", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/235762-1753893896-Untitled-design-(45).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು : ಸಂಸತ್ತಿನಲ್ಲಿ ಇಂದು ರಾಜ್ಯದ ಗೊಬ್ಬರ ವಿಚಾರವಾಗಿ ರಾಜ್ಯ ಸರ್ಕಾರ ವಿತರಣೆಯಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಸಂಸದ ಸುಧಾಕರ್ ಆ...Read more" } ", "keywords": "Fertilizer shortage, Parliament debate, MP Sudhakar, false statement, Chaluvarayaswamy reaction, controversy in Parliament, agricultural issues, farmer concerns, government scrutiny", "url": "https://dashboard.publicnext.com/node" }
ಬೆಂಗಳೂರು : ಸಂಸತ್ತಿನಲ್ಲಿ ಇಂದು ರಾಜ್ಯದ ಗೊಬ್ಬರ ವಿಚಾರವಾಗಿ ರಾಜ್ಯ ಸರ್ಕಾರ ವಿತರಣೆಯಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಸಂಸದ ಸುಧಾಕರ್ ಆರೋಪಿಸಿದರು.
ಈ ಕುರಿತು ಟ್ವಿಟ್ ಮೂಲಕ ಸುಧಾಕರ್ ಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಸುಧಾಕರ್ ಅವರು ಸುಳ್ಳು ಹೇಳುವುದನ್ನು ಕಲಿಯಲೆಂದೇ ಬಿಜೆಪಿಗೆ ಸೇರಿದ್ದೋ? ಅಥವಾ ಬಿಜೆಪಿಗೆ ಸೇರಿದ ಬಳಿಕ ಸ್ವಾಭಾವಿಕವಾಗಿ ಸುಳ್ಳು ಹೇಳುವುದನ್ನು ಕಲಿತದ್ದೋ? ಎನ್ನುವುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಿ. 2025ರ ಏಪ್ರಿಲ್ 1ರಿಂದ ಈವರೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಬರಾಜು ಮಾಡಿರುವ ಯೂರಿಯಾ ರಸಗೊಬ್ಬರ 5,46,391 ಮೆಟ್ರಿಕ್ ಟನ್ ಮಾತ್ರ. ನಮ್ಮ ಜವಾಬ್ದಾರಿಯುತ ನಡವಳಿಕೆಯಿಂದ ರಾಜ್ಯದಲ್ಲಿ 346498.74 ಮೆಟ್ರಿಕ್ ಟನ್ ಹಳೆಯ ದಾಸ್ತಾನು ಇಟ್ಟುಕೊಂಡಿರುವ ಕಾರಣ ರಾಜ್ಯದ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಕೇಂದ್ರ ಸರ್ಕಾರದಿಂದ ಬರಬೆಕಾಗಿರುವ ಬಾಕಿ 136109.2 ಮೆಟ್ರಿಕ್ ಟನ್ ರಸಗೊಬ್ಬರವನ್ನು ಆದಷ್ಟು ಬೇಗ ಸರಬರಾಜು ಮಾಡುವಂತೆ ಒತ್ತಡ ಹೇರುವ ಬದಲು ಹೊಗಳುಬಟ್ಟರಂತೆ ಸಂಸತ್‌ನಲ್ಲಿ ಮಾತನಾಡಿರುವುದು ನಾಡಿನ ರೈತರಿಗೆ ಮಾಡಿದ ಅನ್ಯಾಯವಲ್ಲವೇ? ಈ ಮುಂಗಾರು ಹಂಗಾಮಿನಲ್ಲಿ 8.13 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನ ಕೇಂದ್ರ ಸರ್ಕಾರ ಸರಬರಾಜು ಮಾಡಿದೆ ಎನ್ನುವ ಹಸಿ ಸುಳ್ಳನ್ನು ಸಂಸತ್‌ನಲ್ಲಿ ಹೇಳುತ್ತಿರುವಿರಲ್ಲಾ... ಬಿಜೆಪಿಯ ಫೇಕ್ ನ್ಯೂಸ್ ಫ್ಯಾಕ್ಟರಿಯಿಂದ ಈ ಮಾಹಿತಿ ನಿಮಗೆ ಸಿಕ್ಕರುವುದೇ? ಉತ್ತರ ಕೊಡಿ ಎಂದು ಸುಧಾಕರ್ ವಿರುದ್ಧ ಕಿಡಿ ಕಾರಿದರು.
PublicNext
30/07/2025 10:16 pm