", "articleSection": "Politics,Crime,Law and Order,Viral", "image": { "@type": "ImageObject", "url": "https://prod.cdn.publicnext.com/s3fs-public/387839-1754034087-WhatsApp-Image-2025-08-01-at-1.09.06-PM-(1).jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕರ್ನೂಲು : ಆಂಧ್ರಪ್ರದೇಶದ ಸಚಿವ ಬಿ.ಸಿ.ಜನಾರ್ದನ ರೆಡ್ಡಿ ಅವರ ಸಹೋದರ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ರಾ...Read more" } ", "keywords": "Andhra minister's brother assaults police, temple incident, camera footage, police attack, minister's brother misbehavior, Andhra Pradesh news, law and order issue. ", "url": "https://dashboard.publicnext.com/node" } WATCH : ದೇವಸ್ಥಾನದಲ್ಲಿ ಕ್ಯಾಮೆರಾ ಮುಂದೆಯೇ ಆಂಧ್ರ ಸಚಿವರ ಸಹೋದರನ ದರ್ಪ- ಪೊಲೀಸ್​​ ಮೇಲೆ ಹಲ್ಲೆ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH : ದೇವಸ್ಥಾನದಲ್ಲಿ ಕ್ಯಾಮೆರಾ ಮುಂದೆಯೇ ಆಂಧ್ರ ಸಚಿವರ ಸಹೋದರನ ದರ್ಪ- ಪೊಲೀಸ್​​ ಮೇಲೆ ಹಲ್ಲೆ!

ಕರ್ನೂಲು : ಆಂಧ್ರಪ್ರದೇಶದ ಸಚಿವ ಬಿ.ಸಿ.ಜನಾರ್ದನ ರೆಡ್ಡಿ ಅವರ ಸಹೋದರ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಿವಾದ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನೂಲು ಜಿಲ್ಲೆಯ ಕೋಳಿಮಿಗುಂಡ್ಲಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಕಾನ್ಸ್ಟೇಬಲ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿರೋಧ ಪಕ್ಷವಾದ ವೈಎಸ್‌ಆರ್‌ಸಿಪಿಯಿಂದ ಟೀಕೆ ವ್ಯಕ್ತವಾಗಿದೆ.

ಟಿಡಿಪಿ ನಾಯಕರು ಮತ್ತು ಅವರ ಕುಟುಂಬ ಸದಸ್ಯರು ದುರಹಂಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದೆ. ಬುಧವಾರ ದೇವಾಲಯದ ಉದ್ಘಾಟನೆ ವೇಳೆ ಈ ಹಲ್ಲೆ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಾಜರಿದ್ದರು.

ಟಿಡಿಪಿ ನಾಯಕನ ಸಹೋದರ ದೇವಸ್ಥಾನಕ್ಕೆ ತಕ್ಷಣ ಪ್ರವೇಶಿಸುವಂತೆ ಒತ್ತಾಯಿಸಿದ್ದಾನೆ. ಆ ವೇಳೆ ಜನಸಂದಣಿಯನ್ನು ನಿರ್ವಹಿಸಲು ಕರ್ತವ್ಯದಲ್ಲಿದ್ದ ಜಶ್ವಂತ್ ಎಂದು ಗುರುತಿಸಲಾದ ಕಾನ್ಸ್ಟೇಬಲ್ ಜೊತೆ ತೀವ್ರ ವಾಗ್ವಾದ ನಡೆಸಿದರು, ಪೊಲೀಸ್ ಆತನ ಕೋರಿಕೆಯನ್ನು ನಿರಾಕರಿಸಿದಾಗ, ಮದನ್ ಆತನನ್ನು ಮಾತಿನಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಇನ್ನು ಪೊಲೀಸರು ಕೂಡ ತಿರುಗಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಟಿಡಿಪಿ ಸಚಿವರು ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೇ ಸಚಿವರ ಸಹೋದರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Edited By : Abhishek Kamoji
PublicNext

PublicNext

01/08/2025 01:11 pm

Cinque Terre

30.14 K

Cinque Terre

0

ಸಂಬಂಧಿತ ಸುದ್ದಿ