ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಯುವಕನ ಸಾವು, ಕೊಲೆ ಶಂಕೆ

ಕೋಲಾರ: ಕೋಲಾರ ತಾಲ್ಲೂಕಿನ ಎಂ.ಮಲ್ಲಂಡಹಳ್ಳಿಯಲ್ಲಿ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಲು ಹೋಗಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಎಂ.ಮಲ್ಲಂಡಳ್ಳಿ ಗ್ರಾಮದ ಶ್ರೀಕಾಂತ್ (35) ಮೃತ ಯುವಕ. ಉಳುಮೆ ಮಾಡಲು ತೆರಳಿದ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಟ್ರಾಕ್ಟರ್ ಕೃಷಿ ಹೊಂಡಕ್ಕೆ ಬಿದ್ದಿದ್ದು, ಶವ ಹೊರಗೆ ಪತ್ತೆಯಾಗಿದೆ.

ಇತ್ತಿಚೆಗೆ ಕುಟುಂಬದಲ್ಲಿ ಜಮೀನು ವಿವಾದ ಇರುವ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವೇಮಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By :
PublicNext

PublicNext

26/08/2025 03:06 pm

Cinque Terre

12.14 K

Cinque Terre

0

ಸಂಬಂಧಿತ ಸುದ್ದಿ