ಮನೆಯಂಗಳದ ಮನರಂಜನೆಯ ವೀಣೆಯನ್ನು ಬಾರಿಸುತ್ತಿರುವ ಜೀ ಕನ್ನಡ ಈಗಾಗಲೇ ಅನೇಕ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಮತ್ತು ಗೆಮ್ ಶೋಗಳ ಮೂಲಕ ಪ್ರेಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಡಾನ್ಸ್ ಕರ್ನಾಟಕ ಡಾನ್ಸ್, ಮತ್ತು ಸೂಪರ್ ಕ್ವೀನ್ ಗಳಂತಹ ಜನಪ್ರಿಯ ಶೋಗಳು ಈ ಚಾನಲ್‌ಗೆ ಟಾಪ್ ಸ್ಥಾನ ನೀಡಿವೆ.
ಈಗ ಇದೇ ಮಹಾತಾಣ ಹೊಸ ಪ್ರಯೋಗವೊಂದನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ – ಆಗಸ್ಟ್ 2ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ಹೊಸ ರಿಯಾಲಿಟಿ ಶೋ ‘ನಾವು ನಮ್ಮವರು’.
ಈ ಶೋ ವಿಭಿನ್ನವೆಂದರೆ, ಇಲ್ಲಿನ ಸ್ಪರ್ಧಿಗಳು ತಾವೊಬ್ಬರಾಗಿ ಅಲ್ಲ, ತಮ್ಮ ಕುಟುಂಬದ ಸದಸ್ಯರೊಂದಿಗೆ ಭಾಗವಹಿಸುತ್ತಾರೆ. ನಿಮ್ಮ ನೆಚ್ಚಿನ ಸೆಲೆಬ್ರಿಟಿಗಳ ಕುಟುಂಬದೊಂದಿಗೆ ಇರುವ ನಿಜವಾದ ಸಂಬಂಧ, ಅವರ ನಡುವೆ ಇರುವ ಪ್ರೀತಿ, ಭಾವನೆ, ಒಡನಾಟ , ಇದನ್ನು ಹೃದಯ ಸ್ಪರ್ಶಿಯಾಗಿ ಪ್ರದರ್ಶಿಸುವ ಪ್ರಯತ್ನವೇ ಈ ಕಾರ್ಯಕ್ರಮ.
100% ಮನರಂಜನೆ ಮತ್ತು ಪ್ರೀತಿ ಮಿಶ್ರಿತ ಆಟಗಳು
ಪ್ರತಿ ವಾರ ವಿಭಿನ್ನ ತಳಿಯ ಟಾಸ್ಕ್‌ಗಳು, ಸಿಹಿ-ಖಾರದ ಸವಾಲುಗಳು, ಮತ್ತು ಅನೇಕ ಸರ್ಪ್ರೈಸ್‌ಗಳಿಂದ ತುಂಬಿರುವ ಈ ಶೋ ನಿಜಕ್ಕೂ ವೈವಿಧ್ಯಮಯ ಅನುಭವವನ್ನೇ ನೀಡಲಿದೆ. ಕುಟುಂಬದೊಂದಿಗಿನ ಒಡನಟ್ಟಿನ ಹೊಸ ನೆಲೆಗಳನ್ನು ಈ ಟಾಸ್ಕ್‌ಗಳು ತೆರೆದಿಡಲಿವೆ.ವಿಭಿನ್ನ ಶೈಲಿಯ ನಿರೂಪಣೆಯಿಂದ ಕನ್ನಡಿಗರ ಹೃದಯ ಗೆದ್ದ ನಿರಂಜನ್ ದೇಶಪಾಂಡೆ ಈ ಶೋ ನಿರೂಪಣೆಯ ಹೊಣೆಯನ್ನು ಹೊತ್ತಿದ್ದಾರೆ.
ಅದೇ ರೀತಿಯಲ್ಲಿ, ಅಮೂಲ್ಯ (ಗೋಲ್ಡನ್ ಕ್ವೀನ್), ತಾರಾ ಅನುರಾಧ (ಎವರ್ಗ್ರೀನ್ ಚೆಲುವೆ ಮತ್ತು ರಾಜಕಾರಣಿ) ನಟ ಶರಣ್ ಅವರು ಈ ಶೋಗೆ ತೀರ್ಪುಗಾರರಾಗಿದ್ದಾರೆ.
ನಾವು ನಮ್ಮವರು’ ಕೇವಲ ಸ್ಪರ್ಧೆ ಅಲ್ಲ – ಇದು ನೆನಪಿನ, ನಿಕಟತೆಯ, ಮತ್ತು ಕುಟುಂಬದ ಬಂಧಗಳ ಹಬ್ಬ. ಪ್ರತಿ ಹಂತದಲ್ಲೂ ಕುಟುಂಬದ ಪರಸ್ಪರ ಭಾವನೆಗಳು ಮತ್ತು ಬೆಂಬಲವೇ ಪ್ರಮುಖ ಪಾತ್ರ ವಹಿಸುತ್ತವೆ. ಇದೊಂದು ಸ್ಪರ್ಧಾತ್ಮಕ ಕಾನ್ಸೆಪ್ಟ್ ಇದ್ದರೂ, ಅದರ ಹೃದಯದಲ್ಲಿ ಸಂಬಂಧಗಳ ಬೆರಗು ಇದೆ.ಮಿಸ್ ಮಾಡದೇ ನೋಡಿ ‘ನಾವು ನಮ್ಮವರು’ರಿಯಾಲಿಟಿ ಶೋ ಆಗಸ್ಟ್ 2 ರಿಂದ, ಪ್ರತಿದಿನ ರಾತ್ರಿ 9ಕ್ಕೆ, ನಿಮ್ಮ ಜೀ ಕನ್ನಡದಲ್ಲಿ! ಸಂಬಂಧಗಳ ಸಂಭ್ರಮಕ್ಕೆ ಸಿದ್ಧವಾಗಿರಿ.
PublicNext
30/07/2025 04:45 pm