ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಕುಡಿದ ಮತ್ತಿಲ್ಲಿ ಮಹಿಳೆ ಮೇಲೆ ಭೀಕರ ಹಲ್ಲೆ- 15 ಸೆಕೆಂಡುಗಳಲ್ಲಿ 20 ಬಾರಿ ಕಪಾಳಮೋಕ್ಷ

ಲಖನೌ: ಕುಡಿದ ಮತ್ತಿನಲ್ಲಿ ಯುವಕನೊಬ್ಬ ಮಹಿಳೆಯನ್ನು ಹಿಗ್ಗಾಮುಗ್ಗಾ ಎಳೆದಾಡಿದ್ದೂ ಅಲ್ಲದೇ ಕೇವಲ 15 ಸೆಕೆಂಡುಗಳಲ್ಲಿ 20 ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ಅದರ ವಿಡಿಯಯೋ ಈಗ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಹಾಪುರದ ಮೊಹಲ್ಲಾ ಅರ್ದ್ಶಾನಗರದಲ್ಲಿ ಗುರುವಾರ (ಜುಲೈ.17) ನಡೆದ ಈ ಘಟನೆ ನಡೆದಿದೆ. ಜಸ್ರುಪ್‌ನಗರ ದಸ್ತೋಯ್ ರಸ್ತೆಯ ನಿವಾಸಿಯಾದ ಮಹಿಳೆ ತನ್ನ ಮನೆಯ ಹೊರಗೆ ನಿಂತಿದ್ದಾಗ ಅಲ್ಲಿಗೆ ಬಂದ ಈ ಯುವಕ ಏಕಾಏಕಿ ಹಲ್ಲೆ ಮಾಡಲು ಆರಂಭಿಸಿದ್ದಾನೆ. ನಿರಂತರ ಹಲ್ಲೆ ಮಾಡುತ್ತಿದ್ದರೂ ಮಹಿಳೆಯ ರಕ್ಷಣೆಗೆ ಒಬ್ಬರೂ ಬಂದಿಲ್ಲ. ಯುವಕ ಮಹಿಳೆಗೆ 15 ಸೆಕೆಂಡುಗಳಲ್ಲಿ 20 ಕಪಾಳಮೋಕ್ಷ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ದಾಳಿಕೋರನನ್ನು ದೂರ ತಳ್ಳಿದ ನಂತರ, ಮಹಿಳೆ ತನ್ನ ಚಪ್ಪಲಿಯಿಂದ ಅವನಿಗೆ ಹೊಡೆದಿದ್ದಾಳೆ. ಅವನು ರಸ್ತೆಗೆ ಬಿದ್ದ ನಂತರ ಅವನನ್ನು ಒದೆಯುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

18/07/2025 10:35 pm

Cinque Terre

14.27 K

Cinque Terre

2

ಸಂಬಂಧಿತ ಸುದ್ದಿ