", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/387839-1754117374-Untitled-design---2025-08-02T122314.493.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ʻಆಪರೇಷನ್‌ ಅಖಾಲ್‌ʼ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭದ್...Read more" } ", "keywords": "Operation Akhal, South Kashmir, Encounter, Terrorist killed, Kulgam district, Indian Army, Jammu and Kashmir Police, CRPF, Special Operations Group, Anti-terror operation. ", "url": "https://dashboard.publicnext.com/node" } ದಕ್ಷಿಣ ಕಾಶ್ಮೀರದಲ್ಲಿ ʻಆಪರೇಷನ್‌ ಅಖಾಲ್ʼ : ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣ ಕಾಶ್ಮೀರದಲ್ಲಿ ʻಆಪರೇಷನ್‌ ಅಖಾಲ್ʼ : ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ʻಆಪರೇಷನ್‌ ಅಖಾಲ್‌ʼ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆಗೀಡಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ʻಆಪರೇಷನ್‌ ಅಖಾಲ್‌ʼ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿತು.

ಅರಣ್ಯ ಪ್ರದೇಶ ಸುತ್ತುವರಿದು ಶೋಧ ಆರಂಭಿಸಿದ ಭದ್ರತಾ ಪಡೆಗಳು ಓರ್ವ ಉಗ್ರನನ್ನ ಹತ್ಯೆಗೈದಿವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಶೋಧ ನಡೆಯುತ್ತಿದ್ದಂತೆಯೇ ಉಗ್ರರು ಗುಂಡಿನ ದಾಳಿ ನಡೆಸಲು ಮುಂದಾದ್ರು. ಇದರಿಂದ ಯೋಧರು ಪ್ರತಿದಾಳಿಗೆ ಮುಂದಾದರು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರಿಯಿತು, ಗುಂಡಿನ ಸದ್ದು ಮೊಳಗುತ್ತಿದ್ದರಿಂದ ಸ್ಥಳೀಯರಿಗೂ ಈ ಪ್ರದೇಶದತ್ತ ಸುಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಈವರೆಗೆ ಓರ್ವ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ʻಆಪರೇಷನ್‌ ಅಖಾಲ್‌ʼ ಮುಂದುವರಿದಿದೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ ತಿಳಿಸಿದೆ.

Edited By : Abhishek Kamoji
PublicNext

PublicNext

02/08/2025 12:20 pm

Cinque Terre

20.94 K

Cinque Terre

2

ಸಂಬಂಧಿತ ಸುದ್ದಿ