", "articleSection": "Infrastructure,Accident", "image": { "@type": "ImageObject", "url": "https://prod.cdn.publicnext.com/s3fs-public/421698-1756535768-02~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಕಲೇಶಪುರ: ತಾಲ್ಲೂಕಿನ ಬಾಗೆಯ ಸರ್ಕಾರಿ ಶಾಲೆಯ ಪಕ್ಕದ ಮರಕ್ಕೆ ವಿದ್ಯುತ್ ತಂತಿ ತಗುಲುತ್ತಿರುವುದರಿಂದ ಮರದಲ್ಲಿ ನಿರಂತರವಾಗಿ ವಿದ್ಯುತ್ ಹರಿದು ...Read more" } ", "keywords": "Bage,government school,tree fire,electric fire,students' lives,risk,danger,local news,Karnataka,Hubli,fire accident", "url": "https://dashboard.publicnext.com/node" }
ಸಕಲೇಶಪುರ: ತಾಲ್ಲೂಕಿನ ಬಾಗೆಯ ಸರ್ಕಾರಿ ಶಾಲೆಯ ಪಕ್ಕದ ಮರಕ್ಕೆ ವಿದ್ಯುತ್ ತಂತಿ ತಗುಲುತ್ತಿರುವುದರಿಂದ ಮರದಲ್ಲಿ ನಿರಂತರವಾಗಿ ವಿದ್ಯುತ್ ಹರಿದು ಬೆಂಕಿ ಹೊತ್ತಿ ಉರಿಯುತ್ತಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಿತ್ಯ ಶಾಲೆಯ ಆವರಣದಲ್ಲಿ ಆಟವಾಡುವ, ಓಡಾಡುವ ನೂರಾರು ವಿದ್ಯಾರ್ಥಿಗಳ ಜೀವಕ್ಕೆ ಯಾವ ಕ್ಷಣದಲ್ಲಾದರೂ ಅಪಾಯ ಎದುರಾಗಬಹುದಾದ ಭೀತಿ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಮಲೆನಾಡು ರಕ್ಷಣಾ ಸೇನೆಯ ತಾಲ್ಲೂಕು ಅಧ್ಯಕ್ಷ ಮಂಜುದೇವ್ ಹುಲ್ಲಹಳ್ಳಿ, ಉಪಾಧ್ಯಕ್ಷ ರುತೇಶ್ ಹಾಗೂ ಬಾಗೆ ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಅವರು ಮಾತನಾಡಿ, “ಅಪಘಾತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದು ಇಲಾಖೆಗಳ ಬಲಹೀನತೆ. ಜೀವ ಹಾನಿ ಆಗುವ ಮುನ್ನವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ನಿಜವಾದ ಹೊಣೆಗಾರಿಕೆ” ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಮಲೆನಾಡಿನ ಜನತೆಗೆ ವಿದ್ಯುತ್ ತಂತಿಗಳಿಂದಾಗುವ ಅನಾಹುತಗಳು ಹೊಸದೇನಲ್ಲ. ಹಿಂದೆ ಮನುಷ್ಯರು, ಕಾಡುಪ್ರಾಣಿಗಳು ಹಾಗೂ ಸಾಕುಪ್ರಾಣಿಗಳು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ದುರ್ಘಟನೆಗಳು ದಾಖಲಾಗಿದ್ದು, ಬಾಗೆಯ ಶಾಲೆಯ ಈ ಘಟನೆ ಮತ್ತೊಂದು ದುರ್ಘಟನೆಗೆ ಮುನ್ನುಡಿಯಾಗಬಾರದೆಂಬ ಆತಂಕ ಈಗ ಹೆಚ್ಚಾಗಿದೆ.
ಮಕ್ಕಳ ಸುರಕ್ಷತೆ ಮೊದಲು. ಸಂಬಂಧಪಟ್ಟ ವಿದ್ಯುತ್ ಇಲಾಖೆ ಮತ್ತು ಅರಣ್ಯ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು. ಅನಾಹುತ ಸಂಭವಿಸಿದ ಬಳಿಕದ ಪಶ್ಚಾತ್ತಾಪಕ್ಕಿಂತ ಮುನ್ನೆಚ್ಚರಿಕೆ ಮುಖ್ಯ” ಎಂದು ಒತ್ತಾಯಿಸಿದ್ದಾರೆ.
Kshetra Samachara
30/08/2025 12:06 pm