ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಆಯುಕ್ತ ಬಿ. ದಯಾನಂದ್‌, ಹಾಲಿ ಆಯುಕ್ತ ಸೀಮಂತ್‌ ಕುಮಾರ್‌ಗೆ ರಾಷ್ಟ್ರಪತಿ ಪದಕ

ಬೆಂಗಳೂರು: ಬೆಂಗಳೂರು ಮಾಜಿ ಪೊಲೀಸ್‌ ಆಯುಕ್ತ ಬಿ .ದಯಾನಂದ್ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.2022ನೇ ಸಾಲಿನ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಘೋಷಿಸಲಾದ ರಾಷ್ಟ್ರಪತಿಗಳ ಪೊಲೀಸ್‌ ವಿಶಿಷ್ಟ ಸೇವಾ ಪದಕಕ್ಕೆ ದಯಾನಂದ್‌ ಭಾಜನರಾಗಿದ್ದಾರೆ. ಹಾಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕೂಡ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ಇವರು 2023ನೇ ಸಾಲಿನ‌ ಪೊಲೀಸ್ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಇತ್ತೀಚೆಗೆ ಬೆಂಗಳೂರಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದಲ್ಲಿ ದಯಾನಂದ್‌ ಅಮಾನತುಗೊಂಡಿದ್ದರು. ಅವರು ಅಮಾನತಾದ ಸ್ಥಾನಕ್ಕೆ ನಗರ ಪೊಲೀಸ್‌ ಆಯುಕ್ತರಾಗಿ ಸೀಮಂತ್‌ ಕುಮಾರ್‌ ಸಿಂಗ್‌ ನಿಯೋಜನೆಗೊಂಡಿದ್ದರು.

Edited By : Nirmala Aralikatti
PublicNext

PublicNext

02/08/2025 08:00 pm

Cinque Terre

24.74 K

Cinque Terre

0

ಸಂಬಂಧಿತ ಸುದ್ದಿ