ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಕಕಾಲದಲ್ಲಿ 3 ಅರೆಕಾಲಿಕ ಕೆಲಸಗಳನ್ನು ಮಾಡಿದ ಸ್ವೀಪರ್ ಈಗ CA ಟಾಪರ್

ನವದೆಹಲಿ: ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಹರಿಯಾಣ ರಾಜ್ಯದ ಗೌರವ್ ಬಂಕಾ ಅಗ್ರಸ್ಥಾನ ಪಡೆದಿದ್ದಾರೆ. ಸಾಲು ಸಾಲು ಸವಾಲುಗಳನ್ನು ಮೆಟ್ಟಿ ಗೌರವ್ ಬಂಕಾ ಈ ಸಾಧನೆ ಮಾಡಿರುವುದು ಅನೇಕರಿಗೆ ಸ್ಪೂರ್ತಿಯೇ ಸರಿ.

ಗೌರವ್ ಬಂಕಾ ಏಳನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ಅವರು ಕೆಲಸ ಹುಡುಕಲು ಮನೆ ಬಿಟ್ಟು ಹೋದರು ಮತ್ತು ಹಲವು ತಿಂಗಳುಗಳ ಕಾಲ ಸ್ವೀಪರ್ ಕೆಲಸ ಮಾಡಬೇಕಾಯಿತು. CA ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯುವ ಮೊದಲು ಅವರು ಏಕಕಾಲದಲ್ಲಿ ಮೂರು ಅರೆಕಾಲಿಕ ಕೆಲಸಗಳನ್ನು ಮಾಡಿದ್ದೇನೆ ಎಂದು ಗೌರವ್ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಗೌರವ್ ಬಂಕಾ ತಮ್ಮ ಕಷ್ಟದ ಜೀವನವನ್ನು ಬಿಚ್ಚಿಟ್ಟಿದ್ದಾರೆ. "ನಾನು 7ನೇ ವಯಸ್ಸಿನಲ್ಲಿ ನನ್ನ ತಂದೆಯನ್ನು ಕಳೆದುಕೊಂಡೆ, ಮನೆ ಬಿಟ್ಟು ಕಂಪ್ಯೂಟರ್ ಕೆಲಸಕ್ಕಾಗಿ ಭಿವಾನಿಗೆ ಬಂದೆ. ಆದರೆ ಲಭ್ಯವಿರುವ ಏಕೈಕ ಕೆಲಸವೆಂದರೆ ಕಸ ಗುಡಿಸುವುದು. ತಿಂಗಳುಗಳ ಕಾಲ ನಾನು ಕಸ ಗುಡಿಸುತ್ತಿದ್ದೆ. ನಾನು ಒಂದೇ ಬಾರಿಗೆ ಮೂರು ಅರೆಕಾಲಿಕ ಕೆಲಸಗಳನ್ನು ಮಾಡಿದ್ದೆ. ನಂತರ ನಾನು ಸಿಎ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದೆ" ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

23/07/2025 08:16 pm

Cinque Terre

44.28 K

Cinque Terre

2

ಸಂಬಂಧಿತ ಸುದ್ದಿ