", "articleSection": "Government,Viral", "image": { "@type": "ImageObject", "url": "https://prod.cdn.publicnext.com/s3fs-public/387839-1753875514-WhatsApp-Image-2025-07-30-at-5.07.04-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉತ್ತರಪ್ರದೇಶ: IAS ಅಧಿಕಾರಿಯೋರ್ವರು ಪ್ರತಿಭಟನಾ ನಿರತ ವಕೀಲರ ಮುಂದೆ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ತೆಗೆಯುವ ವಿಡಿಯೊ ವೈರಲ್ ಆಗಿದ್ದು, ಚರ...Read more" } ", "keywords": "IAS officer takes selfie, viral video, first day of duty, new IAS officer's selfie, bureaucratic humor, IAS officer's fun moment ", "url": "https://dashboard.publicnext.com/node" } VIDEO : ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ಬಸ್ಕಿ ತೆಗೆದ ಐಎಎಸ್ ಅಧಿಕಾರಿ - ವಿಡಿಯೋ ವೈರಲ್!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಕರ್ತವ್ಯಕ್ಕೆ ಹಾಜರಾದ ಮೊದಲ ದಿನವೇ ಬಸ್ಕಿ ತೆಗೆದ ಐಎಎಸ್ ಅಧಿಕಾರಿ - ವಿಡಿಯೋ ವೈರಲ್!

ಉತ್ತರಪ್ರದೇಶ: IAS ಅಧಿಕಾರಿಯೋರ್ವರು ಪ್ರತಿಭಟನಾ ನಿರತ ವಕೀಲರ ಮುಂದೆ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ತೆಗೆಯುವ ವಿಡಿಯೊ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಈ ವಿಡಿಯೋ ಉತ್ತರಪ್ರದೇಶದ ಶಹಜಹಾನ್‌ಪುರದ್ದಾಗಿದೆ. ಐಎಎಸ್ ಅಧಿಕಾರಿಯನ್ನು ರಿಂಕು ಸಿಂಗ್ ಎಂದು ಗುರುತಿಸಲಾಗಿದೆ. ರಿಂಕು ಸಿಂಗ್ ತಹಸಿಲ್‌ನಲ್ಲಿ ಸ್ವಚ್ಛತಾ ಕೊರತೆಯ ಹೊಣೆಹೊತ್ತು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡ ಮೊದಲ ದಿನವೇ ಬಸ್ಕಿ ತೆಗೆದಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ, ಶಹಜಹಾನ್‌ಪುರದ ಪೊವಾಯನ್ ತಹಸಿಲ್‌ನ ಹೊಸ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿ ರಿಂಕು ಸಿಂಗ್ ಅಧಿಕಾರ ವಹಿಸಿಕೊಂಡಿದ್ದರು. ಅವರು ಪಟ್ಟಣದಲ್ಲಿ ಪರಿಶೀಲನೆಗೆ ತೆರಳಿದ್ದಾರೆ. ಈ ವೇಳೆ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿ ತೆರೆದ ಸ್ಥಳದಲ್ಲಿ ಮೂತ್ರ ವಿಸರ್ಜಿಸುತ್ತಿದ್ದವರಲ್ಲಿ ಬಸ್ಕಿ ತೆಗೆಸಿದ್ದಾರೆ.

ಇದಲ್ಲದೆ ಕೆಲವು ಶಾಲಾ ವಿದ್ಯಾರ್ಥಿಗಳ ಜೊತೆ ಪೋಷಕರು ಸುತ್ತಾಡುವುದನ್ನು ಗಮನಿಸಿ ಪೋಷಕರಿಗೆ ಬಸ್ಕಿ ತೆಗೆಯುವ ಶಿಕ್ಷೆಯನ್ನು ನೀಡಿದ್ದಾರೆ. ಅಧಿಕಾರಿಯ ಈ ಕ್ರಮವು ಕೆಲವು ವಕೀಲರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಯ ನಡೆಯನ್ನು ಖಂಡಿಸಿ ಕೆಲ ವಕೀಲರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ನಿರತ ವಕೀಲರನ್ನು ಭೇಟಿ ಮಾಡಿ ಅವರ ಜೊತೆ ರಿಂಕು ಸಿಂಗ್ ಮಾತುಕತೆಗೆ ಮುಂದ್ದಾಗಿದ್ದಾರೆ. ಸಾರ್ವಜನಿಕ ಸ್ವಚ್ಚತೆ ಕಾಪಾಡಲು ಈ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಅವರು ವಕೀಲರಿಗೆ ಉತ್ತರಿಸಿದ್ದರು. ಈ ವೇಳೆ ವಕೀಲರು ಕಚೇರಿಯ ಆವರಣ ಕೊಳಕಾಗಿದೆ ಅದಕ್ಕೆ ನೀವು ಬಸ್ಕಿ ತೆಗೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರಿಂಕು ಸಿಂಗ್, ಹೌದು ಅದು ನನ್ನ ತಪ್ಪು ಎಂದು ಬಸ್ಕಿ ತೆಗೆದಿದ್ದಾರೆ ಎಂದು ಹೇಳಲಾಗಿದೆ.

Edited By : Abhishek Kamoji
PublicNext

PublicNext

30/07/2025 05:08 pm

Cinque Terre

38.94 K

Cinque Terre

0

ಸಂಬಂಧಿತ ಸುದ್ದಿ