", "articleSection": "Law and Order,News", "image": { "@type": "ImageObject", "url": "https://prod.cdn.publicnext.com/s3fs-public/463655-1753149611-manjunath-(1).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧಪಟ್ಟಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಹೋದರ ಹ...Read more" } ", "keywords": "dharmasthala case, bengaluru court, media ban, media restriction, court order, dharmasthala controversy, news ban, judicial order, bengaluru news ", "url": "https://dashboard.publicnext.com/node" }
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧಪಟ್ಟಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಡಿ ವಿರುದ್ಧ ಮಾಧ್ಯಮಗಳಲ್ಲಿ ಹಾಗೂ ಯೂಟ್ಯೂಬ್ ಚಾನೆಲ್‌ಗಳಲ್ಲಿ ಮಾನಹಾನಿಕರ ವಿಷಯಗಳನ್ನು ಪ್ರಕಟಿಸದಂತೆ ಬೆಂಗಳೂರು ಕೋರ್ಟ್ ತಾತ್ಕಾಲಿಕ ನಿರ್ಬಂಧ ಹೇರಿದೆ.
ಶ್ರೀ ಮಂಜುನಾಥಸ್ವಾಮಿ ದೇವಾಲಯದ ಕಾರ್ಯದರ್ಶಿ, ಈ ಕುರಿತು ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು. ಈ ಮೊಕದ್ದಮೆಯ ಹಿನ್ನಲೆಯಲ್ಲಿ ಕೋರ್ಟ್ ಈ ಆದೇಶ ಹೊರಡಿಸಿದ್ದು, ದೇವಾಲಯದ ವಿರುದ್ಧ ಮಾಜಿ ಸ್ವಚ್ಛತಾ ಕೆಲಸಗಾರನೊಬ್ಬ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮಾಧ್ಯಮ ವರದಿಗಳು ಹೊರಬಿದ್ದಿದ್ದವು.
ಆದರೆ ಆರೋಪದಲ್ಲಿ ಹರ್ಷೇಂದ್ರ ಕುಮಾರ್ ಅಥವಾ ಅವರ ಕುಟುಂಬದ ಹೆಸರನ್ನು ಎಲ್ಲೂ ಪ್ರಸ್ತಾಪಿಸಲಾಗಿಲ್ಲ ಎಂದು ಸ್ಪಷ್ಟತೆ ನೀಡಿದ್ದಾರೆ. ನ್ಯಾಯಾಲಯ, ಈ ಪ್ರಕರಣವನ್ನು ಸುಳ್ಳು ಆರೋಪಗಳ ಅಸಾಧಾರಣ ಉದಾಹರಣೆಯೆಂದು ಪರಿಗಣಿಸಿದ್ದು, "ಇದರಿಂದ ಸಂಸ್ಥೆಗಳ ಹಾಗೂ ಅವರ ಜೊತೆ ಸಂಪರ್ಕ ಹೊಂದಿರುವ ಜನರ ಮೇಲೆ ದುಷ್ಪರಿಣಾಮ ಉಂಟಾಗಬಹುದು" ಎಂದು ಹೇಳಿದೆ.
ಹರ್ಷೇಂದ್ರ ಕುಮಾರ್ ಅವರು ಸುಮಾರು 8,842 ಮಾನಹಾನಿಕರ ಲಿಂಕ್‌ಗಳ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಇವುಗಳಲ್ಲಿ ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಸುದ್ದಿತಾಣಗಳ ಹಳೆಯ ಪೋಸ್ಟ್‌ಗಳಿವೆ.
ಇನ್ನೂ ತಮ್ಮ ವಿರುದ್ಧ ಯಾವುದೇ ಎಫ್‌ಐಆರ್ ಇಲ್ಲ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 5ರಂದು ನಡೆಯಲಿದೆ.
PublicNext
22/07/2025 07:30 am