", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/387839-1753423642-Untitled-design---2025-07-25T114121.901.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳು ಜನಮನ ಸೆಳೆಯುತ್ತಿವೆ. ಆ ಸಾಲಿಗೆ ELEVEN ELEMENTS ಮತ್ತು RECTANGLE S...Read more" } ", "keywords": "Father's Day, father-son bond, movies, relationships, family drama, emotional journey ", "url": "https://dashboard.publicnext.com/node" }
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳು ಜನಮನ ಸೆಳೆಯುತ್ತಿವೆ. ಆ ಸಾಲಿಗೆ ELEVEN ELEMENTS ಮತ್ತು RECTANGLE STUDIOS ಒಟ್ಟಿಗೆ ರೂಪಿಸಿರುವ “ಫಾದರ್ಸ್ ಡೇ” ಕೂಡ ಸೇರಲಿದೆ ಎಂಬ ನಂಬಿಕೆಯಲ್ಲಿ ಚಿತ್ರತಂಡ ಇದೆ.
ಈ ಚಿತ್ರದ ನಿರ್ದೇಶನ ರಾಜಾರಾಮ್ ರಾಜೇಂದ್ರನ್ ಮಾಡಿದ್ದು, “ಆಚಾರ್ & ಕೋ”, “ಸಪ್ತಸಾಗರದಾಚೆ ಎಲ್ಲೋ”, “ಅನಾಮಧೇಯ ಅಶೋಕ್ ಕುಮಾರ್” ಮುಂತಾದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ ಹರ್ಷಿಲ್ ಕೌಶಿಕ್ ಮತ್ತು “ಶ್ರೀರಸ್ತು ಶುಭಮಸ್ತು” ಸೇರಿದಂತೆ ಧಾರಾವಾಹಿಗಳ ಮೂಲಕ ಮನೆಮಾತಾದ ಅಜಿತ್ ಹಂಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೆಸರಾಂತ ಗಾಯಕ ALL OK ಹಾಗೂ ಸಾಮ್ರಾಗ್ನಿ ರಾಜನ್ ಸಹ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದು ಒಂದು ಪಯಣಾಧಾರಿತ ಕಥಾಹಂದರ ಹೊಂದಿದ ಚಿತ್ರವಾಗಿದ್ದು, ಕನ್ನಡದ ಮೊದಲ ಬೈಕಿಂಗ್ ಕುರಿತ ಕಥೆಯನ್ನು ಹೇಳಲು ಪ್ರಯತ್ನಿಸುತ್ತದೆ. ಇಬ್ಬರೂ ಬೈಸಿಕಲ್ ಪಯಣಿಕರಾಗಿದ್ದರೂ, ತಮ್ಮ ನಡುವೆ ಇರುವ ತಂದೆ-ಮಗ ಸಂಬಂಧವನ್ನು ಚಿತ್ರ ಅವಸಾನದವರೆಗೂ ಅರಿಯದಿರುವ ಅಪರೂಪದ ಕಥೆಯು “ಫಾದರ್ಸ್ ಡೇ”ಯನ್ನು ವಿಶಿಷ್ಟವಾಗಿಸುತ್ತದೆ.
ಈ ಸಂಬಂಧದ ಚಂದದ ಚಿತ್ರಣದ ಜೊತೆಗೆ, ಚಿತ್ರದಲ್ಲಿನ ಸವಿನೆನಪಿನ ಕ್ಷಣಗಳು ಮತ್ತು ನಗು ಹುಟ್ಟಿಸುವ ಸಂದರ್ಭ ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುವ ಸಾಧ್ಯತೆ ಹೆಚ್ಚು.
ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಮೊದಲ ಪ್ರವೇಶವಾಗಿ ಬಿಡುಗಡೆಗೊಂಡಿರುವ ಟೀಸರ್ ಚಿತ್ರದ ಬಗ್ಗೆ ಜನರ ಕುತೂಹಲವನ್ನು ಹೆಚ್ಚಿಸಿದೆ. ಜ್ಯೋಲ್ಸ್ನಾ ಪ್ಯಾನಿಕರ್ ಅವರ ಸಂಕಲನ ಮತ್ತು ಜೋ ಪ್ಯಾನಿಕರ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ಬಲ ನೀಡಿವೆ.
PublicNext
25/07/2025 11:37 am