", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1752831609-N.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ದಾವಣಗೆರೆ ಜಿಲ್ಲಾ ಬಿಜೆಪಿ ಬಣ ಬಡಿದಾಟ ಇನ್ನೂ ಶಮನವಾಗಿಲ್ಲ. ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರನ್ನ ರೇಣುಕಾಚಾರ್ಯ...Read more" } ", "keywords": "Renukacharya statement, Bengaluru news, no wrongdoing, clean slate, politician statement, controversy denial.", "url": "https://dashboard.publicnext.com/node" } ಬೆಂಗಳೂರು : ನನ್ನ ಮೇಲೆ ಯಾವ ತೂಗು ಕತ್ತಿ ಇಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ – ರೇಣುಕಾಚಾರ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನನ್ನ ಮೇಲೆ ಯಾವ ತೂಗು ಕತ್ತಿ ಇಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ – ರೇಣುಕಾಚಾರ್ಯ

ಬೆಂಗಳೂರು : ದಾವಣಗೆರೆ ಜಿಲ್ಲಾ ಬಿಜೆಪಿ ಬಣ ಬಡಿದಾಟ ಇನ್ನೂ ಶಮನವಾಗಿಲ್ಲ. ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರನ್ನ ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ಮುಖಂಡರು ಭೇಟಿಯಾಗಿದ್ದಾರೆ. ನಿನ್ನೆಯಷ್ಟೇ ದೆಹಲಿಯಲ್ಲಿ ಕೆಲ ಹೈಕಮಾಂಡ್ ನಾಯಕರನ್ನ ಭೇಟಿಯಾಗಿ ಬಂದಿದ್ದ ರೇಣುಕಾಚಾರ್ಯ ನಿಯೋಗ ಇಂದು ಡಿವಿಎಸ್ ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

ಸದಾನಂದ ಗೌಡರ ಭೇಟಿ ಬಳಿಕ ಮಾತನಾಡಿದ ರೇಣುಕಾಚಾರ್ಯ, ದಾವಣಗೆರೆ ಜಿಲ್ಲಾ ಬಿಜೆಪಿ ವಿಚಾರದಲ್ಲಿ ಸಭೆ ಆದ ಬಳಿಕವೂ ಅನೇಕ ಅನಗತ್ಯ ಚರ್ಚೆಗಳಾದವು,ದೆಹಲಿಯಲ್ಲಿ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ ಓಂ ಪಾಠಕ್ ಅವರನ್ನು ಭೇಟಿ ಮಾಡಿದ್ದೇವೆ ಇಂದು ಸದಾನಂದ ಗೌಡರನ್ನು ಭೇಟಿ ಮಾಡಿದ್ದೇವೆ. ನಾಲ್ಕು ಗೋಡೆ ಮಧ್ಯೆ ಏನು ಹೇಳಬೇಕೋ ಹೇಳಿದ್ದೇವೆ,ಜುಲೈ ೪ ರಂದು ನಡೆದ ಸಭೆಯ ಬಳಿಕ ನಾವು ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ,ಅನಗತ್ಯವಾಗಿ ಮಾತನಾಡಿರುವ ಬಗ್ಗೆ ಸದಾನಂದ ಗೌಡ ಸೇರಿ ಹಿರಿಯರ ಗಮನಕ್ಕೆ ತಂದಿದ್ದೇವೆ.

ನಾವು ಬಿಜೆಪಿಯ ಕಟ್ಟಾಳುಗಳು, ವಿಜಯೇಂದ್ರ‌ ಸಾರಥ್ಯದಲ್ಲಿ ಪಕ್ಷ ಹೋರಾಟ ಮಾಡುತ್ತಿದೆ ಇನ್ನೂ ಅವಕಾಶ ಸಿಕ್ಕಿದರೆ ರಾಧಾಮೋಹನ್ ಅಗರವಾಲ್ ಅವರನ್ನು ಭೇಟಿ ಮಾಡುತ್ತೇವೆ. ಯಾರು ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಾರೋ ಅದನ್ನು ಗಮನ ಸೆಳೆಯುವ ಕೆಲಸ ಮಾಡುತ್ತೇವೆ. ಅನಗತ್ಯವಾಗಿ ನಾನು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿಲ್ಲ. ನನ್ನ ಮೇಲೆ ಯಾವ ತೂಗು ಕತ್ತಿ ಇಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ ಎಂದರು.

ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಸ್ವಾಗತ ಮಾಡುತ್ತೇವೆ. ಅದು ಅವರ ವೈಯಕ್ತಿಕ ವಿಚಾರ,ಯತ್ನಾಳ್ ಈಗ ಪಕ್ಷದಿಂದ ಹೊರಗೆ ಹೋಗಿದ್ದಾರೆ. 224 ವಿಧಾನಸಭೆ ಕ್ಷೇತ್ರಗಳನ್ನೂ ಅಭ್ಯರ್ಥಿಗಳನ್ನು ಹುಡುಕಲಿ ಎಂದು ವ್ಯಂಗ್ಯವಾಡಿದರು.

Edited By : Vinayak Patil
PublicNext

PublicNext

18/07/2025 03:10 pm

Cinque Terre

10.68 K

Cinque Terre

1

ಸಂಬಂಧಿತ ಸುದ್ದಿ