", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/286525-1756560297-WhatsApp-Image-2025-08-30-at-6.54.50-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಂಜನಗೂಡು: ಪತ್ರಕರ್ತರ ಹಿತ ಕಾಯಲು ನಾನು ಬದ್ಧನಾಗಿರುತ್ತೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದ್ದಾರೆ. ನಂಜನಗೂಡು ನಗರದ ಶ್ರಾವಣ ಕಲ...Read more" } ", "keywords": "Nanjanagudu, Press Day celebration, journalism awards, Shivaratri Swamiji Media Award, media recognition, journalist community", "url": "https://dashboard.publicnext.com/node" } ನಂಜನಗೂಡಿನಲ್ಲಿ ಪತ್ರಿಕಾ ದಿನಾಚರಣೆ: ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡಿನಲ್ಲಿ ಪತ್ರಿಕಾ ದಿನಾಚರಣೆ: ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

ನಂಜನಗೂಡು: ಪತ್ರಕರ್ತರ ಹಿತ ಕಾಯಲು ನಾನು ಬದ್ಧನಾಗಿರುತ್ತೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದ್ದಾರೆ.

ನಂಜನಗೂಡು ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಂಜನಗೂಡು ತಾಲ್ಲೂಕು ಪತ್ರಕರ್ತರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಮತ್ತು ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಬೆಳಗುದರ ಮೂಲಕ ಉದ್ಘಾಟಿಸಿದರು.

2024ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿಯನ್ನು ಪ್ರತಿನಿಧಿ ದಿನಪತ್ರಿಕೆಯ ವರದಿಗಾರರಾದ ಪ್ರತಾಪ್ ಟಿ. ಕೋಡಿನರಸಿಪುರ ರವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ಅವರು, ಯಾವುದೇ ರಜೆಯಿಲ್ಲದೆ ಒತ್ತಡದಲ್ಲಿ ಪತ್ರಕರ್ತರು ಪ್ರತಿನಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಪತ್ರಕರ್ತರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ತಾಲ್ಲೂಕಿನಲ್ಲಿ ನಿವೇಶನ ನೀಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಆನ್‌ಲೈನ್ ಮೂಲಕ ಸುದ್ದಿ ಓದುವ ಪ್ರವೃತ್ತಿ ಹೆಚ್ಚುತ್ತಿದೆ. ತಂತ್ರಜ್ಞಾನ ಮುಂದುವರಿಯುತ್ತಿದೆ. ಪತ್ರಕರ್ತರು ತಿದ್ದುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ನಂಜನಗೂಡಿನ ನೆಲದಲ್ಲಿ ಮೊಟ್ಟಮೊದಲ ಮಹಿಳಾ ಪತ್ರಕರ್ತೆ ತಿರುಮಲಾಂಬ ಇದ್ದರು ಎಂಬ ಹೆಗ್ಗಳಿಕೆ ಇದೆ. ಸಮಾಜದಲ್ಲಿ ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸರ್ಕಾರ ಮತ್ತು ಸಮಾಜದ ಸೇತುವೆಯಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ನಗರಸಭಾಧ್ಯಕ್ಷ ಶ್ರೀಕಂಠ ಸ್ವಾಮಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹುಲ್ಲಹಳ್ಳಿ ಮೋಹನ್, ಜೆಎಸ್ಎಸ್ ಮಹಾ ವಿದ್ಯಾಪೀಠದ ನಿರ್ದೇಶಕ ಏನ್ ಎಂ ಶಿವಶಂಕರಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್. ಡಿ ರಂಗಸ್ವಾಮಿ, ಉಪಾಧ್ಯಕ್ಷ ಜಿ.ಎಂ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ದೀಪಕ್ ಪ್ರಸಾದ್, ಸಹ ಕಾರ್ಯದರ್ಶಿ ಟಿ.ಕೆ ಬಸವರಾಜು, ಖಜಾಂಚಿ ಭಾಗ್ಯರಾಜ್, ಕಾರ್ಯಕಾರಿಣಿ ಸದಸ್ಯರಾದ ಮಧು, ಕೆಂಪೇಗೌಡ, ಹುಲ್ಲಹಳ್ಳಿ ಶ್ರೀನಿವಾಸ್, ಪ್ರಕಾಶ್, ಹೆಡಿಯಾಲ ಮಹದೇವಸ್ವಾಮಿ, ಕೃಷ್ಣಪ್ಪ ಗೌಡ ಸೇರಿದಂತೆ ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Edited By : Shivu K
PublicNext

PublicNext

30/08/2025 06:55 pm

Cinque Terre

16.05 K

Cinque Terre

0

ಸಂಬಂಧಿತ ಸುದ್ದಿ