ನವದೆಹಲಿ : ಭಾರತದ ಎಲ್ಲಾ ಆಮದು ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ ಕೆಲವೇ ಗಂಟೆಗಳಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ರಷ್ಯಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ತಮ್ಮ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.
ಅವರು ತಮ್ಮ ಟ್ರೂತ್ ಸೋಶಿಯಲ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿ, ಭಾರತವು ರಷ್ಯಾದೊಂದಿಗೆ ಏನು ಮಾಡುತ್ತದೆ ಎಂಬುದು ನನಗೆ ಮುಖ್ಯವಲ್ಲ. ‘ರಷ್ಯಾ ಜೊತೆ ಭಾರತ ಏನು ಮಾಡುತ್ತೆ ಎಂದು ನನಗೇನೂ ಆಗಬೇಕಾದ್ದಿಲ್ಲ. ಅವೆರಡೂ ಸತ್ತ ಆರ್ಥಿಕತೆಗಳು ಒಟ್ಟಿಗೆ ನೆಲಕಚ್ಚುವಂತಾಗಬೇಕು’ ಎಂದು ಟ್ರಂಪ್ ಹಿಡಿಶಾಪ ಹಾಕಿದ್ದಾರೆ.
ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಭಾರತೀಯ ಸರಕುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ ನಂತರ ತಮ್ಮ ಪ್ರತಿಕ್ರಿಯೆ ಮುಂದುವರಿಸಿದ್ದಾರೆ. ಭಾರತದ ವ್ಯಾಪಾರಿ ನೀತಿಗಳು ಅತ್ಯಂತ ಕಠಿಣ ಮತ್ತು ಅಸಹ್ಯ ಕರವಾಗಿವೆ. ಎಲ್ಲವೂ ಸರಿಯಾಗಿಲ್ಲ. ಅದಕ್ಕಾಗಿಯೇ ಭಾರತವು ಶೇ. 25 ಸುಂಕವನ್ನು ಎದುರಿಸಬೇಕಾಗಿದೆ, ಜತೆಗೆ ದಂಡ ಕೂಡ ಎಂದಿದ್ದಾರೆ.
PublicNext
01/08/2025 10:41 am