ಬೆಂಗಳೂರು : ಒಳ ಮೀಸಲಾತಿ ನೆಪದಲ್ಲಿ ದಲಿತ ಸಚಿವರು ಮತ್ತು ಶಾಸಕರ ಮಹತ್ವದ ಸಭೆ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಅವರ ನಿವಾಸದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದಲ್ಲಿ ಒಳಮೀಸಲಾತಿ ಕಲ್ಪಿಸುವ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಟಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಪರಿಶಿಷ್ಟ ಸಮುದಾಯದ ಸಚಿವರು ಮತ್ತು ಶಾಸಕರ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಪರಮೇಶ್ವರ್ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗಿಯದರ ಪಟ್ಟಿ ಹೀಗಿದೆ.
ಸಚಿವರು
1. ಪರಮೇಶ್ವರ್, ಗೃಹ ಸಚಿವ
2. ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ
3. ಕೆಎಚ್ ಮುನಿಯಪ್ಪ, ಆಹಾರ ಸಚಿವ
4. ಆರ್‌ಬಿ ತಿಮ್ಮಾಪುರ, ಅಬಕಾರಿ ಸಚಿವ
5. ಎಚ್.ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ಶಾಸಕರು
1. ಬಸವಂತಪ್ಪ - ಮಾಯಕೊಂಡ ಶಾಸಕ
2. ಎಸಿ ಶ್ರೀನಿವಾಸ್ - ಪುಲಿಕೇಶಿನಗರ ಶಾಸಕ
3. ದರ್ಶನ್ ದೃವನಾರಾಯಣ್ - ನಂಜನಗೂಡು ಶಾಸಕ
4. ಮಹೇಂದ್ರ ತಮ್ಮಣ್ಣನವರ್ - ಕುಡಚಿ ಶಾಸಕ
5. ಶ್ರೀನಿವಾಸಯ್ಯ - ನೆಲಮಂಗಲ ಶಾಸಕ
6. ನಯನ ಮೋಟಮ್ಮ - ಮೂಡಿಗೆರೆ ಶಾಸಕಿ
7. ರುದ್ರಪ್ಪ ಲಮಾಣಿ, ಉಪ ಸಭಾಧ್ಯಕ್ಷ, ಹಾವೇರಿ ಶಾಸಕ
8. ಎಚ್.ಎನ್ ನಾರಾಯಣಸ್ವಾಮಿ - ಬಂಗಾರಪೇಟೆ ಶಾಸಕ
9. ವೆಂಕಟೇಶ್ - ಪಾವಗಡ ಶಾಸಕ
10. ನರೇಂದ್ರಸ್ವಾಮಿ - ಮಳವಳ್ಳಿ ಶಾಸಕ
11. ಶಿವಣ್ಣ - ಆನೇಕಲ್ ಶಾಸಕ
ಪರಿಷತ್ ಸದಸ್ಯರು
1. ವಸಂತ್ ಕುಮಾರ್
2. ತಮ್ಮಯ್ಯ
3. ಸುಧಾಮ್ ದಾಸ್
PublicNext
02/08/2025 06:13 pm