", "articleSection": "Politics,Crime,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1756801480-08~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು: ಧರ್ಮಸ್ಥಳ ಪ್ರಕರಣ ಎನ್. ಐ. ಎ ತನಿಖೆ ಮಾಡಿಸಿ ಅಂತ ಹೇಳ್ತಾರೆ. ಅವರು ಪೊಲೀಸರು ಇವರು ಪೊಲೀಸರು. ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ...Read more" } ", "keywords": "Mysore,BJP,Dharma Yatra,political yatra,CM Siddaramaiah,political news,Karnataka,Dharmasthala Chalo,JDS", "url": "https://dashboard.publicnext.com/node" } ಮೈಸೂರು: ಬಿಜೆಪಿಯವರದ್ದು ಧರ್ಮಯಾತ್ರೆ ಅಲ್ಲ ರಾಜಕೀಯ ಯಾತ್ರೆ – ಸಿಎಂ ಸಿದ್ದರಾಮಯ್ಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಬಿಜೆಪಿಯವರದ್ದು ಧರ್ಮಯಾತ್ರೆ ಅಲ್ಲ ರಾಜಕೀಯ ಯಾತ್ರೆ – ಸಿಎಂ ಸಿದ್ದರಾಮಯ್ಯ

ಮೈಸೂರು: ಧರ್ಮಸ್ಥಳ ಪ್ರಕರಣ ಎನ್. ಐ. ಎ ತನಿಖೆ ಮಾಡಿಸಿ ಅಂತ ಹೇಳ್ತಾರೆ. ಅವರು ಪೊಲೀಸರು ಇವರು ಪೊಲೀಸರು. ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ ಇಲ್ವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ರು. ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಮೊದಲು ತನಿಖೆ ಮಾಡಿ ಅಂತ ಹೇಳಲೇ ಇಲ್ಲ. ಡೆಡ್ ಬಾಡಿ ಸಿಗದೆ ಹೋದ ಮೇಲೆ ಹೇಳಿಕೆ ಕೊಡಲು ಶುರು ಮಾಡಿದ್ರು. ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಅವರ ಮೇಲೆ ಆರೋಪವಿದೆ.ಅವ್ರೆ ಸ್ವಾಗತ ಮಾಡಿದ್ದಾರೆ. ನಾವು ತನಿಖೆ ಮಾಡಿಸುತ್ತಿದ್ದೇವೆ ಎಂದರು.

ವಿದೇಶದಿಂದ ಫಂಡಿಂಗ್ ಬಂದಿದೆ ಎಂಬ ವಿಚಾರವಾಗಿ ದುಡ್ಡು ಬಂದಿರೋದು ಬಿಜೆಪಿಗೆ. ಇಷ್ಟೆಲ್ಲಾ ಮಾಡ್ತಿದ್ದಾರೆ ಎಲ್ಲಿಂದ ದುಡ್ಡು ಬರುತ್ತೆ? ಯಾರು ಕೊಡೋರು ಇವರಿಗೆ? ಎಲ್ಲಾ ವಿಚಾರಗಳನ್ನು ರಾಜಕೀಯ ಮಾಡಬಾರದು. ವಿರೋಧ ಪಕ್ಷ ಟೀಕೆ ಮಾಡಲಿ. ಇವ್ರು ರಾಜಕೀಯಕ್ಕೆ ಮಾಡ್ತಿದ್ದಾರೆ ಎಂದರು.

ಸೌಜನ್ಯ ಕೇಸ್ ರೀ ಓಪನ್ ಆಗತ್ತಾ ಎಂಬ ವಿಚಾರವಾಗಿ, ಸಿಬಿಐ ತನಿಖೆ ಮಾಡಿ ವರದಿ ಕೊಟ್ಟಿದೆ. ಸುಪ್ರೀಂ ಕೋರ್ಟ್ಗೆ ಅವರ ಕುಟುಂಬ ಹೋಗಲಿ. ಸೌಜನ್ಯ ಕೇಸ್ ಆರೋಪ ಬಂದಿರೋದು ವೀರೇಂದ್ರ ಹೆಗಡೆ ಕುಟುಂಬದ ಮೇಲೆ. ಬಿಜೆಪಿ ಅವ್ರು ಯಾರ ಪರ? ಕೋರ್ಟ್ ಗೆ ಹೋಗೋದು ಬಿಡೋದು ಸೌಜನ್ಯ ಕುಟುಂಬದವರಿಗೆ ಸೇರಿದ್ದು. ಬಿಜೆಪಿ ಅವ್ರು ಒಂದು ಕಡೆ ವೀರೇಂದ್ರ ಹೆಗಡೆಗೆ ಜೈ ಅಂತಾರೆ. ಇನ್ನೊಂದು ಕಡೆ ಸೌಜನ್ಯ ಪರ ಅಂತಾರೆ. ಇದರಲ್ಲೂ ರಾಜಕೀಯ ಮಾಡ್ತಾರೆ ಎಂದರು.

ಇನ್ನು ಧರ್ಮಸ್ಥಳ ವಿಚಾರ ಸದನದಲ್ಲಿ ಚರ್ಚೆ ಆಯ್ತು . ಅಶೋಕ್ ಚರ್ಚೆ ಮಾಡಿದ್ದ, ಸುನಿಲ್ ಕುಮಾರ್ ಕೂಡ ಮಾತನಾಡಿದರು. ಅಲ್ಲಿ ಒಂದು ಇಲ್ಲಿ ಒಂದು ಮಾತನಾಡುತ್ತಾರೆ. ಸೌಜನ್ಯ ಪರ ಲೇಡಿ ಬಂದಿರೋ ವಿಚಾರ ಕೋರ್ಟ್ ಗೆ ಸತ್ಯ ಹೇಳಬೇಕಿತ್ತು. ಇಷ್ಟು ವರ್ಷ ಏನು ಮಾಡ್ತಿದ್ರು? ಸಾಕ್ಷಿ ಸತ್ಯ ಗೊತ್ತಿದ್ರೂ ಯಾಕೆ ಸುಮ್ಮನಿದ್ರು?ಆಕೆ ಯಾರ ಸಂಸ್ಥೆಯಲ್ಲಾದರೂ ಇರಲಿ ಎಂದರು.

ಭಾನು ಮುಸ್ತಾಕ್ ದಸರಾ ಉದ್ಘಾಟನೆ ವಿಚಾರವಾಗಿ, ಮಿರ್ಜಾ ಇಸ್ಮಾಯಿಲ್ ಮಹಾರಾಜರು ಅಂಬಾರಿ ಮೇಲೆ ಕೂರಿಸಿ ಮೆರವಣಿಗೆ ಮಾಡಿದರು. ಅವಾಗ ಆರ್.ಎಸ್.ಎಸ್ ಬಿಜೆಪಿ ಅವ್ರು ಎಲ್ಲಿ ಹೋಗಿದ್ರು? ನಿಸ್ಸಾರ ಅಹಮದ್ ದಸರಾ ಉದ್ಘಾಟನೆ ಮಾಡಿದ್ರು ಅವಾಗ ಎಲ್ಲಿ ಹೋಗಿದ್ರು? ಅರಿಶಿನ ಕುಂಕುಮ ಬಗ್ಗೆ ಮಾತನಾಡಿರೋದು ಬೇರೆ.ಕನ್ನಡದ ಮೇಲೆ ಪ್ರೀತಿ ಇಲ್ಲದೆ ಪುಸ್ತಕ ಬರೀತಾರಾ? ಆಕೆ ಮುಸ್ಲಿಂ ಲೇಡಿ ಕನ್ನಡದಲ್ಲಿ ಬರೆದಿದ್ದಾರೆ. ಈಗ ಬೇರೆ ಧರ್ಮದವರು ಅದು ಮಾಡಿ ಇದು ಮಾಡಿ ಅನ್ನೋಕಾಗತ್ತಾ? ದನದ ಮಾಂಸ ತಿಂದು ಬಂದು ಉದ್ಘಾಟನೆ ಮಾಡ್ತಾರೆ ಅನ್ನೋ ವಿಚಾರ ಯಾರು ನೋಡಿದ್ರು? ಸುಮ್ಮನೆ ಹೇಳ್ತಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು.

Edited By : Suman K
PublicNext

PublicNext

02/09/2025 01:54 pm

Cinque Terre

20.62 K

Cinque Terre

1

ಸಂಬಂಧಿತ ಸುದ್ದಿ