ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಗಜಪಡೆಗೆ ತಾಲೀಮು ಆರಂಭವಾಗಿ ಇದೀಗ ತೂಕದ ತಾಲೀಮು ಸಹ ಶುರುವಾಗಿದೆ. ಈ ಮಧ್ಯೆ ಕಳೆದ ಎರಡು ದಿನಗಳಿಂದ ಬೆಳಗಿನ ಗಜಪಡೆ ತಾಲೀಮಿಗೆ ಬ್ರೇಕ್ ಬಿದ್ದಿದೆ.
ಹೌದು, ಕಳೆದ ಎರಡು ದಿನಗಳಿಂದ ಬೆಳಗಿನ ಗಜಪಡೆ ತಾಲೀಮು ರದ್ದಾಗಿದ್ದು, ಇದೀಗಾ ಸೋಮವಾರ ಮತ್ತು ಮಂಗಳವಾರ ಮತ್ತೇ ಎರಡು ದಿನ ತಾಲೀಮಿಗೆ ಬ್ರೇಕ್ ಬಿದ್ದಿದೆ. ಇದರಲ್ಲಿ ಸೋಮವಾರ ಬೆಳಗ್ಗೆ ಹಾಗೂ ಮಂಗಳವಾರ ಸಂಜೆ ತಾಲೀಮಿಗೆ ಬ್ರೇಕ್ ಬಿದ್ದಿದ್ದು, ಇದ್ರಿಂದ ಬೆಳಗಿನ ಗಜಪಡೆಯ ಆನೆಗಳ ವಾಕ್ ನೋಡುವರಿಗೆ ನಿರಾಸೆಯಾಗಿದೆ. ಅಲ್ಲದೆ ಅಧಿಕೃತವಾಗಿ ಇದನ್ನ ವಾಟ್ಸ್ ಅಪ್ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಈ ರದ್ದು ಯಾಕಾಗಿ ಎಂದು ಮಾತ್ರ ತಿಳಿಸಿಲ್ಲ
PublicNext
07/09/2025 10:17 pm