ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಳಲಹಳ್ಳಿ ಗ್ರಾಮಕ್ಕೆ ಬ್ಯಾಂಕ್ ಶಾಖೆ ಮತ್ತು ಎ.ಟಿ.ಎಂ ಬೇಡಿಕೆ

ಸಕಲೇಶಪುರ: ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಹಳ್ಳಿಗಳು, 90ಕ್ಕೂ ಹೆಚ್ಚು ಮಹಿಳಾ ಹಾಗೂ ಇತರೆ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 5000 ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ದಿನನಿತ್ಯದ ಹಣಕಾಸು ವಹಿವಾಟಿಗೆ ಹತ್ತೂರು ಮತ್ತು ಶುಕ್ರವಾರಸಂತೆ ಬ್ಯಾಂಕ್‌ಗಳ ಮೇಲೆ ಗ್ರಾಮಸ್ಥರು ಅವಲಂಬಿಸಬೇಕಾಗಿರುವ ಕಾರಣ, ಸ್ಥಳೀಯರಿಗೆ ಅಸೌಲಭ್ಯ ಉಂಟಾಗಿದೆ.

ಗ್ರಾಮದಲ್ಲಿ ಕಾಫಿ ಬೆಳೆಗಾರರು, ಪ್ರವಾಸಿ ತಾಣಗಳು, ರೆಸಾರ್ಟ್‌ಗಳು ಹಾಗೂ ವಾರದ ಸಂತೆ ಇರುವುದರಿಂದ ಹಣಕಾಸಿನ ವ್ಯವಹಾರ ಹೆಚ್ಚಿದ್ದು, ಜನರ ಅನುಕೂಲಕ್ಕಾಗಿ ಬ್ಯಾಂಕ್ ಶಾಖೆ ಹಾಗೂ ಎ.ಟಿ.ಎಂ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ತಾಲ್ಲೂಕು ಉಪ ವಿಭಾಗಾಧಿಕಾರಿ ರಾಜೇಶ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಳಲಹಳ್ಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ಅರುಣ್ ಗೌಡ, ಖಜಾಂಚಿ ಹೂವಣ್ಣ ಗೌಡ, ಜಂಟಿ ಕಾರ್ಯದರ್ಶಿ ಗಿರೀಶ್ ಚಿನ್ನಹಳ್ಳಿ, ಮಾಜಿ ಅಧ್ಯಕ್ಷ ಬಾಲು ಚಿನ್ನಹಳ್ಳಿ, ಕುರಭತ್ತೂರು ಸಂಘದ ಅಧ್ಯಕ್ಷ ದರ್ಶನ್ ಪ್ರಸಾದ್ ಹಾಗೂ ಮಾಜಿ ಅಧ್ಯಕ್ಷ ಬಿ.ಟಿ. ಕಿರಣ್ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

09/09/2025 11:03 am

Cinque Terre

840

Cinque Terre

0

ಸಂಬಂಧಿತ ಸುದ್ದಿ