", "articleSection": "Law and Order", "image": { "@type": "ImageObject", "url": "https://prod.cdn.publicnext.com/s3fs-public/454739-1754142408-Untitled-design-(65).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveera Sagaranal" }, "editor": { "@type": "Person", "name": "mudakanagouda.p" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕಾನೂನು ಕಣ್ಣಲ್ಲಿ ಎಲ್ಲರೂ ಒಂದೇ. ಅಪರಾಧ ಮಾಡಿದ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ದೊಡ್ಡವರ ಮಕ್ಕಳಾಗಿರಲಿ, ಪ್ರಭಾವೀ ರಾಜಕಾರಣಯೇ ಆ...Read more" } ", "keywords": "Bengaluru court verdict, former PM grandson case, equal law for all India, justice equality India, rule of law India, Karnataka high-profile verdict, common man equal law, judiciary message India, legal equality Bengaluru, former PM family legal case ", "url": "https://dashboard.publicnext.com/node" } ಬೆಂಗಳೂರು: ಮಾಜಿ ಪ್ರಧಾನಿ ಮೊಮ್ಮಗನಿಗೂ ಜನಸಾಮಾನ್ಯನಿಗೂ ಒಂದೇ ಕಾನೂನು ಎಂಬ ಸಂದೇಶ ಸಾರಿದ ತೀರ್ಪು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾಜಿ ಪ್ರಧಾನಿ ಮೊಮ್ಮಗನಿಗೂ ಜನಸಾಮಾನ್ಯನಿಗೂ ಒಂದೇ ಕಾನೂನು ಎಂಬ ಸಂದೇಶ ಸಾರಿದ ತೀರ್ಪು

ಬೆಂಗಳೂರು: ಕಾನೂನು ಕಣ್ಣಲ್ಲಿ ಎಲ್ಲರೂ ಒಂದೇ. ಅಪರಾಧ ಮಾಡಿದ ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ದೊಡ್ಡವರ ಮಕ್ಕಳಾಗಿರಲಿ, ಪ್ರಭಾವೀ ರಾಜಕಾರಣಯೇ ಆಗಿರಲಿ ಅದ್ಯಾವುದೂ ಲೆಕ್ಕಕ್ಕೆ ಬಾರದು. ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗದು ಎಂಬ ಮಾತು ಇದೀಗ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಸಾಬೀತಾದಂತಾಗಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರ ಮೂಲದ 48 ವರ್ಷದ ಮತ್ತು ತಾಯಿ ಸಮಾನಳಾಗಿದ್ದ ಮನೆ ಕೆಲಸದವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧ ಸಾಬೀತಾಗಿದ್ದು, ನಿನ್ನೆ ದೋಷಿ ಎಂದು ತೀರ್ಪು ನೀಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ, ಅಪರಾಧಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತು.

ಇಂದು ಮಧ್ಯಾಹ್ನ 2:45 ಕ್ಕೆ ಕೋರ್ಟ್ ಪ್ರಜ್ವಲ್ ರೇವಣ್ಣಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ ಎಂಬ ಹಿನ್ನೆಲೆ ಮಾಧ್ಯಮಗಳು ಸೇರಿದಂತೆ ಎಲ್ಲರ ಚಿತ್ತ ಕೋರ್ಟ್ ನತ್ತ ನೆಟ್ಟಂತಿತ್ತು. ಮಧ್ಯಾಹ್ನ 2: 30ರ ಹೊತ್ತಿಗೆ ಕೋರ್ಟ್ ಹಾಲ್ ಗೆ ಪ್ರವೇಶಿಸಿದ ಜನಪ್ರತಿನಿಧಿಗಳ ಕೋರ್ಟ್ ಜಡ್ಜ್ ನ್ಯಾ.ಗಜಾನನ ಭಟ್ ಅವರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಕೈಗೆತ್ತಿಕೊಂಡರು. ನೂರಾರು ಪುಟಗಳ ತಮ್ಮ ಆದೇಶದ ಪ್ರತಿಯನ್ನು ಇಟ್ಟುಕೊಂಡು ಆದೇಶವನ್ನು ಬರೆಯಿಸಲಾರಂಭಿಸಿದರು. ಅಷ್ಟೊತ್ತಿಗಾಗಲೇ ಮ.3.30 ದಾಟಿತ್ತು. ಈ ಸಂದರ್ಭದಲ್ಲಿ ಕೋರ್ಟ್ ಹಾಲ್ ನ ಒಳಗೂ ಮತ್ತು ಹೊರಗೂ ಸೇರಿದಂತೆ ಎಲ್ಲೆಡೆ ಕಪ್ಪು ಕೋಟ್ ಧರಿಸಿದ್ದ ವಕೀಲರೇ ತುಂಬಿಕೊಂಡಿದ್ದರು. ಕೋರ್ಟ್ ಆವರಣದ ಬಳಿಯೂ ಜನಜಂಗುಳಿ ನೆರೆದಂತೆ ಭಾಸವಾಯಿತು. ಸರಿಯಾಗಿ 4:9ಕ್ಕೆ ಅಪರಾಧಿ ಪ್ರಜ್ವಲ್ ರೇವಣ್ಣನನ್ನು ಕಿಕ್ಕಿರಿದು ಸೇರಿದ್ದ ಜನಜಂಗುಳಿ ಮಧ್ಯೆಯೇ ಬಿಗಿ ಬಂದೋಬಸ್ತ್ ನಲ್ಲಿ ಪೊಲೀಸರು ಕೋರ್ಟ್ ಹಾಲ್ ಗೆ ಕರೆ ತಂದರು. ಈ ವೇಳೆ ನ್ಯಾಯಾಧೀಶರ ಮುಂದೆ ತಲೆ ತಗ್ಗಿಸಿ ಕೈ ಮುಗಿದುಕೊಂಡೇ ನಿಂತಿದ್ದ ಪ್ರಜ್ವಲ್ ರೇವಣ್ಣ ಮಂತ್ರ ಪಠಿಸುತ್ತಿದ್ದಂತೆ ಕಂಡು ಬಂತು. ಕೆಲವೊಮ್ಮೆ ತೇವಗೊಂಡಿದ್ದ ತನ್ನ ಕಣ್ಣುಗಳನ್ನು ಒರೆಸಿಕೊಳ್ಳತ್ತಲೇ ಅತ್ಯಂತ ದಯನೀಯವಾಗಿ ನಿಂತುಕೊಂಡಿದ್ದು ಗಮನ ಸೆಳೆಯಿತು.

ಇದಾದ ಕೆಲವೇ ಸೆಕೆಂಡುಗಳಲ್ಲು ನ್ಯಾಯಾಧೀಶರು ನೂರಾರು ಪುಟಗಳ ಜಡ್ಜ್ ಮೆಂಟ್ ಕಾಪಿಗೆ ತಮ್ಮ ರುಜು ಹಾಕಲಾರಂಭಿಸಿದರು. ಈ ವೇಳೆ ಪ್ರಜ್ವಲ್ ರೇವಣ್ಣನ ಎದೆಯಲ್ಲಿ ಢವಢವ ಶುರುವಾದಂತೆ ಕಂಡು ಬಂತು! ತನ್ನ ಮುಂದಿನ ಭವಿಷ್ಯ ಜಡ್ಜ್ ಅವರು ಬರೆಯುತ್ತಿದ್ದು, ಎಷ್ಟು ವರ್ಷಗಳ ಕಾಲ ಜೈಲು ಶಿಕ್ಷೆಯಾಗುತ್ತೋ ಏನೋ? ಎಂದು ಚಿಂತಾಕ್ರಾಂತನಾದಂತೆ ತೋರುತ್ತಿತ್ತು! ಅಷ್ಟೊತ್ತಿಗಾಗಲೇ ಸಮಯ 5 ಗಂಟೆ.. ನ್ಯಾಯಾಧೀಶರು ಪ್ರಜ್ವಲ್ ರೇವಣ್ಣನ ಅಪರಾಧ ಸಾಬೀತಾಗಿದ್ದು, ಆತನ ಅಪರಾಧ ಕೃತ್ಯಕ್ಕೆ ಜೀವಾವಧಿ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ಜೊತೆಗೆ 5 ಲಕ್ಷ ರೂ.ಗಳ ದಂಡವನ್ನು ಪ್ರಕಟಿಸುತ್ತದೆ ಎಂದರು. ಇನ್ನು ಈ ಪ್ರಕರಣದ ಸಂತ್ರಸ್ತ ಮಹಿಳೆಗೆ 7 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ತೀರ್ಪು ಓದಿ ಹೇಳಿದ ನ್ಯಾಯಾಧೀಶರು, ಕೊನೆಗೆ ಈ ತೀರ್ಪಿನ ಉಚಿತ ಪ್ರತಿಯನ್ನು ಅಪರಾಧಿ ಪ್ರಜ್ವಲ್ ರೇವಣ್ಣಗೆ ನೀಡಬೇಕೆಂದು ಸೂಚಿಸಿದರು. ಇದಾದ ಕೆಲವೇ ಸೆಕೆಂಡುಗಳಲ್ಲಿ ಪೊಲೀಸರು ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ತೆಗೆದುಕೊಂಡು ಬಿಗಿ ಬಂದೋಬಸ್ತ್ ನೊಂದಿಗೆ ಪರಪ್ಪನ ಅಗ್ರಹಾರದತ್ತ ಕೊಂಡೊಯ್ದರು.

ಮಾಡಬಾರದಗದನ್ನು ಮಾಡಿ ಕೋರ್ಟ್ ನಲ್ಲಿ ನಿಂತುಕೊಂಡು ಮಂತ್ರ ಜಪಿಸಿದರೆ ಮಾಡಿದ ಅಪರಾಧ ಸುಳ್ಳಾಗುತ್ತದೆಯೆ? ಅಂತಾ ಕೆಲವರು ಆಡಿಕೊಂಡರೆ ಮತ್ತೆ ಕೆಲವರು, ಕೋರ್ಟ್ ಸರಿಯಾದ ಶಿಕ್ಷೆಯನ್ನೇ ಪ್ರಕಟಿಸಿದೆ ಎಂದು ಮಾತನಾಡಿಕೊಳ್ಳುತ್ತಿರೋದು ಗೋಚರಿಸಿತು.

ಪದೆ ಪದೆ ಅತ್ಯಾಚಾರ!

ಅಂದು ಜೆಡಿಎಸ್ ಸಂಸದನಾಗಿದ್ದ ಪ್ರಜ್ವಲ್ ರೇವಣ್ಣ ಮನೆ ಕೆಲಸದವಳ ಮೇಲೆ ಪದೆ ಪದೆ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದನು. ಅಲ್ಲದೇ ತಾನು ನಡೆಸಿದ ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದರೆ ಅತ್ಯಾಚಾರ ಮಾಡಿದ ವಿಡಿಯೋವನ್ನು ನಿನ್ನ ಮಗನಿಗೆ ತೋರಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದನು. ಮಾತ್ರವಲ್ಲ ಆಕೆಗೆ ಜೀವ ಬೆದರಿಕೆ ಒಡ್ಡಿದ್ದನು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ "ಕನ್ನಿಗಡ" ತೋಟದ ಮನೆಯಲ್ಲಿ ಅನೇಕ ಬಾರಿ ಅತ್ಯಾಚಾರ ನಡೆಸಿದ್ದನು. ನಾನು ನಿನ್ನ ಅಮ್ಮನಿಗೆ ಸಮಾನ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ. ನನಗೆ ಇದೆಲ್ಲ ಇಷ್ಟವಿಲ್ಲ. ನಾನು ಅಂಥವಳಲ್ಲ.. ನಿಮ್ಮ ಕಾಲಿಗೆ ಬೀಳುವೆ ಬಿಟ್ಟು ಬುಡಿ ಎಂದು ಸಂತ್ರಸ್ತೆ ಪರಿಪರಿಯಾಗಿ ಅಂಗಲಾಚಿ ಬೇಡಿಕೊಂಡರೂ ಕಿಂಚಿತ್ತೂ ಕನಿಕರ ತೋರದ ಪ್ತಜ್ವಲ್ ರೇವಣ್ಣ, ಮನೆಯ ಬಾಗಿಲು ಚಿಲಕ ಹಾಕಿಕೊಂಡು ಪೈಶಾಚಿಕ ಕೃತ್ಯ ಎಸಗಿದ್ದ. ಅಲ್ಲದೇ ಆಕೆ ಕುಪ್ಪಸ ಮತ್ತು ಸೀರೆಯನ್ನು ಬಿಚ್ಚಿ ಲೈಂಗಿಕ ದೌರ್ಜನ್ಯ ಎಸಗುವ ದೃಶ್ಯವನ್ನು ತನ್ನ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿಕೊಂಡಿದ್ದನು! ಇದಲ್ಲದೇ ಇದೇ ಮಹಿಳೆಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ತಮ್ಮ ನಿವಾಸದಲ್ಲೂ ಅತ್ಯಾಚಾರ ಎಸಗಿದ್ದನು! ಯಾವಾಗ ಪ್ರಜ್ವಲ್ ರೇವಣ್ಣನ ಇಂಥ ನೂರಾರು ವಿಡಿಯೋ ತುಣುಕುಗಳು ಈತನ ಕಾರ್ ಚಾಲಕನಿಂದ ಹೊರಬಿದ್ದವೋ ಆವಾಗಿನಿಂದಲೇ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಶುರುವಾಗಿತ್ತು.

ಮನೆ ಕೆಲಸದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಟ್ಟು ಕೇಸ್ ನಿಂದ ತಪ್ಪಿಸಿಕೊಳ್ಳುವ ವಿಫಲ ಯತ್ನವನ್ನೂ ನಡೆಸಲಾಗಿತ್ತು. ಇದಾದ ಬಳಿಕ ಪ್ರಜ್ವಲ್ ರೇವಣ್ಣನ ಮೊಬೈಲ್ ನಲ್ಲಿ ಇನ್ನೂ ಸಹಸ್ರಾರು ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋ ಗಳಿರುವುದು ಬೆಳಕಿಗೆ ಬಂದ ಪರಿಣಾಮ ವಿದೇಶಕ್ಕೆ ಹಾರಿ ಹೋಗಿ ತಲೆ ಮರೆಸಿಕೊಳ್ಳುತ್ತಾನೆ. ಇದೆಲ್ಲದರ ನಡುವೆ ಸಂತ್ರಸ್ತ ಮಹಿಳೆ ಮತ್ತು ಆಕೆಯ ಮಗ ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತಾರೆ. ತಮ್ಮ ಮೇಲೆ ಎಷ್ಟೇ ಒತ್ತಡ ಬಂದರೂ ಹಣದ ಆಮಿಷ ಒಡ್ಡಿದರೂ ದೃತಿಗೆಡದೇ ತಮಗಾದ ಅನ್ಯಾಯ ಅವಮಾನಕ್ಕೆ ನ್ಯಾಯ ಸಿಗಬೇಕು. ಅಪರಾಧಿಗೆ ತಕ್ಕ ಶಿಕ್ಷೆಯಾಗಲೇಬೇಕೆಂದು ಕಾನೂನು ಹೋರಾಟಕ್ಕೆ ಮೊರೆ ಹೋದರು. ಇನ್ನು, ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಜನಪ್ರಯಿನಿಧಿಗಳ ಕೋರ್ಟ್, ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಮೂಲಕ ನ್ಯಾಯಾಂಗದ ಘನತೆಯನ್ನು ಎತ್ತಿ ತೋರಿದೆ. ಜೊತೆಗೆ ಬಡವ ಬಲ್ಲಿದರೇ ಆಗಿರಲಿ ದೊಡ್ಡ ಶ್ರೀಮಂತನೇ ಆಗಿರಲಿ ಕಾನೂನಿಗೆ ತಲೆ ಬಾಗಲೇಬೇಕು. ಅಪರಾಧ ಕೃತ್ಯಕ್ಕೆ ಎಸಗಿದ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಕೂಡ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದೆ.

ಪ್ರಜ್ವಲ್ ರೇವಣ್ಣನ ಮೇಲೆ ಹಾಕಲಾಗಿದ್ದ ಐಪಿಸಿ ಸೆಕ್ಷನ್ ಗಳು ಮತ್ತು ಶಿಕ್ಷೆಯ ಪ್ರಮಾಣ ಹೀಗಿದೆ.

1) 376 (2) (N) -------- ಅತ್ಯಾಚಾರ ------ 10 ವರ್ಷಗಳ ಶಿಕ್ಷೆ

2) 354 (A, B, C) ....... ಲೈಂಗಿಕ ದೌರ್ಜನ್ಯ ..... 3 ವರ್ಷಗಳ ಶಿಕ್ಷೆ

3) 376 ( k) (2) ..... ಬಲತ್ಕಾರ .....3 ವರ್ಷಗಳ ಶಿಕ್ಷೆ

4) ಐಟಿ ಕಾಯ್ದೆ ಸೆಕ್ಷನ್ 66 (E) ....ಅಶ್ಲೀಲ ದೃಶ್ಯ ಚಿತ್ರೀಕರಣ ಮತ್ತು ಪ್ರಸಾರ ..... 3 ವರ್ಷಗಳ ಶಿಕ್ಷೆ

5) ಐಪಿಸಿ ಕಲಂ 201...... ಸಾಕ್ಷ್ಯಗಳ ನಾಶ .....

6) ಸೆಕ್ಷನ್ 506 ..... ಕ್ರಿಮಿನಲ್ ಬೆದರಿಕೆ ...6 ತಿಂಗಳ ಕಾಲ ಶಿಕ್ಷೆ

ಇದಲ್ಲದೆ ಪ್ರಜ್ವಲ್ ರೇವಣ್ಣನ ಮೇಲೆ ಇನ್ನೂ ಮೂರು ಅತ್ಯಾಚಾರ, ಸಾಕ್ಷ್ಯನಾಶ, ಕೊಲೆ ಬೆದರಿಕೆ, ಅಕ್ರಮವಾಗಿ ಕೂಡಿ ಹಾಕಿ ಹಿಂಸಿಸಿದ್ದು, ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಮಾಡಿ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾದ ಇನ್ನೂ ಮೂರು ಪ್ರಕರಗಳ ವಿಚಾರಣೆ ಬಾಕಿ ಇದ್ದು, ಅತ್ಯಂತ ಸ್ಟ್ರಾಂಗ್ ಕೇಸ್ ಎಂದೇ ಬಿಂಬಿತವಾಗಿದ್ದ ಕೆ.ಆರ್.ನಗರ ಮೂಲದ ಮನೆ ಕೆಲಸದ ಸಂತ್ರಸ್ತೆಯ ಈ ಪ್ರಕರಣ ಇಡೀ ದೇಶದ ಗಮನವನ್ನು ಸೆಳೆದಿತ್ತು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರತಿನಿಧಿಸುತ್ತಿದ್ದ ಹಾಸನದ ಸಂಸದನಾಗಿದ್ದ ಪ್ರಜ್ವಲ್ ಅತ್ಯಾಚಾರ ಕೇಸ್ ನಲ್ಲಿ ಸಿಕ್ಕಿಬಿದ್ದು ಇಡೀ ಕುಟುಂಬದ ಮಾನ ಹರಾಜಾಗುವಂತೆ ಮಾಡಿದ್ದಲ್ಲದೇ ಇಳಿ ವಯಸ್ಸಿನಲ್ಲಿರುವ ದೇವೇಗೌಡರೂ ತೆ ತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ. ಇನ್ನು ಮಂಡ್ಯದ ಸಂಸದ ಮತ್ತು ಕೇಂದ್ರ ಸಚಿವರೂ ಆದ ಹೆಚ್.ಡಿ.ಕುಮಾರಸ್ವಾಮಿ ಅವರಂತೂ ಈ ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಒಂದೆರಡು ಬಾರಿ ಸುದ್ದಿಗೋಷ್ಟಿ ನಡೆಸಿ ಕೈ ತೊಳೆದುಕೊಂಡರು. ಬಳಿಕ ತಮಗೂ ಪ್ರಜ್ವಲ್ ರೇವಣ್ಣಗೂ ಸಂಬಂಧವೇ ಇಲ್ಲವೆಂದುಬಿಟ್ಟರು! ಈ ಸಂದರ್ಭದಲ್ಲಿ ಅಂದು ಎದುರಾಗಿದ್ದ 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನದ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣರ ವಿರುದ್ಧ ರಾಸಲೀಲೆ ವಿಡಿಯೋ ಗಳಿರುವ ಪೆನ್ ಡ್ರೈವ್ ಗಳನ್ನು ಹಾಸನದ ತುಂವೆಲ್ಲ ಹಂಚುವ ಮೂಲಕ ರಾಜಕೀಯ ಅಸ್ತ್ರವನ್ನಾಗಿಯೂ ಬಳಸಿಕೊಳ್ಳಲಾಗಿತ್ತು. ಇದರ ಹಿಂದೆ ಡಿಸಿಎಂ ಡಿಕೆಶಿ ಅವರ ನೆರಳಿದೆ ಎಂಬ ಮಾತು ಕೇಳಿ ಬಂದಿತ್ತು.

ಮುಂದೇನು?

ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ನಂತರ ಕೆಲ ದಿನಗಳ ಬಳಿಕ ವಿದೇಶದಿಂದಲೇ ವಿಡಿಯೋ ಸಂದೇಶವೊಂದನ್ನು ಹರಿ ಬಿಟ್ಟು ಬಳಿಕ ಕೋರ್ಟ್ ಗೆ ಶರಣಾಗಿದ್ದ ಪ್ರಜ್ವಲ್ ರೇವಣ್ಣ ಕಾನೂನು ಹೋರಾಟ ನಡೆಸಿದ್ದರು. ಪ್ರಜ್ವಲ್ ರೇವಣ್ಣನ ಪರ ವಕೀಲೆ ನಳಿನಾ ಮಾಯಾಗೌಡ ಅವರು ವಾದ ಮಂಡಿಸಿದ್ದರೆ, ಸಂತ್ರಸ್ತೆಯ ಪರ ಎಸ್ ಪಿಪಿ ಬಿ.ಎನ್.ಜಗದೀಶ್ ಮತ್ತು ಎಪಿಪಿ ಅಶೋಕ್ ನಾಯಕ್ ಅವರು ಸಮರ್ಥವಾಗಿ ವಾದವನ್ನು ಮಂಡಿಸಿದ್ದರು. ಈ ಸಂದರ್ಭದಲ್ಲಿ ವಕೀಲೆ ನಳಿನಿ ಮಾಯಾಗೌಡ ಅವರು, ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಮಾಣವನ್ನಾದರೂ ಕಡಿಮೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಲಿಲ್ಲ. ಇದೀಗ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕೆ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪ್ರಜ್ವಲ್ ಹೈಕೋರ್ಟ್ ಗೆ ಮನವಿ ಸಲ್ಲಿಸಬಹುದಾಗಿದೆ. ಜಾಮೀನು ನೀಡಬೇಕೆಂದು ಮನವಿ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಮಾತ್ರವಲ್ಲ ಮುಂದೆ ಸುಪ್ರೀಂ ಕೋರ್ಟ್ ನ ಕದವನ್ನೂ ತಟ್ಟಬಹುದಾಗಿದೆ. ಆದರೆ, ಈಗಾಗಲೇ ಒಂದು ವರ್ಷ ಎರಡು ತಿಂಗಳು ಜೈಲಿನಲ್ಲಿ ಕಳೆದಿದ್ದ ಪ್ರಜ್ವಲ್ ಗೆ ಇಂದಿನಿಂದ ಮತ್ತೆ ಜೈಲೇ ಫಿಕ್ಸ್ ಆಗಿದೆ.

ಚೆನ್ನವೀರ ಸಗರನಾಳ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By :
PublicNext

PublicNext

02/08/2025 07:17 pm

Cinque Terre

42.51 K

Cinque Terre

6

ಸಂಬಂಧಿತ ಸುದ್ದಿ