", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1756282915-goni.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಆರ್. ಎಫ್ ರಸ್ತೆಯ ಗಿಡ ಗಂಟೆಗಳಿಂದ ಆವೃತವಾಗಿರುವ ಖಾಲಿ ನಿವೇಶನದಲ್ಲಿ ನವಜಾತ ಶಿಶು ಪತ್ತೆಯಾದ ಘಟನೆ ...Read more" } ", "keywords": "Mother abandons newborn, infant left in bushes, child abandonment case, maternal cruelty, newborn safety concerns.", "url": "https://dashboard.publicnext.com/node" }
ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಆರ್. ಎಫ್ ರಸ್ತೆಯ ಗಿಡ ಗಂಟೆಗಳಿಂದ ಆವೃತವಾಗಿರುವ ಖಾಲಿ ನಿವೇಶನದಲ್ಲಿ ನವಜಾತ ಶಿಶು ಪತ್ತೆಯಾದ ಘಟನೆ ನಡೆದಿದೆ.
ಅಶ್ವಥ್ ಕಟ್ಟೆ ಇರುವ ಖಾಲಿ ನಿವೇಶನದಲ್ಲಿ ಯಾರೋ ಆಗ ತಾನೆ ಜನಿಸಿದ ನವಜಾತ ಗಂಡು ಮಗುವನ್ನು ಗೋಣಿಚೀಲದಲ್ಲಿ ಸುತ್ತಿ ಬಿಸಾಡಿದ್ದಾರೆ. ರಸ್ತೆಯಲ್ಲಿ ಸಾಗುತ್ತಿದ್ದ ಸಾರ್ವಜನಿಕರು ಮಗು ಅಳು ಧ್ವನಿ ಕೇಳಿ ಹತ್ತಿರ ಹೋಗಿ ನೋಡಿದಾಗ ಚೀಲದಲ್ಲಿ ಸಿಕ್ಕಿರುವ ಶಿಶುವನ್ನು ಕಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸರು ಪರಿಶೀಲನೆ ನಡೆಸಿ ನವಜಾತ ಮಗುವನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳ ತಜ್ಞ. ಡಾ. ಹರೀಶ್ ಶಿಶುವಿನ ಆರೋಗ್ಯ ತಪಾಸಣೆ ನಡೆಸಿ, ಮಗುವಿನ ತೂಕ 2 ಕೆಜಿ 150 ಗ್ರಾಂ ಆಗಿದ್ದು, ಅರ್ಧಗಂಟೆ ಹಿಂದೆ ಮಗು ಜನಿಸಿದ್ದು, ಮಗು ಆರೋಗ್ಯಕರವಾಗಿದೆ ಎಂದು ತಿಳಿಸಿದ್ದಾರೆ.
PublicNext
27/08/2025 01:52 pm