", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/235762-1757084141-WhatsApp-Image-2025-09-05-at-11.37.27-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಸಕಲೇಶಪುರ: ಮಲೆನಾಡು ಭಾಗದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ, ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಒದಗಿಸುವ ಹೋರಾಟ, ಮತ್ತು ...Read more" } ", "keywords": "Sakaleshpur Malenadu Rakshana Sene, Kaudahalli new unit inauguration, Malenadu Rakshana Sene branch, Sakaleshpur latest news, Kaudahalli local news, Malenadu protection force Karnataka, weekly new unit opening, Sakaleshpur organization news, Karnataka social organization, Malenadu Rakshana Sene updates", "url": "https://dashboard.publicnext.com/node" } ಸಕಲೇಶಪುರ: ವಾರಕ್ಕೊಂದು ಹೊಸ ಘಟಕ - ಕೌಡಹಳ್ಳಿಯಲ್ಲಿ ಮಲೆನಾಡು ರಕ್ಷಣಾ ಸೇನೆ ಘಟಕ ಉದ್ಘಾಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ವಾರಕ್ಕೊಂದು ಹೊಸ ಘಟಕ - ಕೌಡಹಳ್ಳಿಯಲ್ಲಿ ಮಲೆನಾಡು ರಕ್ಷಣಾ ಸೇನೆ ಘಟಕ ಉದ್ಘಾಟನೆ

ಸಕಲೇಶಪುರ: ಮಲೆನಾಡು ಭಾಗದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ, ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಒದಗಿಸುವ ಹೋರಾಟ, ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ಧ ಶಕ್ತಿಯಾಗಿ ನಿಂತು ಜನರ ಆಸರೆಯಾಗಿ ಬೆಳೆದಿರುವ ಮಲೆನಾಡು ರಕ್ಷಣಾ ಸೇನೆ, ಇದೀಗ ವಾರಕ್ಕೊಂದು ಹೊಸ ಘಟಕ ಸ್ಥಾಪನೆ ಮಾಡುವ ಪಣತೊಟ್ಟು ಮುಂದುವರೆದಿದೆ.

ಈ ಪರಂಪರೆಯ ಭಾಗವಾಗಿ ಸಕಲೇಶಪುರ ತಾಲೂಕಿನ ಕೌಡಹಳ್ಳಿ ಗ್ರಾಮದಲ್ಲಿ ಹೊಸ ಘಟಕವನ್ನು ಉದ್ಘಾಟಿಸಲಾಯಿತು.

ಮಲೆನಾಡು ರಕ್ಷಣಾ ಸೇನೆಯ ತಾಲ್ಲೂಕು ಅಧ್ಯಕ್ಷರಾದ ಮಂಜುದೇವ್ ಹುಲ್ಲಹಳ್ಳಿ ಅವರು ಉದ್ಘಾಟನೆ ನೆರವೇರಿಸಿ, ಘಟಕದ ಅಧ್ಯಕ್ಷರಾಗಿ ಗಿರೀಶ್ ರವರನ್ನು ಆಯ್ಕೆಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಕನ್ನಡ ಭಾವುಟ ಹಸ್ತಾಂತರಿಸಿ ಸಂಘಟನೆಯ ಜವಾಬ್ದಾರಿಯನ್ನು ವಹಿಸಲಾಯಿತು.

ಘಟಕ ಉದ್ಘಾಟನೆಯ ಸಂದರ್ಭದಲ್ಲಿ ಕೌಡಹಳ್ಳಿ ಹಾಗೂ ಸುತ್ತಮುತ್ತಲಿನ ಹಲವರು ಮಲೆನಾಡು ರಕ್ಷಣಾ ಸೇನೆಗೆ ಸೇರಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಮಂಜುದೇವ್

"ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಧ್ವನಿ ಎತ್ತುವವರ ವಿರುದ್ಧ ಅಪಹಾಸ್ಯ, ಕೀಳರಿಮೆ, ರಾಜಕೀಯ ಲಾಭ ಈ ಎಲ್ಲವನ್ನು ಬದಿಗಿಟ್ಟು, ನಾಡಿಗೆ ಉಪಯುಕ್ತವಾಗುವ ಕೆಲಸ ಮಾಡುವುದು ಇಂದಿನ ಅಗತ್ಯ. ಅಭಿವೃದ್ಧಿ ಸಾಧ್ಯವಾಗುವುದಕ್ಕೆ ಒಂದೇ ಮಂತ್ರ ಎಲ್ಲರೂ ಒಂದಾಗಿ ಶ್ರಮಿಸಬೇಕು," ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಹೊಸಕೊಪ್ಪಲು, ತಾಲ್ಲೂಕು ಉಪಾಧ್ಯಕ್ಷ ತೇಜೇಶ್, ತಾಲ್ಲೂಕು ಉಸ್ತುವಾರಿ ಚಂದ್ರಶೇಖರ್, ಮತ್ತಿತರ ಪದಾಧಿಕಾರಿಗಳು ಹಾಗೂ ಕೌಡಹಳ್ಳಿ ಗ್ರಾಮಸ್ಥರು ಹಾಜರಿದ್ದರು.

Edited By : Nagaraj Tulugeri
Kshetra Samachara

Kshetra Samachara

05/09/2025 08:26 pm

Cinque Terre

1.22 K

Cinque Terre

0

ಸಂಬಂಧಿತ ಸುದ್ದಿ