", "articleSection": "Science and Technology,Government,International", "image": { "@type": "ImageObject", "url": "https://prod.cdn.publicnext.com/s3fs-public/387839-1753856405-Untitled-design---2025-07-30T115407.872.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು/ವಾಷಿಂಗ್ಟನ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ನಾಸಾ-ಇಸ್ರೋ ಸಿಂಥೆಟಿಕ್ ...Read more" } ", "keywords": "NISAR satellite launch, India-US space collaboration, Earth observation, synthetic aperture radar, GSLV-F16 rocket, Sriharikota launch site, NASA-ISRO joint mission, climate change monitoring, natural disaster prediction, high-resolution Earth imaging ", "url": "https://dashboard.publicnext.com/node" } ಬಾಹ್ಯಾಕಾಶದತ್ತ ಭಾರತ -ಅಮೆರಿಕದ ಹೊಸ ಹೆಜ್ಜೆ : ‘ನಿಸಾರ್’ ಉಪಗ್ರಹ ಇಂದು ನಭೋಮಂಡಲಕ್ಕೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಹ್ಯಾಕಾಶದತ್ತ ಭಾರತ -ಅಮೆರಿಕದ ಹೊಸ ಹೆಜ್ಜೆ : ‘ನಿಸಾರ್’ ಉಪಗ್ರಹ ಇಂದು ನಭೋಮಂಡಲಕ್ಕೆ

ಬೆಂಗಳೂರು/ವಾಷಿಂಗ್ಟನ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿದ "ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್' ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಗೆ ಸಜ್ಜಾಗಿದೆ.

ಈ ಉಪಗ್ರಹವು ಭಾರತೀಯ ಕಾಲಮಾನ ಪ್ರಕಾರ ಸಂಜೆ 5:40ಕ್ಕೆ ಇಸ್ರೋದ GSLV-F16 ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ತೆರಳಲಿದೆ. ನಿಸಾರ್ ಅನ್ನು ಈತನಕ ಶ್ರೀಹರಿಕೋಟಾದಿಂದ ಉಡಾವಣೆಗೊಂಡ 102ನೇ ಉಪಗ್ರಹವಾಗಿಸಲಿದೆ.

₹13,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಈ ಉಪಗ್ರಹವನ್ನು ಭೂಮಿಯ ಮೇಲ್ಮೈ ಪ್ರತ್ಯಕ್ಷ ವೀಕ್ಷಣೆಗೆ ಬಳಸಲಾಗುತ್ತದೆ. ಹವಾಮಾನ ಬದಲಾವಣೆ, ಪ್ರವಾಹ, ಮಣ್ಣಿನ ತೇವಾಂಶ, ಅರಣ್ಯ ನಾಶ, ಹಿಮನದಿಗಳ ಬದಲಾವಣೆ, ಬೆಳೆಯ ಆರೋಗ್ಯ, ನಗರೀಕರಣ ಮುಂತಾದ ಹಲವು ಅಂಶಗಳ ಕುರಿತ ಅಮೂಲ್ಯ ಮಾಹಿತಿಯನ್ನು ಇದು ಒದಗಿಸಲಿದೆ.

ಸೂಕ್ಷ್ಮ ಕಾರ್ಯಾಚರಣೆ, ಉಚಿತ ದತ್ತಾಂಶ:

ನಿಸಾರ್ ಉಪಗ್ರಹವು 747 ಕಿಮೀ ಎತ್ತರದ ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಸ್ಥಾಪಿತವಾಗುತ್ತದೆ. ಇದಾದ ನಂತರ 90 ದಿನಗಳ ‘ಕಮಿಷನಿಂಗ್ ಹಂತ’ ನಡೆಯುತ್ತದೆ. ಈ ಅವಧಿಯಲ್ಲಿ ಉಪಗ್ರಹದ ವೈಜ್ಞಾನಿಕ ಸಾಧನಗಳನ್ನು ಇನ್ಆರ್ಬಿಟ್ ಚೆಕೌಟ್ ಪ್ರಕ್ರಿಯೆ ಮೂಲಕ ಪರೀಕ್ಷಿಸಲಾಗುತ್ತದೆ. ಸಂಪೂರ್ಣ ಕಾರ್ಯಾಚರಣೆ ಅಕ್ಟೋಬರ್ ಅಂತ್ಯದ ವೇಳೆಗೆ ಆರಂಭವಾಗಲಿದೆ.

ಈ ಉಪಗ್ರಹದ ವಿಶಿಷ್ಟ ಅಂಶವೆಂದರೆ ಬಾಹ್ಯಾಕಾಶದಲ್ಲಿ 12 ಮೀಟರ್ ವ್ಯಾಸದ ಬೃಹತ್ ಪ್ರತಿಫಲಕ (ರಿಫ್ಲೆಕ್ಟರ್) ತೆರೆದಿಡಬೇಕಿರುವುದು. ಇದು ಈತನಕ ಬಾಹ್ಯಾಕಾಶಕ್ಕೆ ಕಳಿಸಲಾದ ಭೂ ವೀಕ್ಷಣಾ ಉಪಗ್ರಹಗಳಿಗಿಂತ ದೊಡ್ಡದಾದ ಆ್ಯಂಟೆನಾಗಿದ್ದು, ಅದು ತೆರೆದಾಗ ಒಂದು ಟೆನ್ನಿಸ್ ಮೈದಾನದಷ್ಟು ವಿಸ್ತೀರ್ಣ ಹೊಂದಿರಲಿದೆ.

ಸಮಗ್ರ ದತ್ತಾಂಶ ಉಚಿತವಾಗಿ ಲಭ್ಯ:

ನಿಸಾರ್ ಕಳುಹಿಸುವ ಎಲ್ಲಾ ವೈಜ್ಞಾನಿಕ ದತ್ತಾಂಶಗಳು ಜಗತ್ತಿನ ಎಲ್ಲ ದೇಶಗಳಿಗೆ ಉಚಿತವಾಗಿ ಲಭ್ಯವಾಗುತ್ತವೆ. ಇದು ಭೂಮಿಯ ಸತತ ಅಧ್ಯಯನ ಹಾಗೂ ವೈಜ್ಞಾನಿಕ ಸಂಶೋಧನೆಗೆ ಪ್ರೇರಕವಾಗಲಿದೆ. ಇದೇ ಮೂಲಕ ಭಾರತ ಮತ್ತು ಅಮೆರಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂದಿನ ದಶಕಗಳ ಸಹಕಾರಕ್ಕೆ ಶಕ್ತಿಶಾಲಿ ಬುನಾದಿ ಹಾಕಿವೆ.

Edited By : Abhishek Kamoji
PublicNext

PublicNext

30/07/2025 11:50 am

Cinque Terre

46.53 K

Cinque Terre

0

ಸಂಬಂಧಿತ ಸುದ್ದಿ