", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/474798-1756470397-atanka.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಕಲೇಶಪುರ: ಹಳ್ಳಿಬೈಲು ಗ್ರಾಮದಲ್ಲಿ ನಡೆದ ಘಟನೆಯೊಂದು ಸಿನಿಮಾ ದೃಶ್ಯಕ್ಕೇ ಸರಿಸಾಟಿಯಾಯಿತು! ಒಂಟಿ ಸಲಗವೊಂದು ಬೃಹತ್ ಬೈನೆ ಮರವನ್ನು ನೆಲಕ್ಕುರು...Read more" } ", "keywords": "Sakleshpur news, wild elephant escape, lone tusker Karnataka, forest staff bravery, Karnataka forest department, Sakleshpur elephant incident, heavy rain Sakleshpur, elephant escape news, Karnataka wildlife news, tusker escapes forest, monsoon wildlife incidents, brave forest officers, Sakleshpur forest staff", "url": "https://dashboard.publicnext.com/node" }
ಸಕಲೇಶಪುರ: ಹಳ್ಳಿಬೈಲು ಗ್ರಾಮದಲ್ಲಿ ನಡೆದ ಘಟನೆಯೊಂದು ಸಿನಿಮಾ ದೃಶ್ಯಕ್ಕೇ ಸರಿಸಾಟಿಯಾಯಿತು! ಒಂಟಿ ಸಲಗವೊಂದು ಬೃಹತ್ ಬೈನೆ ಮರವನ್ನು ನೆಲಕ್ಕುರುಳಿಸಿ ರಸ್ತೆ ತಡೆದು ವಾಹನ ಸವಾರರನ್ನು ತಲ್ಲಣಗೊಳಿಸಿತು. ಕೆಲವೇ ಕ್ಷಣಗಳಲ್ಲಿ ಆತಂಕ ಆವರಿಸಿದಾಗ, ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿ ಅಖಿಲ, ಮುರುಗನ್, ಅಭಿಷೇಕ್ ವೇಗವಾಗಿ ಸ್ಥಳಕ್ಕೆ ಧಾವಿಸಿ ಸಾಹಸ ಮೆರೆದರು.
ಪಟಾಕಿ ಸಿಡಿಸಿ ಸಲಗವನ್ನು ಕಾಡಿನೊಳಗೆ ಓಡಿಸಿದ ಬಳಿಕ ಸುರಿಯುತ್ತಿದ್ದ ಮಳೆಯ್ನೂ ಲೆಕ್ಕಿಸದೆ ಸಿಬ್ಬಂದಿ, ಮರವನ್ನು ತೆರವುಗೊಳಿಸಿದರು. ಈ ಸಾಹಸಮಯ ದೃಶ್ಯವನ್ನು ಕಂಡ ಜನರು, ಈ ಅರಣ್ಯ ರಕ್ಷಕರು ನಿಜವಾದ ವೀರರು ಎಂದು ಹೊಗಳಿದರು. ಜನರ ಜೀವ, ಆಸ್ತಿ ರಕ್ಷಿಸಲು ನಿರಂತರ ಹೋರಾಡುವ ವನಪಾಲಕರಿಗೆ ಸರ್ಕಾರವು ಸೂಕ್ತ ಗೌರವ ನೀಡಬೇಕು ಎಂಬ ಜನಾಭಿಪ್ರಾಯ ಗಟ್ಟಿಯಾಗಿ ಕೇಳಿಬಂತು.
PublicNext
29/08/2025 05:56 pm