ಸಕಲೇಶಪುರ: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಜನರ ನಿರ್ಲಕ್ಷ್ಯ ವರ್ತನೆ ಆತಂಕ ಮೂಡಿಸಿದೆ. ಬೈರಾ ಎಂದು ಗುರುತಿಸಲ್ಪಟ್ಟ ಕಾಡಾನೆ ರಸ್ತೆ ಬದಿಯಲ್ಲಿ ಸಂಚರಿಸುತ್ತಿರುವಾಗ, ಕೆಲವರು ಅದನ್ನು ಹತ್ತಿರದಿಂದ ನೋಡಲು ಮುಂದಾಗಿರುವುದು ಸುರಕ್ಷತಾ ದೃಷ್ಟಿಯಿಂದ ಚಿಂತಾಜನಕವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದು, ಘಾಟ್ ರಸ್ತೆಯಲ್ಲಿ ನಿಧಾನವಾಗಿ ಮತ್ತು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಿದ್ದಾರೆ. ವಾಹನ ಸವಾರರು ಅನವಶ್ಯಕವಾಗಿ ಕೆಳಗಡೆ ಇಳಿದು ಕಾಡಾನೆಗೆ ಹಾನಿ ಮಾಡುವಂತ ಶಬ್ದ ಅಥವಾ ಚಟುವಟಿಕೆ ಮಾಡದೇ, ಶಾಂತವಾಗಿರಬೇಕು ಎಂದು ಮನವಿ ಮಾಡಿದ್ದಾರೆ.
ಕಾಡಾನೆ ಹತ್ತಿರದಲ್ಲಿದ್ದರೂ ಕೆಲವರು ಅತಿಯಾದ ಕುತೂಹಲದಿಂದ ಹತ್ತಿರ ಹೋಗಿ ಮೊಬೈಲ್‌ನಲ್ಲಿ ಚಿತ್ರ, ವೀಡಿಯೊ ತೆಗೆಯುತ್ತಿರುವುದು ಪರಿಸ್ಥಿತಿಯನ್ನು ಅಪಾಯಕ್ಕೆ ದೂಡುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಜನರಿಗೆ ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
PublicNext
07/09/2025 04:41 pm