ಮೀರತ್: 7 ತಿಂಗಳ ಗರ್ಭಿಣಿಯನ್ನ ಪತಿಯೇ ಕೊಲೆ ಮಾಡಿ ನಂತರ ಪೊಲೀಸರಿಗೆ ತಾನೇ ಮಾಹಿತಿ ನೀಡಿ ಪೊಲೀಸರು ಮನೆಗೆ ಬರುವ ವರೆಗೂ ಶವದ ಬಳಿದ ಕಾಯುತ್ತಿದ್ದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನ ಸಪ್ನಾ ಎಂದು ಗುರುತಿಸಲಾಗಿದ್ದು, ಕೌಟುಂಬಿಕ ಕಲಹಕ್ಕೆ ಪತಿ ರವಿಶಂಕರ್ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಜನವರಿಯಲ್ಲಿ ವಿವಾಹವಾದ ರವಿ ಮತ್ತು ಸಪ್ನಾ ನಡುವೆ ಇತ್ತೀಚೆಗೂ ಕುಟುಂಬ ಕಲಹ ನಡೆಯುತ್ತಿತ್ತು. ರಡು ದಿನಗಳ ಹಿಂದೆ ಜಗಳದ ಹಿನ್ನೆಲೆಯಲ್ಲಿ ಸಪ್ನಾ ತನ್ನ ತಂಗಿ ಪಿಂಕಿಯ ಮನೆಗೆ ಹೋಗಿದ್ದಳು. ಇಂದು ಬೆಳಿಗ್ಗೆ ರವಿ ಆಕೆಯ ತಂಗಿಯ ಮನೆಗೆ ಹೋಗಿ, ಮಾತನಾಡುವ ನೆಪದಲ್ಲಿ ಮೊದಲ ಮಹಡಿಗೆ ಕರೆದುಕೊಂಡು ಹೋಗಿ ಕೊಠಡಿಯಲ್ಲಿ ಬೀಗ ಹಾಕಿದ್ದ. ಬಳಿಕ ಮನೆಯೊಳಗಿಂದ ಕಿರುಚಾಟ ಕೇಳಿಬಂದಿದೆ. ಸಪ್ನಾ ಜೀವ ಉಳಿಸಿಕೊಳ್ಳಲು ಬೇಡಿಕೊಂಡಿದ್ದರೂ ರವಿ ಆಕೆಯನ್ನ ಗಂಟಲು ಸೀಳಿ ಕೊಲೆ ಮಾಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ರವಿಶಂಕರ್‌ನನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. ಸಪ್ನಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
PublicNext
02/08/2025 09:52 pm