", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/463655-1754063056-manjunath---2025-08-01T211411.045.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳ...Read more" } ", "keywords": ""Priyank Kharge attacks BJP, Karnataka CM post not vacant, Siddaramaiah CM, Congress party unity, BJP criticized by Priyank Kharge, Karnataka politics, CM Siddaramaiah statement, Priyank Kharge latest news" ", "url": "https://dashboard.publicnext.com/node" } "ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ," ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ," ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ನವದೆಹಲಿ: "ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ," ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ರಾಜ್ಯ ಬಿಜೆಪಿಯು ತನ್ನ ವೈಫಲ್ಯಗಳನ್ನು ಮರೆಮಾಡಲು ಸುಳ್ಳು ವದಂತಿಗಳನ್ನು ಹರಡುತ್ತಿದೆ ಎಂದು ಆರೋಪಿಸಿದ ಅವರು, "ಬಿಜೆಪಿಯ ಬಿಕ್ಕಟ್ಟಿಗೆ ಮುಚ್ಚುಮರೆ ನೀಡುವುದಕ್ಕಾಗಿ ಇಂತಹ ನಕಲಿ ಚರ್ಚೆಗಳನ್ನು ಸೃಷ್ಟಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕುವ ಕುರಿತು ಯಾವುದೇ ಪ್ರಸ್ತಾಪ ಕಾಂಗ್ರೆಸ್‌ನಲ್ಲಿಲ್ಲ "ನಾಯಕತ್ವ ಬದಲಾವಣೆಯ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಹಳ ಸ್ಪಷ್ಟವಾಗಿ ಹೇಳಿರುವಾಗ, ಇಂತಹ ಮಾತುಗಳು ಎಲ್ಲಿಂದ ಬರುತ್ತವೆ ಎಂಬುದೇ ಅರ್ಥವಾಗುತ್ತಿಲ್ಲ," ಎಂದು ಖರ್ಗೆ ಪ್ರಶ್ನಿಸಿದರು.

"ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ನ ನಿಲುವು ಸ್ಪಷ್ಟವಾಗಿದೆ. ಬೇರೆಯವರು ಎಷ್ಟೇ ಮಾತಾಡಿದರೂ, ನಾವು ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ," ಎಂದರು. ನಾಯಕತ್ವ ಬದಲಾವಣೆಯ ಬಗ್ಗೆ ಉಂಟಾಗಿರುವ ಊಹಾಪೋಹಗಳ ಹಿನ್ನೆಲೆಯ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, "ಬಿಜೆಪಿ ಈಗ ಛಿದ್ರ ಛಿದ್ರವಾಗಿರುವ ಪಕ್ಷ. ಅವರಲ್ಲಿ ನಾಯಕರೇ ಇಲ್ಲ. ಅವ್ಯವಸ್ಥೆ ಹಬ್ಬಿಕೊಂಡಿದೆ. ಸದನದಲ್ಲಿ ಅವರ ನಡೆ ಈ ಅಸ್ಥಿರತೆಗೆ ಸಾಕ್ಷಿಯಾಗಿದೆ," ಎಂದು ಟೀಕಿಸಿದರು.

"ಯಾವುದೇ ವಿಷಯದ ಬಗ್ಗೆ ನಿಲುವು ತೆಗೆದುಕೊಳ್ಳುವಾಗ, ಅವರ ಅರ್ಧದಷ್ಟು ಶಾಸಕರು ಸದನದಿಂದ ಹೊರನಡೆದರೆ, ಉಳಿದವರು ಬಾವಿಗೆ ಇಳಿಯುತ್ತಾರೆ. ಇದು ನಾಯಕತ್ವದ ಕೊರತೆಯ ಪ್ರತೀಕ," ಎಂದರು.

Edited By :
PublicNext

PublicNext

01/08/2025 09:14 pm

Cinque Terre

53.87 K

Cinque Terre

1

ಸಂಬಂಧಿತ ಸುದ್ದಿ