", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/474799-1757330252-yutube1920.01_27_40_15.Still3733.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೇಲೂರು: ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ 17 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಆಹ್ವಾನ ಪತ್...Read more" } ", "keywords": "belur, mla hk suresh, beo controversy, phone call allegation, drunken behavior, political clash, belur news, kannada headline ", "url": "https://dashboard.publicnext.com/node" } ಬೇಲೂರು: ನೀನು ಜಾಸ್ತಿ ಮಾತನಾಡಬೇಡ, ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ - ಬಿಇಓ ವಿರುದ್ಧ ಹರಿಹಾಯ್ದ ಶಾಸಕ ಎಚ್.ಕೆ.ಸುರೇಶ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಲೂರು: ನೀನು ಜಾಸ್ತಿ ಮಾತನಾಡಬೇಡ, ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ - ಬಿಇಓ ವಿರುದ್ಧ ಹರಿಹಾಯ್ದ ಶಾಸಕ ಎಚ್.ಕೆ.ಸುರೇಶ್

ಬೇಲೂರು: ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ 17 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇರಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಶಾಸಕ ಎಚ್.ಕೆ. ಸುರೇಶ್ ಕೆಂಡಾಮಂಡಲರಾಗಿದ್ದಾರೆ. ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಇಂದು ಆಯೋಜನೆಗೊಂಡಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಚ್.ಕೆ. ಸುರೇಶ್ ಹಾಗೂ ಬಿಇಓ ರಾಜೇಗೌಡರ ನಡುವೆ ತೀವ್ರ ವಾಗ್ವಾದ ನಡೆಯಿತು.

ವೇದಿಕೆಯಲ್ಲಿ ಶಾಸಕರು ಬಿಇಓ ವಿರುದ್ಧ “ರಾತ್ರಿಯೆಲ್ಲಾ ಕುಡಿದು ಫೋನ್ ಮಾಡ್ತಿಯಾ? ಶಿಕ್ಷಕರಿಗೆ ಚಿತ್ರಹಿಂಸೆ ಕೊಡ್ತಿಯಾ?" ಎಂದು ಹರಿಹಾಯ್ದರು. ಇದಕ್ಕೆ ಪ್ರತಿಯಾಗಿ ಬಿಇಓ ರಾಜೇಗೌಡ "ಯಾರು ಹೇಳೋರು ನಿಮಗೆ ಕರೀರಿ ಅವರನ್ನು” ಎಂದು ಪ್ರತಿಕ್ರಿಯಿಸಿದರು.

ಇನ್ನು ಮುಂದೆ ಶಾಸಕರು "ನಾನು ಈ ಬಿಇಓ ಪಕ್ಕ ಕೂರಲ್ಲ” ಎಂದು ಹಠ ಹಿಡಿದು, ವೇದಿಕೆಯಿಂದಲೇ ಹೊರಟರು. ಬಿಇಓ ಸಹ "ನಾನು ಎದ್ದೇಳಲ್ಲಾ ನಾನು ಈ ತಾಲ್ಲೂಕಿನ ಬಿಇಓ" ಎಂದು ಪ್ರತಿಕ್ರಿಯಿಸಿದ ಹಿನ್ನಲೆಯಲ್ಲಿ ಕೆಲಕಾಲ ವಾತಾವರಣ ಗದ್ದಲಮಯವಾಯಿತು.

Edited By :
PublicNext

PublicNext

08/09/2025 04:47 pm

Cinque Terre

8.87 K

Cinque Terre

0

ಸಂಬಂಧಿತ ಸುದ್ದಿ