", "articleSection": "Infrastructure,Nature,Government", "image": { "@type": "ImageObject", "url": "https://prod.cdn.publicnext.com/s3fs-public/405356-1757236732-kad.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಕಲೇಶಪುರ: ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ದಿನೇದಿನೇ ತೀವ್ರಗೊಳ್ಳುತ್ತಿದ್ದು, ರೈತರ ಜೀವನದಲ...Read more" } ", "keywords": "wild elephant attack, Markahalli news, crop damage, farmer's life and livelihood at risk, house damaged by elephant, elephant-human conflict, Karnataka wildlife news, farmer's struggle, crop protection measures, wildlife conservation issues.", "url": "https://dashboard.publicnext.com/node" } ಮರ್ಕಹಳ್ಳಿಯಲ್ಲಿ ಕಾಡಾನೆ ದಾಳಿ – ಮನೆಯ ಹಂಚು ಧ್ವಂಸ ರೈತರ ಜೀವ-ಬೆಳೆ ಎರಡೂ ಅಪಾಯದಲ್ಲಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರ್ಕಹಳ್ಳಿಯಲ್ಲಿ ಕಾಡಾನೆ ದಾಳಿ – ಮನೆಯ ಹಂಚು ಧ್ವಂಸ ರೈತರ ಜೀವ-ಬೆಳೆ ಎರಡೂ ಅಪಾಯದಲ್ಲಿ

ಸಕಲೇಶಪುರ: ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ದಿನೇದಿನೇ ತೀವ್ರಗೊಳ್ಳುತ್ತಿದ್ದು, ರೈತರ ಜೀವನದಲ್ಲಿ ಭಯ ಮತ್ತು ನಷ್ಟದ ನೆರಳು ಆವರಿಸಿದೆ. ಪ್ರತಿದಿನವೂ ಕಾಫಿ ತೋಟಗಳು ಹಾಗೂ ಬೆಳೆದ ಗದ್ದೆಗಳಿಗೆ ನುಗ್ಗುತ್ತಿರುವ ಕಾಡಾನೆಗಳು ಬೆಳೆಗಳನ್ನು ನಾಶಮಾಡುತ್ತಿರುವುದರ ಜೊತೆಗೆ ಈಗ ಮನೆಗಳ ಮೇಲೂ ದಾಳಿ ಆರಂಭಿಸಿದ್ದವೆಂಬುದೇ ಆತಂಕಕಾರಿ ಸಂಗತಿ.

ಮರ್ಕಹಳ್ಳಿಯ ಗೌರಮ್ಮ ಹರೀಶ್ ಅವರ ಮನೆಗೆ ತಡರಾತ್ರಿ ಕಾಡಾನೆ ನುಗ್ಗಿ ಹಂಚುಗಳನ್ನೇ ಎಳೆದು ಧ್ವಂಸಮಾಡಿದ ಘಟನೆ ಗ್ರಾಮಸ್ಥರಲ್ಲಿ ಭೀತಿಯನ್ನುಂಟುಮಾಡಿದೆ. ಮನೆಯವರು ಭಯದಿಂದ ಇಡೀ ರಾತ್ರಿ ನಿದ್ದೆಯಿಲ್ಲದೆ ಕಳವಳದಿಂದ ಕಳೆಯುವ ಪರಿಸ್ಥಿತಿ ಎದುರಿಸಬೇಕಾಯಿತು.

ಈ ರೀತಿಯ ದಾಳಿಗಳಿಂದ ರೈತರು ಬೆಳೆದ ಬೆಳೆಗಳ ಜೊತೆಗೆ ತಮ್ಮ ಪ್ರಾಣವನ್ನೇ ಉಳಿಸಿಕೊಳ್ಳಲು ಹೋರಾಡುವಂತಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಬೇಕಾದಷ್ಟು ಸೌಲಭ್ಯಗಳು– ವಾಹನಗಳು, ಪಟಾಕಿಗಳು ಇಲ್ಲದ ಕಾರಣ ಕಾಡಾನೆಗಳನ್ನು ಕಾಡಿನತ್ತ ಓಡಿಸುವಲ್ಲಿ ವಿಫಲರಾಗುತ್ತಿದ್ದಾರೆ.

“ಪ್ರತಿ ದಿನವೂ ಹಾವಳಿ ಹೆಚ್ಚಾಗುತ್ತಿದೆ. ರೈತರ ಬೆಳೆ ಹಾಗೂ ಜೀವಕ್ಕೆ ಭಾರೀ ಅಪಾಯ ಎದುರಾಗಿದೆ. ಅರಣ್ಯ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷ ದರ್ಶನ್ ಮರ್ಜನಹಳ್ಳಿ ಆಗ್ರಹಿಸಿದ್ದಾರೆ.

Edited By : Vinayak Patil
Kshetra Samachara

Kshetra Samachara

07/09/2025 02:48 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ