", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/463655-1754144314-WhatsApp-Image-2025-08-02-at-7.20.15-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ವಾಷಿಂಗ್ಟನ್: ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವುದು ಅಮೆರಿಕ ಕೆಂಗಣ್ಣಿಗೆ ಕಾರಣವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ...Read more" } ", "keywords": "India stops buying oil from Russia, US President Donald Trump, India Russia oil deal, US sanctions on Russia, India oil imports ", "url": "https://dashboard.publicnext.com/node" }
ವಾಷಿಂಗ್ಟನ್: ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವುದು ಅಮೆರಿಕ ಕೆಂಗಣ್ಣಿಗೆ ಕಾರಣವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಈ ಹಿಂದೆ ಅಮೆರಿಕ ಸರ್ಕಾರ ಭಾರತದಿಂದ ಆಮದು ಆಗುವ ಕೆಲವು ಸರಕುಗಳ ಮೇಲೆ ಶೇಕಡಾ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯದಲ್ಲಿ ಹೊಸ ಮನ್ನಣೆ ನೀಡಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂಬುದು ನನ್ನ ಮಾಹಿತಿಯಾಗಿದೆ. ಅದು ಖಚಿತವೋ ಅಲ್ಲವೋ ಗೊತ್ತಿಲ್ಲ, ಆದರೆ ಇದು ಉತ್ತಮ ಹೆಜ್ಜೆ" ಎಂದು ಹೇಳಿದ್ದಾರೆ.
ಉಕ್ರೇನ್ ಯುದ್ಧದ ಬಳಿಕ ರಷ್ಯಾದ ಮೇಲೆ ಅನೇಕ ಆರ್ಥಿಕ ನಿರ್ಬಂಧಗಳಿದ್ದರೂ ಭಾರತವು ರಿಯಾಯಿತಿ ದರದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ನಿಲುವು ಅಮೆರಿಕದ ವಿರುದ್ಧಾಭಿಪ್ರಾಯಕ್ಕೆ ಕಾರಣವಾಗಿದಕ್ಕೆ ಟ್ರಂಪ್ ಹಾಗೂ ಅಮೆರಿಕದ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿರುವ ಮಾರ್ಕೋ ರುಬಿಯೊ ಕೂಡ ಭಾರತವನ್ನು ಟೀಕಿಸಿದ್ದರು.
ಟ್ರಂಪ್ ಹೇಳಿಕೆಯ ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಭಾರತ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, "ಭಾರತ ರಷ್ಯಾದಿಂದ ತೈಲ ಆಮದು ನಿಲ್ಲಿಸುತ್ತಿದೆ ಎಂಬ ಮಾಹಿತಿ ಸಚಿವಾಲಯಕ್ಕೆ ಲಭ್ಯವಿಲ್ಲ. ಇಂಧನ ಖರೀದಿಯು ದೇಶದ ರಾಷ್ಟ್ರೀಯ ಮತ್ತು ಮಾರುಕಟ್ಟೆ ಹಿತಾಸಕ್ತಿಗಳ ಆಧಾರಿತವಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
PublicNext
02/08/2025 07:48 pm