", "articleSection": "Politics,Business,International", "image": { "@type": "ImageObject", "url": "https://prod.cdn.publicnext.com/s3fs-public/222042-1754036750-Canva---2025-08-01T135540.867.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 68 ದೇಶ ಅಥವಾ ಗುಂಪಿನ ಸರಕುಗಳ ಮೇಲೆ ಆಮದು ಸುಂಕವನ್ನು ಪ್ರಕಟಿಸಿದ್ದಾರೆ. ಆಗಸ್ಟ್ 1...Read more" } ", "keywords": "Trump tariffs, India US trade, friend countries tariffs, revised tariff rates, trade war, US imports, India trade news, global trade impact, ", "url": "https://dashboard.publicnext.com/node" }
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 68 ದೇಶ ಅಥವಾ ಗುಂಪಿನ ಸರಕುಗಳ ಮೇಲೆ ಆಮದು ಸುಂಕವನ್ನು ಪ್ರಕಟಿಸಿದ್ದಾರೆ. ಆಗಸ್ಟ್ 1, ಇಂದಿನಿಂದ ಈ ಪರಿಷ್ಕೃತ ಟ್ಯಾರಿಫ್ ದರಗಳು ಅನ್ವಯ ಆಗುತ್ತಿವೆ. ಅತ್ಯಧಿಕ ಸುಂಕ ವಿಧಿಸಲಾದ ದೇಶಗಳ ಸಾಲಿನಲ್ಲಿ ಭಾರತವೂ ಇದೆ.
ಸಿರಿಯಾ ದೇಶಕ್ಕೆ ಗರಿಷ್ಠ ಶೇ. 41ರಷ್ಟು ಸುಂಕ ಹಾಕಲಾಗಿದೆ. ಮಯನ್ಮಾರ್, ಲಾವೋಸ್, ಸ್ವಿಟ್ಜರ್ಲ್ಯಾಂಡ್, ಇರಾಕ್ ಮೊದಲಾದ ದೇಶಗಳೂ ಅಧಿಕ ಟ್ಯಾರಿಫ್ ಸಾಲಿಗೆ ಬರುತ್ತವೆ.
69 ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇಕಡಾ 10 ರಿಂದ ಶೇ 41 ರಷ್ಟು ಹೆಚ್ಚಿನ ಆಮದು ಸುಂಕ ದರಗಳನ್ನು ವಿಧಿಸಲಾಗಿದ್ದು, ಇದು ಏಳು ದಿನಗಳಲ್ಲಿ ಜಾರಿಗೆ ಬರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಮೆರಿಕದ ಸುಂಕ ಪಟ್ಟಿ ಇಂತಿದೆ
* ಭಾರತ -25%
* ಅಫ್ಗಾನಿಸ್ತಾನ - 35%
* ಅಲ್ಜೀರಿಯಾ - 30 %
* ಅಂಗೋಲಾ - 15 %
* ಬಾಂಗ್ಲಾದೇಶ - 20%
* ಬೊಲಿವಿಯಾ - 15%
* ಬೋಸ್ನಿಯಾ ಮತ್ತು ಹರ್ಜೆಗೋವಿನಾ - 30%
* ಬೋಟ್ಸ್ವಾನಾ - 15%
* ಬ್ರೆಜಿಲ್ - 10%
* ಬ್ರೂನಿ - 25%
* ಕಾಂಬೋಡಿಯಾ - 19%
* ಕ್ಯಾಮರೂನ್ - 15%
* ಚಾಡ್ - 15%
* ಕೋಸ್ಟಾ ರಿಕಾ - 15%
* ಕೋಟ್ ಡಿ`ಐವೊಯಿರ್ - 15%
* ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ - 15%
* ಈಕ್ವೆಡಾರ್ - 15%
* ಈಕ್ವಟೋರಿಯಲ್ ಗಿನಿಯಾ - 15%
* ಯುರೋಪಿಯನ್ ಒಕ್ಕೂಟ: ಕಾಲಮ್ 1 ಸುಂಕ ದರ -5%
* ಫಾಕ್ಲ್ಯಾಂಡ್ ದ್ವೀಪಗಳು - 10%
* ಫಿಜಿ - 15%
* ಘಾನಾ - 15%
* ಗಯಾನಾ -15%
* ಐಸ್ಲ್ಯಾಂಡ್ -15%
* ಇಂಡೋನೇಷ್ಯಾ - 19%
* ಇರಾಕ್ - 35%
* ಇಸ್ರೇಲ್ - 15%
* ಜಪಾನ್ - 15%
* ಜೋರ್ಡಾನ್ - 15%
* ಕಝಾಕಿಸ್ತಾನ್ - 25%
* ಲಾವೋಸ್ - 40%
* ಲೆಸೊಥೊ - 15%
* ಲಿಬಿಯಾ - 30%
* ಲಿಚ್ಟೆನ್‌ಸ್ಟೈನ್ - 15%
* ಮಡಗಾಸ್ಕರ್ - 15%
* ಮಲಾವಿ - 15%
* ಮಲೇಷ್ಯಾ - 19%
* ಮಾರಿಷಸ್ - 15%
* ಮಾಲ್ಡೊವಾ - 25%
* ಮ್ಯಾನ್ಮಾರ್ (ಬರ್ಮಾ) - 40%
* ಮೊಜಾಂಬಿಕ್ - 15%
* ನಮೀಬಿಯಾ - 15%
* ನೌರು - 15%
* ನ್ಯೂಜಿಲೆಂಡ್ - 15%
* ನಿಕರಾಗುವಾ - 18%
* ನೈಜೀರಿಯಾ - 15%
* ಉತ್ತರ ಮ್ಯಾಸಿಡೋನಿಯಾ - 15%
* ನಾರ್ವೆ - 15%
* ಪಾಕಿಸ್ತಾನ - 19%
* ಪಪುವಾ ನ್ಯೂಗಿನಿ - 15%
* ಫಿಲಿಪೈನ್ಸ್ - 19%
* ಸೆರ್ಬಿಯಾ - 35%
* ದಕ್ಷಿಣ ಆಫ್ರಿಕಾ - 30%
* ದಕ್ಷಿಣ ಕೊರಿಯಾ - 15%
* ಶ್ರೀಲಂಕಾ - 20%
* ಸ್ವಿಟ್ಜರ್ಲೆಂಡ್ - 39%
* ಸಿರಿಯಾ - 41%
* ತೈವಾನ್ - 20%
* ಥೈಲ್ಯಾಂಡ್ - 19%
* ಟ್ರಿನಿಡಾಡ್ ಮತ್ತು ಟೊಬಾಗೊ - 15%
* ಟುನೀಶಿಯಾ 25%
* ಟರ್ಕಿ - 15%
* ಉಗಾಂಡಾ - 15%
* ಬ್ರಿಟನ್ - 10%
* ವನವಾಟು - 15%
* ವೆನೆಜುವೆಲಾ - 15%
* ವಿಯೆಟ್ನಾಂ - 20%
* ಜಾಂಬಿಯಾ - 15%
* ಜಿಂಬಾಬ್ವೆ - 15%
PublicNext
01/08/2025 01:56 pm