", "articleSection": "Politics,International", "image": { "@type": "ImageObject", "url": "https://prod.cdn.publicnext.com/s3fs-public/387839-1754112542-Untitled-design---2025-08-02T110256.397.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಾಷಿಂಗ್ಟನ್ : ಉಕ್ರೇನ್ ಯುದ್ಧ ಮತ್ತು ವಿವಿಧ ರಾಷ್ಟ್ರಗಳ ಮೇಲೆ ಸುಂಕ ಹೇರಿಕೆ ಕುರಿತಾಗಿ ರಷ್ಯಾದ ರಾಜಕಾರಣಿ ಹಾಗೂ ಅಧಿಕಾರಿಯಾದ ಡಿಮಿಟ್ರಿ ಮೆಡ್...Read more" } ", "keywords": "Donald Trump, Dmitry Medvedev, nuclear-powered submarines, Iran nuclear deal, nuclear warheads, US-Russia relations, military deployment. ", "url": "https://dashboard.publicnext.com/node" }
ವಾಷಿಂಗ್ಟನ್ : ಉಕ್ರೇನ್ ಯುದ್ಧ ಮತ್ತು ವಿವಿಧ ರಾಷ್ಟ್ರಗಳ ಮೇಲೆ ಸುಂಕ ಹೇರಿಕೆ ಕುರಿತಾಗಿ ರಷ್ಯಾದ ರಾಜಕಾರಣಿ ಹಾಗೂ ಅಧಿಕಾರಿಯಾದ ಡಿಮಿಟ್ರಿ ಮೆಡ್ವೆಡೆವ್ ಜೊತೆ ಆನ್‌ಲೈನ್‌ನಲ್ಲಿ ನಡೆದ ಮಾತಿನ ಸಮರದ ಹಿನ್ನೆಲೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲು ಆದೇಶಿಸಿದ್ದಾರೆ.
ಟ್ರಂಪ್ ಮತ್ತು ಮೆಡ್ವೆಡೆವ್ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ದಿನಗಳಿಂದ ಮಾತಿನ ಚಕಮಕಿ ನಡೆಯುತ್ತಿದೆ. ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಪರಮಾಣು ಪಡೆಗಳ ಕುರಿತು ಉಲ್ಲೇಖಿಸಿದ್ದಾರೆ.
ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಅಥವಾ ಅನಿರ್ದಿಷ್ಟ ಹೊಸ ನಿರ್ಬಂಧಗಳನ್ನು ಎದುರಿಸಲು ರಷ್ಯಾಕ್ಕೆ ಮುಂದಿನ ವಾರದ ಅಂತ್ಯದ ವೇಳೆಗೆ ಟ್ರಂಪ್ ನಿಗದಿಪಡಿಸಿದ ಗಡುವಿನ ಹಿನ್ನೆಲೆಯಲ್ಲಿ ಪರಮಾಣು ಜಲಂತರ್ಗಾಮಿ ನೌಕೆ ನಿಯೋಜನೆ ದಾಳಿ ಬಂದಿದೆ.
ವಾಷಿಂಗ್ಟನ್‌ನ ರಾಜತಾಂತ್ರಿಕ ಒತ್ತಡದ ನಡುವೆಯೂ, ರಷ್ಯಾ ಪಾಶ್ಚಿಮಾತ್ಯ ಬೆಂಬಲಿತ ಉಕ್ರೇನ್ ವಿರುದ್ಧ ದಾಳಿಗಳನ್ನು ಮುಂದುವರಿಸಿದೆ. AFP ಹೊರಡಿಸಿದ ಜುಲೈನ ವಿಶ್ಲೇಷಣೆಯ ಪ್ರಕಾರ, ಕಳೆದ ತಿಂಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಖಲೆ ಸಂಖ್ಯೆಯ ಡ್ರೋನ್ ದಾಳಿಗಳನ್ನು ನಡೆಸಿದೆ.
ಜೂನ್‌ನಿಂದ ಅನೇಕ ಉಕ್ರೇನ್ ನಾಗರಿಕರು ಈ ದಾಳಿಗಳಲ್ಲಿ ಬಲಿಯಾಗಿದ್ದಾರೆ. ಗುರುವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೈವ್‌ನಲ್ಲಿ ನಡೆದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ಐದು ಮಕ್ಕಳು ಸೇರಿ 31 ಜನರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಟ್ರಂಪ್ ಅವರ ಪೋಸ್ಟ್‌ನಲ್ಲಿ ಯಾವ ಸ್ಥಳದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಲಾಗಿದೆ ಎಂಬುದನ್ನು ಅವರು ವಿವರಿಸಿಲ್ಲ. ಈ ರೀತಿಯ ಮಾಹಿತಿ ಸಾಮಾನ್ಯವಾಗಿ ಅಮೆರಿಕ ಸೇನೆಯ ರಹಸ್ಯ ಯೋಜನೆಯ ಭಾಗವಾಗಿರುತ್ತದೆ. ಪ್ರಪಂಚದ ಬಹುಪಾಲು ಪರಮಾಣು ಶಸ್ತ್ರಾಸ್ತ್ರಗಳನ್ನು ಅಮೆರಿಕ ಮತ್ತು ರಷ್ಯಾ ಹೊಂದಿದ್ದು, ಅಮೆರಿಕದ ಪರಮಾಣು ಜಲಾಂತರ್ಗಾಮಿ ನೌಕೆಗಳು ಭೂಮಿ, ಸಮುದ್ರ ಹಾಗೂ ಆಕಾಶದಲ್ಲಿ ಉಡಾವಣೆಯಾಗಬಹುದಾದ ಶಸ್ತ್ರಾಸ್ತ್ರಗಳ ತ್ರಿಕೋನದ ಭಾಗವಾಗಿ ನಿರಂತರ ಗಸ್ತುಗಳಲ್ಲಿ ತೊಡಗಿಸಿಕೊಂಡಿವೆ.
PublicNext
02/08/2025 10:59 am