", "articleSection": "Politics,Business,International", "image": { "@type": "ImageObject", "url": "https://prod.cdn.publicnext.com/s3fs-public/52563-1753516437-WhatsApp-Image-2025-07-26-at-12.47.06-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜತೆ ಭಾರತದ ವ್ಯಕ್ತಿ...Read more" } ", "keywords": "Chai Pe Charcha UK, Indian-origin Chaiwala, PM Modi appreciation, British Parliament, Rishi Sunak, BBC documentary controversy, Indian diaspora UK"", "url": "https://dashboard.publicnext.com/node" }
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಜತೆ ಭಾರತದ ವ್ಯಕ್ತಿ ತಯಾರಿಸಿದ ಚಹಾ ಸವಿದಿದ್ದಾರೆ.
ಹೌದು ಯುಕೆ ಪ್ರಧಾನಿ ಅಧಿಕೃತ ನಿವಾಸವಾದ ಚೆಕರ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಚಹಾ ಸೇವಿಸುವ ಮೂಲಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಅಮಲಾ ಚಾಯ್ ಮಾಲೀಕ ಭಾರತೀಯ ಮೂಲದ ಉದ್ಯಮಿ ಅಖಿಲ್ ಪಟೇಲ್ , ಯುಕೆ ಪ್ರಧಾನಿ ನಿವಾಸದಲ್ಲಿ ತಾತ್ಕಾಲಿಕ ಟೀ ಸ್ಟಾಲ್ ಸ್ಥಾಪಿಸಿದ್ದು, ಈ ವೇಳೆ ಪಟೇಲ್ ಮತ್ತು ಪ್ರಧಾನಿ ಮೋದಿ ನಡುವೆ ನಡೆದ ಹೃದಯಸ್ಪರ್ಶಿ ಸಂವಾದದ ವಿಡಿಯೋ ವೈರಲ್ ಆಗಿದೆ.
ಇಬ್ಬರು ನಾಯಕರು ತಮ್ಮ ಅಂಗಡಿಗೆ ಬಂದಾಗ, ವರ್ಣರಂಜಿತ ನೆಹರೂ ಜಾಕೆಟ್ ಧರಿಸಿದ ಪಟೇಲ್, ತಮ್ಮ ಚಹಾ ಪುಡಿಯನ್ನು ಭಾರತದ ಅಸ್ಸಾಂನಿಂದ, ಅದಕ್ಕೆ ಬಳಸುವ ಮಸಾಲೆಗಳನ್ನು ಕೇರಳದಿಂದ ತರಲಾಗುತ್ತದೆ. ಆದರೆ, ಲಂಡನ್‌ನಲ್ಲಿ ತಯಾರಿಸಲಾಗುತ್ತದೆ ಎಂದು ಪಟೇಲ್, ಸ್ಟಾರ್ಮರ್‌ಗೆ ಒಂದು ಕಪ್ ಚಹಾ ನೀಡುತ್ತಾ ಹೇಳಿದರು.
ಪಟೇಲ್ ಅವರು ಪ್ರಧಾನಿ ಮೋದಿಯವರಿಗೆ ಒಂದು ಕಪ್ ಚಹಾವನ್ನು ಹಸ್ತಾಂತರಿಸುವಾಗ ಹೇಳಿದ ಮಾತೊಂದು ಸದ್ಯ ಎಲ್ಲರ ಗಮನ ಸೆಳೆದಿದೆ, ಒಬ್ಬ ಚಾಯ್‌ವಾಲಾದಿಂದ ಇನ್ನೊಬ್ಬ ಚಾಯ್ವಾಲಾಗೆ ಎಂಬ ಮಾತು ವಿಡಿಯೋದಲ್ಲಿದೆ. ಆ ಹಾಸ್ಯಕ್ಕೆ ಮೋದಿ ನಗುತ್ತಾ, ತಲೆಯಾಡಿಸುವುದರೊಂದಿಗೆ ಪ್ರತಿಕ್ರಿಯಿಸಿದರು.
ಈ ವೇಳೆ ಮೋದಿ, ಸ್ಟಾರ್ಮರ್ ಅವರಿಗೆ ‘ನೀವು ಭಾರತದ ರುಚಿ ಸವಿಯಲಿದ್ದೀರಿ’ ಎಂದು ಹೇಳಿದ್ದು, ಇಬ್ಬರೂ ಚಹಾ ಸವಿದಿದ್ದಾರೆ.
ಈ ಸಂವಾದದ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ. “ಚೆಕರ್ಸ್‌ನಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಚಾಯ್ ಪೆ ಚರ್ಚಾ, ಭಾರತ-ಯುಕೆ ಸಂಬಂಧಗಳನ್ನು ಬಲಪಡಿಸುತ್ತದೆ!” ಎಂದು ಟ್ವೀಟ್ ಮಾಡಿದ್ದಾರೆ.
PublicNext
26/07/2025 03:03 pm