", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/286525-1757335558-WhatsApp-Image-2025-09-08-at-6.15.52-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಂಜನಗೂಡು : ನಂಜನಗೂಡು ನಗರದ ಆರ್.ಪಿ ರಸ್ತೆ ಮತ್ತು ಎಂಜಿ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಮಾಲೀಕರು ಫುಟ್ ಪಾತ್ ರಸ್ತೆಯನ್ನು ಒತ್ತುವರ...Read more" } ", "keywords": "Nanjanagudu clearance drive, municipality officials, traffic police, encroachment removal, road safety, urban development, street vendors relocation, public space management, Nanjanagudu news, civic body initiatives", "url": "https://dashboard.publicnext.com/node" }
ನಂಜನಗೂಡು : ನಂಜನಗೂಡು ನಗರದ ಆರ್.ಪಿ ರಸ್ತೆ ಮತ್ತು ಎಂಜಿ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಮಾಲೀಕರು ಫುಟ್ ಪಾತ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ರು. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಗರಸಭಾ ಆಯುಕ್ತರಾದ ವಿಜಯ್ ಮತ್ತು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಕಾಂತ ಕೋಳಿ ನೇತೃತ್ವದಲ್ಲಿ ನಂಜನಗೂಡು ನಗರದ ರಾಷ್ಟ್ರಪತಿ ರಸ್ತೆಯಲ್ಲಿ ಅನಧಿಕೃತವಾಗಿ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳ ಮೇಲೆ ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ತೆರವು ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ನಂಜನಗೂಡು ನಗರದ ಆರ್ ಪಿ ಮತ್ತು ಎಂ ಜಿ ಹಾಗೂ ಮಾರ್ಕೆಟ್ ರಸ್ತೆ ಸೇರಿದಂತೆ ಸಾಕಷ್ಟು ಭಾಗಗಳಲ್ಲಿ ಫುಟ್ ಪಾತ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು. ಎಚ್ಚೆತ್ತ ನಂಜನಗೂಡು ಪಟ್ಟಣದ ಸಂಚಾರಿ ಪೊಲೀಸರು ಮತ್ತು ನಗರಸಭೆ ಆಯುಕ್ತರಾದ ವಿಜಯ್ ಮತ್ತೆ ಸಿಬ್ಬಂದಿಗಳು ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಿ ಫುಟ್ ಪಾತ್ ರಸ್ತೆಯನ್ನು ಆವರಿಸಿಕೊಂಡಿದ್ದ ಅಂಗಡಿ ಮುಂಭಾಗದ ಸೆಲ್ಟರ್ ಗಳನ್ನು ತೆರವು ಮಾಡಿಸಿ ಕಾರ್ಯಾಚರಣೆ ನಡೆಸಿದರು.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಫುಟ್ ಪಾತ್ ರಸ್ತೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ವ್ಯಾಪಾರಸ್ಥರಿಗೆ ಸಂಚಾರಿ ಪೊಲೀಸ್ ನಿಯಮ 92 (ಡಿ) ಕರ್ನಾಟಕ ಪೊಲೀಸ್ ಆಕ್ಟ್ ರಿತ್ಯಾ ಸಾಕಷ್ಟು ಒತ್ತುವರಿದಾರರನ್ನು ಗುರುತಿಸಿ ನೋಟಿಸ್ ನೀಡಿ ಖಡಕ್ಕಾಗಿ ಎಚ್ಚರಿಕೆ ನೀಡಿ ತೆರವು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಏನಾದರೂ ಇದೇ ರೀತಿ ಅನಧಿಕೃತವಾಗಿ ಫುಟ್ ಪಾತ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡಲ್ಲಿ ಕಠಿಣವಾದ ಪ್ರಕರಣ ದಾಖಲು ಮಾಡಲು ಮುಂದಾಗಬೇಕಾಗುತ್ತದೆ ಎಂದು ಸಂಚಾರಿ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ನಗರಸಭಾ ಆಯುಕ್ತರಾದ ವಿಜಯ್ ಪರಿಸರ ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಮೈತ್ರಿಯ ದೇವಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಕೃಷ್ಣಕಾಂತ ಕೋಳಿ ಸೇರಿದಂತೆ ಪೊಲೀಸ್ ಮತ್ತು ನಗರಸಭಾ ಅಧಿಕಾರಿಗಳು ಹಾಜರಿದ್ದರು.
PublicNext
08/09/2025 06:17 pm