", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/463655-1752831218-WhatsApp-Image-2025-07-18-at-2.01.26-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗುವಾಹತಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾರನ್ನು ಜೈಲಿಗೆ ಹಾಕಬೇಕು ಎಂಬ ಕಾಂಗ್ರೆಸ್ ನಾಯ...Read more" } ", "keywords": ""Rahul Gandhi arrest, Himanta Biswa Sarma warning, Assam CM statement, Rahul Gandhi controversy, Indian politics news, BJP Congress clash" ", "url": "https://dashboard.publicnext.com/node" } 'ಸಾಕ್ಷ್ಯ ಸಿಕ್ಕರೆ ರಾಹುಲ್ ಗಾಂಧಿಯನ್ನೇ ಜೈಲಿಗಟ್ಟುತ್ತೇನೆ' - ಸಿಎಂ ಹಿಮಂತ ಬಿಸ್ವಾ ಶರ್ಮಾ ಎಚ್ಚರಿಕೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಸಾಕ್ಷ್ಯ ಸಿಕ್ಕರೆ ರಾಹುಲ್ ಗಾಂಧಿಯನ್ನೇ ಜೈಲಿಗಟ್ಟುತ್ತೇನೆ' - ಸಿಎಂ ಹಿಮಂತ ಬಿಸ್ವಾ ಶರ್ಮಾ ಎಚ್ಚರಿಕೆ

ಗುವಾಹತಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ "ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾರನ್ನು ಜೈಲಿಗೆ ಹಾಕಬೇಕು" ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಹಿಮಂತ ಶರ್ಮಾ. ಸಾಕ್ಷ್ಯಧಾರಗಳು ಇದ್ದರೆ, ನಾನೇ ರಾಹುಲ್ ಗಾಂಧಿಯವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಕಿಡಿಕಾರಿದ ಅವರು, “ನನಗಿಂತ ಮೊದಲು ರಾಹುಲ್ ಗಾಂಧಿಯೇ ಜೈಲಿಗೆ ಹೋಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?” ಎಂದು ಪ್ರತ್ಯುತ್ತರ ನೀಡಿದ್ದಾರೆ.

ರಾಷ್ಟ್ರೀಯ ನಾಯಕನಾಗಿ ಒಂದು ರಾಜ್ಯಕ್ಕೆ ಬಂದು ಯಾರನ್ನು ಜೈಲಿಗೆ ಹಾಕಬೇಕು ಎಂದು ಹೇಳುವದು ಶೋಭೆಯಿಲ್ಲದ ಮಾತು ಎಂದು ಟೀಕಿಸಿದ ಶರ್ಮಾ, "ಇಂಥ ಹೇಳಿಕೆಗಳು ಅವರ ಮಟ್ಟವನ್ನೇ ತೋರುತ್ತವೆ" ಎಂದು ಹೇಳಿದರು. ತಮ್ಮ ವಿರುದ್ಧ ದೇಶದ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದು, ತಾತ್ಕಾಲಿಕ ಜಾಮೀನಿನ ಮೇರೆಗೆ ಹೊರಗೆ ಇದ್ದಾರೆ ಎಂಬುದನ್ನು ರಾಹುಲ್ ಗಾಂಧಿ ಮರೆತಂತಿದ್ದಾರೆ ಎಂದೂ ಶರ್ಮಾ ಟೀಕಿಸಿದ್ದಾರೆ.

ಅಸ್ಸಾಂ ರಾಜ್ಯದ ಗೋಲ್‌ಪಾರ ಜಿಲ್ಲೆಯ ಪೈಕಾನ್ ಮೀಸಲು ಅರಣ್ಯದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಭಾಷಣವೇ ಕಾರಣ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕಿಡಿಕಾರಿದ್ದಾರೆ.

“ದ್ವೇಷಭಾಷಣದ ಮೂಲಕ ರಾಹುಲ್ ಗಾಂಧಿ ಅತಿಕ್ರಮಣಕಾರರನ್ನು ಕೆರಳಿಸಿದ್ದಾರೆ. ಅವರ ಪ್ರೇರಣೆಯಿಂದಲೇ ತೆರವು ಕಾರ್ಯಾಚರಣೆ ವೇಳೆ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಯಿತು. ಆತ್ಮರಕ್ಷಣೆಗೆ ಗುಂಡು ಹಾರಿಸಲು ಪೊಲೀಸರು ಮುಂದಾದ ಪರಿಣಾಮ, ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ,” ಎಂದು ಶರ್ಮಾ ಹೇಳಿದರು.

“ರಾಹುಲ್ ಗಾಂಧಿಯ ಪುನರ್ವಸತಿ ಘೋಷಣೆ ಕಾನೂನುಬಾಹಿರ. ಅವರ ಭಾಷಣ ಮತ್ತು ಘರ್ಷಣೆಯ ನಡುವಿನ ಸಂಪರ್ಕವನ್ನು ಪರಿಶೀಲಿಸಲಾಗುತ್ತಿದೆ. ಸಾಕ್ಷ್ಯ ದೊರೆತರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ,” ಎಂದರು. ಇದೇ ವೇಳೆ ಶರ್ಮಾ, “ದೇಶದ ಜೈಲುಗಳು ಗಾಂಧಿ ಕುಟುಂಬದ ಸದಸ್ಯರಿಗೆ ಕಾಯುತ್ತಿವೆ” ಎಂಬ ತೀವ್ರ ಟೀಕೆಗಳನ್ನು ಸಹ ಮಾಡಿದರು.

Edited By :
PublicNext

PublicNext

18/07/2025 03:03 pm

Cinque Terre

16.41 K

Cinque Terre

6

ಸಂಬಂಧಿತ ಸುದ್ದಿ