", "articleSection": "Politics,Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1754136139-_(1280-x-720-px)-(71).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಮೈಸೂರಿನ ಕೆ.ಆರ್. ನಗರದ ಮನೆಗೆಲಸದ ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಶುಕ್ರವಾರ ಸಾಬೀತಾಗಿತ್ತು, ಇದ...Read more" } ", "keywords": ""Prajwal Revanna next move, rape case conviction, JD(S) MP controversy, life imprisonment sentence, Karnataka news updates, court verdict reaction, Prajwal Revanna appeal" ", "url": "https://dashboard.publicnext.com/node" }
ಬೆಂಗಳೂರು : ಮೈಸೂರಿನ ಕೆ.ಆರ್. ನಗರದ ಮನೆಗೆಲಸದ ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಶುಕ್ರವಾರ ಸಾಬೀತಾಗಿತ್ತು, ಇದೀಗ ಅವರಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ಮಧ್ಯಾಹ್ನ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ಪ್ರಾಸಿಕ್ಯೂಷನ್ ಪ್ರಜ್ವಲ್ಗೆ ಗರಿಷ್ಠ ಶಿಕ್ಷೆ ನೀಡುವಂತೆ ವಾದಿಸಿದ್ದರೆ, ಪ್ರಜ್ವಲ್ ಪರ ವಕೀಲರು, ಇದು ರಾಜಕೀಯ ಕುತಂತ್ರ ಎಂದು ವಾದಿಸಿದ್ದರು.
ವಾದ ಪ್ರತಿ ವಾದ ಆಲಿಸಿದ ಕೋರ್ಟ್ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ, ₹11.6 ಲಕ್ಷ ದಂಡ ಘೋಷಣೆ ಮಾಡಿದೆ.
ಈಗ ಕೋರ್ಟ್ ಆದೇಶದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ಮುಂದಿನ ನಡೆ ಏನು? ಎಂದು ಭಾರೀ ಕುತೂಹಲ ಕೆರಳಿಸಿದೆ. ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಹೈಕೋರ್ಟ್ ಈ ತೀರ್ಪಿಗೆ ತಡೆ ನೀಡಿದರೆ, ಉಳಿದ 3 ಪ್ರಕರಣಗಳಲ್ಲಿ ಜಾಮೀನು ಪಡೆಯುವ ಪ್ರಯತ್ನ ಮುಂದುವರಿಸಬಹುದು.
ಈ ತೀರ್ಪನ್ನು ಹೈಕೋರ್ಟ್ ಸಹ ಎತ್ತಿ ಹಿಡಿದರೆ, ಆಗ ಸುಪ್ರೀಂಕೋರ್ಟ್ ಕದ ತಟ್ಟಬೇಕಾಗುತ್ತದೆ. ಸುಪ್ರೀಂ ಸಹ ಹೈಕೋರ್ಟ್ ತೀರ್ಪು ಎತ್ತಿ ಹಿಡಿದರೆ ಪ್ರಜ್ವಲ್ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ.
PublicNext
02/08/2025 05:32 pm