", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/styles/large/public/videos/thumbnails/2279065/thumbnail-2279065_0001.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ಭಾರತೀಯ ಮೂಲದ ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ರದ್ದಾಗಿಲ್ಲ ಯಮೆನ್ ಗಲ್ಲು ಶಿಕ್ಷೆಯನ್ನು ಮುಂದೂಡಿದೆ, ಕೇಂದ್ರ ವಿದೇಶಾಂಗ...Read more" } ", "keywords": ""Nimisha Priya death sentence, Yemen execution, Indian nurse case, Ministry of External Affairs clarification, diplomatic efforts, Nimisha Priya news, death penalty Yemen, Indian government intervention" ", "url": "https://dashboard.publicnext.com/node" }
ನವದೆಹಲಿ: ಭಾರತೀಯ ಮೂಲದ ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ರದ್ದಾಗಿಲ್ಲ ಯಮೆನ್ ಗಲ್ಲು ಶಿಕ್ಷೆಯನ್ನು ಮುಂದೂಡಿದೆ, ಕೇಂದ್ರ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಕೊಲೆ ಪ್ರಕರಣ ಸಂಬಂಧ ಯೆಮನ್ ಕೋರ್ಟ್ ನಿಮಿಷ ಪ್ರಿಯಾಗೆ ಜುಲೈ 16 ರಂದು ಗಲ್ಲು ಶಿಕ್ಷೆ ಜಾರಿಗೊಳಿಸಲು ಸೂಚಿಸಿತ್ತು. ಕೇಂದ್ರ ಸರ್ರಕಾರ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿತ್ತು. ಇತ್ತ ಹಲವು ಸಂಘಟನೆಗಳು, ಸಮುದಾಯದ ನಾಯಕರು ಮಾತುಕತೆಗೆ ಮುಂದಾಗಿದ್ದರು. ಇದರ ಬೆನ್ನಲ್ಲೇ ಕೆಲ ಸಮುದಾಯದ ನಾಯಕರು ನಿಮಿಷ ಪ್ರಿಯಾ ಗಲ್ಲು ಶಿಕ್ಷೆ ರದ್ದಾಗಿದೆ. ಆಕೆ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದರು.
ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರಂಧೀರ್ ಜೈಸ್ವಾಲ್, ಅವರು ತಪ್ಪು ಮಾಹಿತಿ ಹರಡಬೇಡಿ ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಯೆಮೆನ್ ಅಧಿಕಾರಿಗಳ ಜೊತೆ, ಭಾರತ ನಿರಂತರ ಮಾತುಕತೆ ನಡೆಸುತ್ತಿದೆ. ನಿಮಿಷ ಪ್ರಿಯಾಗೆ ಕಾನೂನಾತ್ಮಕ ನೆರವನ್ನು ಭಾರತ ಸರ್ಕಾರ ನೀಡುತ್ತಿದೆ. ಸದ್ಯ ಯೆಮನ್ ದೇಶ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ ಶಿಕ್ಷೆ ರದ್ದಾಗಿಲ್ಲ ಎಂದು ರಂಧೀರ್ ಜೈಸ್ವಾಲ್ ಹೇಳಿದ್ದಾರೆ.
ಇತ್ತೀಚೆಗೆ ಗ್ಲೋಬಲ್ ಫೀಸ ಫೌಂಡೇಶನ್ ಮುಖ್ಯಸ್ಥ ಡಾ.ಪೌಲ್ ವಿಡಿಯೋ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದ್ದರು. ನಿಮಿಷ ಪ್ರಿಯಾ ಕುಟುಂಬದ ಪರವಾಗಿ, ಭಾರತದ ಪರವಾಗಿ ತಾನು ಯೆಮೆನ್ ದೇಶದ ಅಧಿಕಾರಿಗಳು, ನಾಯಕರ ಜೊತೆ ಮಾತನಾಡಿದ್ದೇನೆ. ಯೆಮೆನ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹಿಂಪಡೆದಿದೆ. ನಿಮಿಷ ಪ್ರಿಯಾ ಬಿಡುಗಡೆಯಾಗಲಿದ್ದಾರೆ ಎಂದು ಕೆಎಲ್ ಪೌಲ್ ವಿಡಿಯೋ ಮೂಲಕ ಹೇಳಿದ್ದರು. ಆದರೆ ಇದು ತಪ್ಪು ಮಾಹಿತಿ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ತಪ್ಪು ಮಾಹಿತಿ ಹರದಂಡೆ ವಿದೇಶಾಂಗ ಇಲಾಖೆ ಸೂಚಿಸಿದೆ.
PublicNext
01/08/2025 09:49 pm