ರಾಮನಗರ : ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸ ತಾಣವಾಗಿರುವ ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ಪಕ್ಕದ ಬೆಟ್ಟದಲ್ಲಿ ಕರಡಿಯೊಂದು ತನ್ನ ಮರಿಯೊಂದಿಗೆ ಆಟವಾಡುತ್ತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿ ಎಲ್ಲೇಡೆ ವೈರಲ್ ಆಗಿದೆ.
ತನ್ನ ಮರಿಯೊಂದಿಗೆ ಕರಡಿ ಆಟವಾಡುವ ನೃತ್ಯ ಮಾಡುವ ದೃಶ್ಯ ನೋಡುಗರ ಮನ ತಣಿಸಿದೆ. ಇನ್ನು ಡ್ರೋಣ್ ಸದ್ದು ಕೇಳಿ ಕರಡಿ ಮರಿಯೊಂದಿಗೆ ಕಲ್ಲಿನ ಪೊಟರೆಯೊಳಕ್ಕೆ ಸೇರಿಕೊಂಡಿದೆ.ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟ, ಹಂದಿಗುಂದಿ ಅರಣ್ಯ ಪ್ರದೇಶದಲ್ಲಿರುವ ಕಲ್ಲುಗುಡ್ಡೆಗಳಲ್ಲಿ ಕರಡಿಗಳು ವಾಸಿಸುತ್ತಿದ್ದು, ಆಗಾಗ್ಗ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತವೆ.
PublicNext
18/07/2025 08:45 pm