ಆಂಧ್ರಪ್ರದೇಶ: ನಗರದ ಕಾಡುಗೋಡಿ ಮೂಲದ ಉದ್ಯಮಿಗಳನ್ನು ಆಂಧ್ರಪ್ರದೇಶದ ಬಾಪೆಟ್ಲುವಿನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಕಾಡುಗೋಡಿಯ ವೀರಸ್ವಾಮಿ ರೆಡ್ಡಿ ಮತ್ತು ಪುತ್ರ ಪ್ರಶಾಂತ್ ರೆಡ್ಡಿ ಕೊಲೆಯಾಗಿದ್ದಾರೆ.
ಮುಂಬರುವ ಕಾರ್ಪೊರೇಟರ್ ಚುನಾವಣೆಯಲ್ಲಿ ನಿಲ್ಲಲು ವೀರಸ್ವಾಮಿ ರೆಡ್ಡಿ ಮುಂದಾಗಿದ್ದರು. ಪುತ್ರ ಪ್ರಶಾಂತ್ ರೆಡ್ಡಿ ಮಹಾದೇವಪುರ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷನಾಗಿದ್ದ. ಜಮೀನು ಖರೀದಿಗಾಗಿ ಅಪ್ಪ- ಮಗ ವ್ಯವಹಾರ ನಡೆಸಿದ್ರಂತೆ. ಆದ್ರೆ, ಈ ವ್ಯವಹಾರದಲ್ಲಿ ವೀರಸ್ವಾಮಿಗೆ ಮೋಸವಾಗಿತ್ತಂತೆ. ಇಂದು ಬಾಪೆಟ್ಲದಲ್ಲಿ ಚೆಕ್ ಬೌನ್ಸ್ ಕೇಸ್ ಒಂದರಲ್ಲಿ ಅಪ್ಪ- ಮಗ ಇಬ್ಬರೂ ಕೋರ್ಟ್ ಗೆ ಹೋಗಿದ್ದಾಗ ದುರ್ಘಟನೆ ನಡೆದಿದೆ.
ಜಮೀನು ಖರೀದಿ ವ್ಯವಹಾರದಲ್ಲಿ ಸೆಟಲ್ಮೆಂಟ್ ಮಾಡುವುದಾಗಿ ಅಪ್ಪ-ಮಗನನ್ನು ಕಿಡ್ನ್ಯಾಪ್ ಮಾಡಿ ತಂದೆ- ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾರಂತೆ. ಸದ್ಯ ಬಾಪೆಟ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ
PublicNext
24/07/2025 08:15 am