", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/474798-1757155100-HASANA.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಕಲೇಶಪುರ: ಆನೆಮಹಲ್–ಜಾನಕೆರಿಗೆ ರಸ್ತೆಯ ಬದಿಯಲ್ಲಿ ಪ್ರತಿದಿನ ಯಾರೋ ಪ್ಲಾಸ್ಟಿಕ್ ಚೀಲಗಳು, ಹಾಸಿಗೆ, ಮಾಂಸ, ಅನ್ನ, ವೈದ್ಯಕೀಯ ಬಾಟಲಿಗಳು ಸೇರಿದ...Read more" } ", "keywords": "Malenadu environmental issue, garbage problem Malenadu, waste management Karnataka, Malenadu greenery under threat, Karnataka eco issues, environmental damage Malenadu, garbage dumping Western Ghats, Malenadu forest pollution, green cover loss Karnataka, waste crisis Malenadu, Malenadu ecological threat, Karnataka environmental news, save Malenadu campaign, Karnataka pollution issues", "url": "https://dashboard.publicnext.com/node" }
ಸಕಲೇಶಪುರ: ಆನೆಮಹಲ್–ಜಾನಕೆರಿಗೆ ರಸ್ತೆಯ ಬದಿಯಲ್ಲಿ ಪ್ರತಿದಿನ ಯಾರೋ ಪ್ಲಾಸ್ಟಿಕ್ ಚೀಲಗಳು, ಹಾಸಿಗೆ, ಮಾಂಸ, ಅನ್ನ, ವೈದ್ಯಕೀಯ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ತಂದು ಕಸ ಸುರಿಯುತ್ತಿದ್ದಾರೆ. ಇದರ ಪರಿಣಾಮವಾಗಿ ರಸ್ತೆ ಬದಿಯಲ್ಲಿ ಕಸದ ರಾಶಿ ಹೆಚ್ಚುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.
ಈ ದುರ್ವಾಸನೆ ಹಾಗೂ ಕಸದ ನಡುವೆ ನಾಯಿಗಳು, ದನ-ಕರಿಗಳು ಆಹಾರ ಹುಡುಕುತ್ತಿದ್ದು, ಪ್ಲಾಸ್ಟಿಕ್ ತಿನ್ನುವುದರಿಂದ ಅವುಗಳ ಜೀವಕ್ಕೆ ಅಪಾಯ ಉಂಟಾಗಿದೆ. ಮಲೆನಾಡಿನ ಹಸಿರು ಪರಿಸರ ಕಲುಷಿತವಾಗುವ ಭೀತಿ ವ್ಯಕ್ತವಾಗಿದೆ.
ಗ್ರಾಮ ಪಂಚಾಯಿತಿ "ಇಲ್ಲಿ ಕಸ ಹಾಕಬೇಡಿ" ಎಂಬ ಫಲಕ ಹಾಕಿದ್ದರೂ, ನಿಯಮ ಉಲ್ಲಂಘನೆ ಮುಂದುವರಿಯುತ್ತಿದೆ. ಈ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಗಗನ್ ಗೌಡ, ನಗರ ಅಧ್ಯಕ್ಷ ಪ್ರಜ್ವಲ್ ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
“ಈ ಸಮಸ್ಯೆಗೆ ಪರಿಹಾರ ಕಾಣದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ,” ಎಂದು ಕರವೇ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತ ಘಟಕದ ಅಧ್ಯಕ್ಷ ವಸಂತ್ ಬೊಮ್ಮನಕೆರೆ, ಯುವ ಘಟಕ ಅಧ್ಯಕ್ಷ ಯಶಸ್, ಆಟೋ ಘಟಕ ಅಧ್ಯಕ್ಷ ಸ್ವಾಮಿ, ಉಪಾಧ್ಯಕ್ಷ ಷಣ್ಮುಖ, ಕಾರ್ಯಕರ್ತರು ದಿವಾಕರ್ ಮತ್ತು ಪ್ರವೀಣ್ ಉಪಸ್ಥಿತರಿದ್ದರು.
PublicNext
06/09/2025 04:08 pm