", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1753895424-bng5.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬೆಂಗಳೂರಲ್ಲಿ ರಾಹುಲ್ ಪಾದಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಬಿಜೆಪಿ...Read more" } ", "keywords": "Bengaluru news, Rahul Gandhi padayatra, constitutional institutions, BJP criticism, NDA candidate Vijayendra, Rahul Gandhi controversy.", "url": "https://dashboard.publicnext.com/node" }
ಬೆಂಗಳೂರು : ಬೆಂಗಳೂರಲ್ಲಿ ರಾಹುಲ್ ಪಾದಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವ್ರು 4ಅಥವಾ 5ನೇ ತಾರೀಖು ಬೆಂಗಳೂರಿನಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಪ್ರತಿಭಟನೆ ಮಾಡ್ತಾರಂತೆ ಅವ್ರು ಪ್ರತಿಭಟನೆ ಮಾಡ್ತಾರೊ ಧರಣಿ ಮಾಡ್ತಾರೋ ಗೊತ್ತಿಲ್ಲ ಆದ್ರೆ ರಾಹುಲ್ ಗಾಂಧಿ ಅವ್ರನ್ನ ನೋಡುದ್ರೆ ಆಯ್ಯೋ ಪಾಪ ಅನ್ನಿಸುತ್ತೆ.
ಕಾಂಗ್ರೆಸ್ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರದೆ ಹತಾಷರಾಗಿದ್ದಾರೆ ಹೀಗಾಗಿ ಹೊಸ ಕಪಟ ನಾಟಕವನ್ನ ಕರ್ನಾಟಕದಲ್ಲಿ ಮಾಡಲು ಪ್ರಯತ್ನ ಮಾಡ್ತಿದ್ದಾರೆ ಇದ್ರಿಂದ ಏನು ಸಾಧನೆ ಮಾಡಲು ಅಗಲ್ಲ. ಚುನಾವಣಾ ಆಯೋಗವನ್ನ ದುರುಪಯೋಗ ಪಡಿಸಿಕೊಂಡಿದ್ರೆ ಇವತ್ತು ವಿಪಕ್ಷದಲ್ಲಿ ಇರ್ತಿರ್ಲಿಲ್ಲ ಇದು ಮೂರ್ಖತನದ ಪರಮಾವಧಿ,ಮುರ್ಖರ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಸುಪ್ರೀಂ ಕೋರ್ಟ್,ಚುನಾವಣಾ ಆಯೋಗದ ಬಗ್ಗೆ ಅನುಮಾನ ಪಡ್ತಾರೆ 100%ಪ್ರೂಫ್ ಇದ್ರೆ ನ್ಯಾಯಾಲಯದಲ್ಲಿ ಸಲ್ಲಿಸಿ ಪ್ರಶ್ನೆ ಮಾಡಿ, ಹುಚ್ಚಾಟ ರಂಪಾಟ ಮಾಡ್ಕೊಂಡು ಸಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ ವ್ಯಕ್ತಪಡಿಸೋದು ಅಕ್ಷಮ್ಯ ಅಪರಾಧ ಅವರ ಹೋರಾಟಕ್ಕೆ ನಾವು ಯಾವ ರೀತಿಯ ಕಾರ್ಯತಂತ್ರ ಮಾಡ್ಬೇಕೋ ಮಾಡ್ತೀವಿ, ನಾವು ಸಿಎಂ ಮನೆ ಮುತ್ತಿಗೆ ಹಾಕ್ತೀವಿ ಅಂದ್ರೆ ಹೈಕೋರ್ಟ್ ಆರ್ಡರ್ ಕಾಪಿ ತೋರಿಸ್ತಾರೆ ಆದ್ರೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವ್ರು ಎಲ್ಲಿಂದ ಬೇಕಾದ್ರು ಮೆರವಣಿಗೆ ಮಾಡ್ಬೋದಾ ? ನಮಗೊಂದು ಕಾನೂನು,ಅವ್ರಿಗೊಂದು ಕಾನೂನಾ...? ರಾಹಲ್ ಗಾಂಧಿ ಅವ್ರಿಗೆ ಹತಾಷರಾಗಿ ದಿಕ್ಕು ತೋಚುತ್ತಿಲ್ಲ, ಯಾವುದೇ ರಾಜ್ಯಕ್ಕೆ ಹೋದ್ರು ಅವ್ರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಇಲ್ಲಿ ಸಿದ್ದರಾಮಯ್ಯ ಸರ್ಕಾರ ಇದೆ ಅಂತ ಹೋರಾಟ ಮಾಡಲು ಬರ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
PublicNext
30/07/2025 10:40 pm