ಬೆಂಗಳೂರು : ನಾಳೆ ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಯುತ್ತಿದೆ ಆದ್ರೆ ಅದು ಕಾಂಗ್ರೆಸ್ ಸಮಾವೇಶ ಅಲ್ಲ, ಅದು ಸಿಎಂ ಸಿದ್ದರಾಮಯ್ಯ ಅವರ ಅಳಿವು, ಉಳಿವಿನ ಸಮಾವೇಶ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರಲ್ಲಿ ಈ ಕುರಿತು ಮಾತನಾಡಿದ ಅವರು, ಎರಡುವರೆ ವರ್ಷ ಎರಡುವರೆ ವರ್ಷ ಎಂಬ ಜಟಾಪಟಿ ದೆಹಲಿ ತಲುಪಿದೆ, ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರಿಯಬೇಕು ಎಂಬುದು ಅವರ ಪ್ರಯತ್ನ, ಡಿಸಿಎಂ ಡಿಕೆಶಿ ಸಿಎಂ ಆಗಬೇಕು ಎಂಬುದು ಅವರ ವಾದ. ಸುರ್ಜೇವಾಲಾ ಬಂದು ವ್ಯಕ್ತಿ ಪರ ಇರಬೇಡಿ ಪಕ್ಷದ ಪರ ಇರಬೇಕು ಎಂದು ತಾಕೀತು ಮಾಡಿದ್ದಾರೆ.
ಸಿದ್ದರಾಮಯ್ಯ ನೆಮ್ಮದಿಯಿಂದ ಸಿಎಂ ಆಗಿ ಕಾರ್ಯ ನಿರ್ವಹಿಸಿಲ್ಲ ಅವರಲ್ಲೇ ಗೊಂದಲದ ಹೇಳಿಕೆ ಬರ್ತೀವೆ, ರಾಜಣ್ಣ ಹೇಳಿದ ರೀತಿ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದರು. ಕಾಂಗ್ರೆಸ್ ಸಮಾವೇಶ ಯಾಕ್ ಮಾಡ್ತಿದೆ ? ವಾಲ್ಮೀಕಿ ಹಗರಣ ಬಗ್ಗೆ ಮಾತನಾಡ್ತಿರಾ..? ರೈತರ ಆತ್ಮಹತ್ಯೆ, ಅಧಿಕಾರಿಗಳ ಆತ್ಮಹತ್ಯೆ, ಬಾಣಂತಿಯರ ಸಾವು ಆಗಿದೆ.. ಅದರ ಬಗ್ಗೆ ಸಮಾವೇಶದಲ್ಲಿ ಮಾತನಾಡ್ತಿರಾ..? ಔಷಧಿ ಕೊಂಡುಕೊಳ್ಳಲು ಸರ್ಕಾರದ ಬಳಿ ಹಣ ಇಲ್ಲ, ಕಾಲ್ತುಳಿತದಿಂದ 11 ಜನರ ಸಾವು ಆಯ್ತು, ಈಗ ಸಾವಿನ ಮೇಲೆ ಸಮಾವೇಶವನ್ನ ಕಾಂಗ್ರೆಸ್ ಮಾಡ್ತಿದೆ ಎಂದು ಆರೋಪಿಸಿದರು.
ಪೆಟ್ರೋಲ್, ಹಾಲು ಸೇರಿದಂತೆ ಹಲವುಗಳ ಮೇಲೆ ತೆರಿಗೆ ಹೆಚ್ಚಳ ಮಾಡ್ತಿದ್ದೀರಾ, 11 ಜನರ ಸಾವು, ಬಾಣಂತಿಯರ ಸಾವಿನ ಸೂತಕ ಹಾಗೇ ಇದೇ ಅದರ ಮೇಲೆ ಸಮಾವೇಶ ಮಾಡ್ತಿದ್ದಾರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ಇದು ನಾಚಿಗೇಡಿನ ಸಮಾವೇಶ ಎಂದು ಕಿಡಿ ಕಾರಿದರು.
PublicNext
18/07/2025 05:01 pm