", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/463655-1752996853-manjunath---2025-07-20T130407.667.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗುಜರಾತ್‌: ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಅವರ ಗೆಳೆಯನೇ ಹತ್ಯೆ ಮಾಡಿದ ಭೀಕರ ಘಟನೆ ಗುಜರಾತ್‌ನ ಕಚ್ ಜಿಲ್ಲೆಯ ಅಂಜರ್...Read more" } ", "keywords": "Instagram romance turned deadly, live-in relationship murder, soldier kills police officer girlfriend, crime news, relationship turned violent, army man arrested for murder, police officer murder case, live-in relationship gone wrong, Instagram romance murder case. ", "url": "https://dashboard.publicnext.com/node" } ಇನ್‌ಸ್ಟಾಗ್ರಾಂ ಸ್ನೇಹದಿಂದ ಲಿವ್-ಇನ್ ಸಂಬಂಧ : ಪೊಲೀಸ್‌ ಅಧಿಕಾರಿಯಾಗಿದ್ದ ಪ್ರೇಯಸಿಯನ್ನು ಕೊಂದ ಯೋಧ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್‌ಸ್ಟಾಗ್ರಾಂ ಸ್ನೇಹದಿಂದ ಲಿವ್-ಇನ್ ಸಂಬಂಧ : ಪೊಲೀಸ್‌ ಅಧಿಕಾರಿಯಾಗಿದ್ದ ಪ್ರೇಯಸಿಯನ್ನು ಕೊಂದ ಯೋಧ

ಗುಜರಾತ್‌: ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಅವರ ಗೆಳೆಯನೇ ಹತ್ಯೆ ಮಾಡಿದ ಭೀಕರ ಘಟನೆ ಗುಜರಾತ್‌ನ ಕಚ್ ಜಿಲ್ಲೆಯ ಅಂಜರ್ ತಾಲ್ಲೂಕಿನಲ್ಲಿ ಸಂಭವಿಸಿದೆ.

ಮೃತ ಮಹಿಳೆಯನ್ನ ಅರುಣಾಬೆನ್ ನಟುಭಾಯ್ ಜಾದವ್ (25), ಎಂದು ಗುರುತಿಸಲಾಗಿದ್ದು, ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯಾಗಿರುವ ದಿಲೀಪ್ ಎಂಬಾತ ಸಿಆರ್‌ಪಿಎಫ್ (CRPF) ಕಾನ್‌ಸ್ಟೆಬಲ್ ಆಗಿದ್ದು, ಮಣಿಪುರದಲ್ಲಿ ಸೇವೆ ನಿರ್ವಹಿಸುತ್ತಿದ್ದ.

ಶುಕ್ರವಾರ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಅರುಣಾಬೆನ್‌ ಅವರು ದಿಲೀಪ್ ತಾಯಿ ಬಗ್ಗೆ ಅವಹೇಳನಕರವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ, ಕೋಪಗೊಂಡ ದಿಲೀಪ್ ಅವರು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆಯ ಬಳಿಕ ಆರೋಪಿದ ದಿಲೀಪ್ ಡಾಂಗ್ಚಿಯಾ, ಅಂಜರ್ ಠಾಣೆಗೆ ಹೋಗಿ ಸ್ವಯಂ ಶರಣಾದಿದ್ದಾರೆ.

2021 ರಿಂದ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕದಲ್ಲಿದ್ದು, ಲಿವ್-ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವ ಯೋಜನೆಯೂ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಂಜರ್ ಡಿವೈಎಸ್‌ಪಿ ಮುಖೇಶ್ ಚೌಧರಿ ಮಾಹಿತಿ ನೀಡಿ, ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದ್ದು, ಆಳವಾಗಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Edited By :
PublicNext

PublicNext

20/07/2025 01:04 pm

Cinque Terre

23.26 K

Cinque Terre

0