸಿಂಗ್ ಜೊತೆ ವಾಸಿಸುತ್ತಿದ್ದ ಸುರ್ಜಿತ್ ಸಿಂಗ್ ಮತ್ತು ಅವರ ಪತ್ನಿಯ ವಿಚಾರವಾಗಿ ಗದ್ದಲ ಶುರುವಾಗಿತ್ತು.

ಆಸ್ತಿಯ ಬಗ್ಗೆ ಭಿನ್ನಾಭಿಪ್ರಾಯದ ನಂತರ, ದಿಲ್‌ಬಾಗ್ ಸಿಂಗ್ ತನ್ನ ಹೆತ್ತವರನ್ನು ಮನೆಯಿಂದ ಹೊರಹಾಕಿದ್ದ. ವೃದ್ಧ ದಂಪತಿಗಳು ಧರ್ಮಕೋಟ್‌ನ ಗಟ್ಟಿ ಜಟ್ಟಾ ಗ್ರಾಮದಲ್ಲಿ ವಾಸಿಸುವ ತಮ್ಮ ಹಿರಿಯ ಮಗ ಬಲ್ವಿಂದರ್ ಸಿಂಗ್ ಮನೆಗೆ ಹೋಗಿದ್ದರು. ಆಗ ಇಬ್ಬರು ಸಹೋದರರ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು.

ಬಲ್ವಿಂದರ್ ಸಿಂಗ್, ಅವರ ಪತ್ನಿ ಮತ್ತು ಮಗಳು ತಮ್ಮ ಮನೆಯ ಗೇಟ್ ಬಳಿ ನಿಂತಿದ್ದಾಗ, ದಿಲ್ಬಾಗ್ ಸಿಂಗ್ ಉದ್ದೇಶಪೂರ್ವಕವಾಗಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರೆಲ್ಲರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Edited By : Nirmala Aralikatti
PublicNext

PublicNext

18/07/2025 04:02 pm

Cinque Terre

15.42 K

Cinque Terre

0

ಸಂಬಂಧಿತ ಸುದ್ದಿ